ಎಂಟು ವರ್ಷದಿಂದ ತಲೆಮರೆಸಿಕೊಂಡಿದ್ದ ಕೊಲೆ ಅಪರಾಧಿ ಪತ್ತೆ

ಬಸವರಾಜು ಎಂದು ಹೆಸರು ಬದಲಿಸಿಕೊಂಡಿದ್ದ ಸುಳ್ಯದ ಅಜೀಜ್‌

ಮಂಗಳೂರು: ಎಂಟು ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ಹೆಸರು ಬದಲಿಸಿ ಆಂಧ್ರಪ್ರದೇಶದಲ್ಲಿ ಅಡಗಿದ್ದ ಸುಳ್ಯದ ಮೋಸ್ಟ್ ವಾಂಟೆಡ್ ಅಪರಾಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆ ಪ್ರಕರಣದಲ್ಲಿ ಶಿಕ್ಷೆಯಾದ ಬಳಿಕ ತಲೆಮರೆಸಿಕೊಂಡಿದ್ದ ಸುಳ್ಯ ಅಜ್ಜಾವರ ನಿವಾಸಿ ಎನ್.ಎಂ. ಅಜೀಜ್‌ ಎಂಬಾತನನ್ನು ಆಂಧ್ರದ ಚಿತ್ತೂರು ಜೈಲಿನಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ.

​ಕಡಬ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣವೊಂದರಲ್ಲಿ ಈತನಿಗೆ ಹೈಕೋರ್ಟ್ ಹತ್ತು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು. 2018ರಲ್ಲಿ ಕೇರಳ ಪೊಲೀಸರು ಈತನನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದಾಗ ಸಿನಿಮೀಯ ಮಾದರಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ.

​ಪರಾರಿಯಾದ ಬಳಿಕ ಅಜೀಜ್ ತನ್ನ ಗುರುತು ಬದಲಿಸಿಕೊಂಡಿದ್ದ. ಕಲಬುರಗಿ ಜಿಲ್ಲೆಯ ಜೇವರ್ಗಿಯ ಬಸವರಾಜು ಎಂಬ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಆಂಧ್ರಪ್ರದೇಶದಲ್ಲಿ ಆಶ್ರಯ ಪಡೆದಿದ್ದ. ತನ್ನ ಹಳೆಯ ಚಹರೆ ಮರೆಮಾಚಿ ಹೊಸ ಜೀವನ ನಡೆಸುತ್ತಿದ್ದರೂ ಪೊಲೀಸರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.























































 
 

​ದಕ್ಷಿಣ ಕನ್ನಡ ಪೊಲೀಸರು ಸತತವಾಗಿ ನಡೆಸಿದ ತಾಂತ್ರಿಕ ತನಿಖೆ ಮತ್ತು ಜಾಲದ ಬೆನ್ನುಹತ್ತಿದಾಗ, ಈ ‘ಬಸವರಾಜು’ ಹೆಸರಿನ ವ್ಯಕ್ತಿ ತಲೆಮರೆಸಿಕೊಂಡಿದ್ದ ಅಜೀಜ್ ಎಂಬುದು ದೃಢಪಟ್ಟಿದೆ. ಆಂಧ್ರದ ಚಿತ್ತೂರು ಜೈಲಿನಲ್ಲಿರುವ ಈತನನ್ನು ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದು ಮಂಗಳೂರಿಗೆ ಕರೆತರಲು ಪೊಲೀಸರು ಸಜ್ಜಾಗಿದ್ದಾರೆ.

error: Content is protected !!
Scroll to Top