ಉಗ್ರ ಸಂಘಟನೆಯನ್ನು ಮುನ್ನಡೆಸುತ್ತಿದ್ದ ಅನ್ವರ್ ಸಾವನ್ನು ಒಪ್ಪಿಕೊಂಡ ಜೈಶ್
ನವದೆಹಲಿ: ಸಂಸತ್ ಮೇಲಿನ ಉಗ್ರ ದಾಳಿಯ ರೂವಾರಿ ಜೈಶ್ ಇ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಮಸೂದ್ ಅಜರ್‌ನ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದಾನೆ.
ಮಸೂದ್ ಅಜರ್‌ನ ಬಳಿಕ ಜೈಶ್ ಇ ಮೊಹಮ್ಮದ್ ಸಂಘಟನೆಯ ಪ್ರಮುಖ ನಾಯಕನಾಗಿದ್ದ ಅನ್ವರ್‌ನ ಸಾವನ್ನು ಜೈಶ್ ಅಧಿಕೃತವಾಗಿ ದೃಢಪಡಿಸಿದೆ. ಬಹವಾಲ್ಪುರದ ಜಾಮಿಯಾ ಮಸ್ಜಿದ್ ಉಸ್ಮಾನ ವಾಲಿಯಲ್ಲಿ ಸೋಮವಾರ ತಡರಾತ್ರಿ ಅನ್ವರ್‌ನ ಅಂತ್ಯಕ್ರಿಯೆ ನೇರವೇರಿದೆ ಎಂದು ತನ್ನ ಅಧಿಕೃತ ಚಾನೆಲ್‌ನಲ್ಲಿ ಜೈಶ್ ಹೇಳಿಕೊಂಡಿದೆ. ಆದರೆ ಸಾವಿಗೆ ಏನು ಕಾರಣ ಎಂಬ ಬಗ್ಗೆ ವಿವರ ನೀಡಿಲ್ಲ. ಅನ್ವರ್‌ನ ಅನಾರೋಗ್ಯದ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದರಿಂದ ಅನ್ವರ್‌ನ ಸಾವು ನಿಗೂಢವಾಗಿ ಉಳಿದಿದೆ.
2001ರ ಸಂಸತ್ ಮೇಲಣ ಭಯೋತ್ಪಾದಕ ದಾಳಿ, 2016ರ ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿ, 2019ರ ಪುಲ್ವಾಮ ದಾಳಿ ಸೇರಿದಂತೆ ಭಾರತದಲ್ಲಿ ಜೈಶ್ ನಡೆಸಿದ ಅನೇಕ ದಾಳಿಗಳಲ್ಲಿ ಅನ್ವರ್‌ನ ಕೈವಾಡವಿತ್ತು. ಕಳೆದ ಭಾರತೀಯ ವಾಯುಪಡೆ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಬಹವಾಲಪುರದಲ್ಲಿರುವ ಜೈಶ್‌ನ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಲಾಗಿತ್ತು. ಈ ದಾಳಿಯಲ್ಲಿ ಮಸೂದ್ ಅಜರ್‌ನ ಹತ್ತಿರದ ಸಂಬಂಧಿಕರ ಸಹಿತ ಅನೇಕ ಉಗ್ರರು ಸತ್ತಿದ್ದರು. ಪಹಲ್ಗಾಂ ದಾಳಿಗೆ ಪ್ರಿಕಾರವಾಗಿ ಭಾರತ ಆಪರೇಷನ್ ಸಿಂದೂರ ನಡೆಸಿತ್ತು.

























