ಮಡಿಕೇರಿಯಲ್ಲಿ ‌ಕಾಣಿಸಿಕೊಂಡ ಹುಲಿ: ಸಾರ್ವಜನಿಕರಲ್ಲಿ ಮನೆಮಾಡಿದ ಆತಂಕ

ಮಡಿಕೇರಿ: ಇಬ್ನಿಳವಾಡಿಯಲ್ಲಿ ಹುಲಿ ಸಂಚಾರ ಕಂಡು ಬಂದಿದ್ದು,‌ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.

ಮಡಿಕೇರಿಯ ಹೊರವಲಯದ ಎರಡು ಕಿ. ಮೀ. ದೂರದ ಪ್ರದೇಶದಲ್ಲಿ ಹುಲಿ ಚಲನವಲನ ಕಂಡುಬಂದಿರುವುದಾಗಿದೆ. ಪೊನ್ನಚೆಟ್ಟಿರ ಸಂದೀಪ್ ಎಂಬವರ ತೋಟದಲ್ಲಿ ಹುಲಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಅರಣ್ಯ ಇಲಾಖೆಗೂ ಈ‌ ಕುರಿತು ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.























































 
 

ಪ್ರದೇಶದ ಏಳೆಂಟು ಕಿ.ಮೀ ವ್ಯಾಪ್ತಿಯಲ್ಲಿ ಹುಲಿಯನ್ನು ಹೋಲುವ ಪ್ರಾಣಿಯ ಓಡಾಟದ ಬಗ್ಗೆ ಮಾಹಿತಿ ಇತ್ತು. ಅದು ಹುಲಿಯೋ, ಪೆರ್ಪಣವೋ ಎಂಬ ಗೊಂದಲವೂ ಇತ್ತು. ಇದೀಗ ಅದು ಹುಲಿ ಎಂಬುದು ಖಚಿತವಾಗಿದ್ದು, ಅದನ್ನು ಸೆರೆಹಿಡಿಯಲು ಸರ್ಕಾರದ ಅನುಮತಿ ಕೋರಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಹೇಳಿದ್ದಾರೆ.

ಜಿಲ್ಲಾ ಕೇಂದ್ರದ ಸನಿಹದಲ್ಲೇ ಹುಲಿಯ ಓಡಾಟ ಕಂಡು ಬಂದಿರುವುದರಿಂದ ಕೂಡಲೇ ಕಾರ್ಯಾಚರಣೆ ನಡೆಸುವಂತೆ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಅವರು ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆಯೂ ಮನವಿ ಮಾಡಿದ್ದಾರೆ.

error: Content is protected !!
Scroll to Top