ಕಲ್ಬುರ್ಗಿ: ಪುರಾತನ ದೇಗುಲವೊಂದು ದುಷ್ಕರ್ಮಿಗಳ ನಿಧಿಯಾಸೆಗೆ ಧ್ವಂಸವಾದ ಘಟನೆ ಅಫ್ಜಲಪುರದ ಬಡದಾಳ ಗ್ರಾಮದಲ್ಲಿ ನಡೆದಿದೆ.
ಬಡದಾಳದ ಬಸವಣ್ಣ ದೇಗುಲದಲ್ಲಿ ನಿಧಿ ಇದೆ ಎಂದು ದುಷ್ಕರ್ಮಿಗಳು ರಾತ್ರಿ ವೇಳೆ ಶೋಧ ಕಾರ್ಯ ನಡೆಸಿದ್ದಾರೆ. ದೇಗುಲದ ಒಳಕ್ಕೆ ನುಗ್ಗಿ ಶಿವಲಿಂಗ ಸೇರಿದಂತೆ ದೇವರ ಇನ್ನಿತರ ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದ ಹಾಗೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ಇಂತಹ ಕೃತ್ಯ ಎಸಗಿದ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದ್ದಾರೆ.

























