ಡೀಸಿಲ್ 10 ರೂ.; ಪೆಟ್ರೋಲು 3 ರೂ. ಕಡಿತ : ಯುದ್ಧ ಕಾಲದಲ್ಲಿ ಜನರಿಗೆ ಲಾಭವಾಗುವ ನಡೆ
ನವದೆಹಲಿ: ಮಧ್ಯಪ್ರಾಚ್ಯದ ಯುದ್ಧದ ಪರಿಸ್ಥಿತಿಯಿಂದಾಗಿ ದೇಶದಲ್ಲಿ ಪೆಟ್ರೋಲು ಮತ್ತು ಡೀಸಿಲ್ ಬೆಲೆ ಹೆಚ್ಚಾಗಬಹುದು ಎಂಬ ಆತಂಕ ಇರುವಾಗಲೇ ಇದಕ್ಕೆ ವ್ಯತಿರಿಕ್ತವಾಗಿ ಕೆಂದ್ರ ಸರ್ಕಾರ ಈ ಎರಡು ಇಂಧನಗಳ ಬೆಲೆಯನ್ನು ಕಡಿಮೆಗೊಳಿಸಿ ಜನರನ್ನು ತುಸು ನಿರಾಳರನ್ನಾಗಿ ಮಾಡಿದೆ. ಪೆಟ್ರೋಲು ಮೇಲೆ ಅಬಕಾರಿ ಸುಂಕವನ್ನು 3 ರೂ. ಇಳಿಸಲಾಗಿದೆ. ಅದೇ ರೀತಿ ಡೀಸಿಲ್ ಮೇಲಿನ ಅಬಕಾರಿ ಸುಂಕ ಬರೋಬ್ಬರಿ 10 ರೂ. ಕಡಿಮೆಗೊಳಿಸಲಾಗಿದೆ.
ಪೆಟ್ರೋಲು ಮೇಲಿನ ಅಬಕಾರಿ ಸುಂಕ 13ರಿಂದ 10 ರೂ.ಗೆ ಮತ್ತು ಡೀಸಿಲ್ ಮೇಲಿನ ಅಬಕಾರಿ ಸುಂಕ 10 ರೂ.ನಿಂದ ಶೂನ್ಯಕ್ಕಿಳಿದಿದೆ. ಜಗತ್ತಿನಾದ್ಯಂತ ಇಂಧನಕ್ಕಾಗಿ ಹಾಹಾಕಾರ ಇರುವಾಗ ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರ ಅತ್ಯಂತ ಮಹತ್ವಾದ್ದಾಗಿದೆ.
ಯುದ್ಧದಿಂದಾಗಿ ಕಚ್ಚಾತೈಲ ಬೆಲೆ ಏರಿಕೆಯಾಗುತ್ತಿತ್ತು. ಆದರೆ ಯುದ್ಧ ಶಮನವಾಗುವ ಲಕ್ಷಣ ಗೋಚರಿಸಿದ ಹಿನ್ನೆಲೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗುತ್ತಿದ್ದು, ಹೀಗಾಗಿ ಕೇಂದ್ರ ಸರ್ಕಾರ ಪೆಟ್ರೋಲು ಮತ್ತು ಡೀಎಲ್ ಮೇಲಿನ ಅಬಕಾರಿ ಸುಂಕವನ್ನು ಗಮನಾರ್ಹವಾಗಿ ಇಳಿಸಿದೆ. ತೈಲ ಕಂಪನಿಗಳು ಅಬಕಾರಿ ಸುಂಕ ಕಡಿತದ ಲಾಭವನ್ನು ಗ್ರಾಹಕರಿಗೆ ನೀಡಲು ತೀರ್ಮಾನಿಸಿದರೆ ಪೆಟ್ರೋಲು ಪಂಪ್‌ಗಳಲ್ಲಿ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ.

























