ಪತಂಜಲಿ ಯೋಗ ಶಾಖೆಯಲ್ಲಿ ಶ್ರೀರಾಮನವಮಿ ಆಚರಣೆ

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ, ಕೇಂದ್ರ ಕಚೇರಿ ತುಮಕೂರು, ಮಂಗಳೂರು ವಿಭಾಗ ಪುತ್ತೂರು ತಾಲೂಕು ಕಳಿಯ ಶಾಖೆಯಲ್ಲಿ ಶ್ರೀರಾಮ ರಾಮನವಮಿ ಆಚರಣೆ ಮಾಡಲಾಯಿತು.

ಗೇರುಕಟ್ಟೆ ಕ್ಷೀರ ಸಂಗಮ ಸಭಾಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಶ್ರೀರಾಮ ಭಜನೆ, ಸ್ತೋತ್ರ ಪಾರಾಯಣವನ್ನು ಯೋಗ ಬಂಧುಗಳು ನಡೆಸಿಕೊಟ್ಟರು. ಭಾರತಿ ಎಂ. ಎಲ್., ಅರುಣಾ, ಪದ್ಮಲತಾ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.

ಹಿರಿಯ ಯೋಗ ಬಂಧು ದಿವಾಕರ ಆಚಾರ್ಯ ಗೇರುಕಟ್ಟೆ, ಶ್ರೀ ರಾಮಚಂದ್ರನ ಆದರ್ಶಗುಣಗಳ ಬಗ್ಗೆ ಬೌದ್ಧಿಕ ನೀಡಿ ಮರ್ಯಾದ ಪುರುಷೋತ್ತಮ ಶ್ರೀ ರಾಮಚಂದ್ರನ ಆದರ್ಶ ಗುಣಗಳ ಪಾಲನೆಯನ್ನು ಮಾಡುವುದರಿಂದ ಶಾಂತಿ ಮತ್ತು ನೆಮ್ಮದಿಯನ್ನು ಕಾಣಬಹುದೆಂದು ತಿಳಿಸಿದರು.























































 
 

ಅಶೋಕ ಆಚಾರ್ಯ ಪ್ರಸಾದ ವ್ಯವಸ್ಥೆ ಮಾಡಿದರು .ವರದಿ ಪ್ರಮುಖ ಕೇಶವ ಪೂಜಾರಿ ಸ್ವಾಗತಿಸಿ, ಸತೀಶ್ ಭಂಡಾರಿನಾಳ ವಂದಿಸಿದರು.

error: Content is protected !!
Scroll to Top