ಭಾಗವತ ಮಹೇಶ ಕನ್ಯಾಡಿ ಅವರಿಗೆ ಗೌರವಾರ್ಪಣೆ

ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವರ್ಷಾವಧಿ ಜಾತ್ರೆ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಸಂಯೋಜನೆಯಲ್ಲಿ ಜರಗಿದ ಶ್ರೀ ಮಹಾಭಾರತ ಸರಣಿ ತಾಳ ಮದ್ದಳೆ ಸಂದರ್ಭದಲ್ಲಿ ಯಕ್ಷ ಭಾರತಿ ರಿ.ಕನ್ಯಾಡಿ ಸಂಚಾಲಕ, ಭಾಗವತ ಮಹೇಶ್ ಕನ್ಯಾಡಿ ಇವರನ್ನು ಗೌರವಿಸಲಾಯಿತು.

ದೇವಳದ ಅರ್ಚಕರಾದ ಸುರೇಶ ಪುತ್ತೂರಾಯ,  ಹಿಮ್ಮೇಳ ಕಲಾವಿದ ಲಕ್ಷ್ಮೀಶ ಅಮ್ಮಣ್ಣಾಯ ಇಳoತಿಲ , ನಿವೃತ ಉಪನ್ಯಾಸಕ-ಅರ್ಥಧಾರಿ ಗಣರಾಜ ಕುಂಬ್ಳೆ, ಯಕ್ಷ ಭಾರತಿ ಖಜಾಂಜಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟಿನ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ,ಕಾರ್ಯದರ್ಶಿ ಶ್ರೀಪತಿ ಭಟ್,ಸಂಜೀವ ಪಾರೆಂಕಿ, ಜಯರಾಮ ಬಲ್ಯ, ಶ್ರೀಧರ ಎಸ್ಪಿ ಸುರತ್ಕಲ್ , ಭಾಗವತ ನಿತೀಶ್ ಮನೋಳಿತ್ತಾಯ ಉಪಸ್ಥಿತರಿದ್ದರು.

ಸತೀಶ್ ಶಿರ್ಲಾಲು ಸ್ವಾಗತಿಸಿ ಪೂರ್ಣಿಮಾ ಪುತ್ತೂರಾಯ ವಂದಿಸಿದರು.























































 
 
error: Content is protected !!
Scroll to Top