ಟಿಪ್ಪರ್ – ಸರ್ಕಾರಿ ಬಸ್ಸಿನ ನಡುವೆ ಅಪಘಾತ: ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಟಿಪ್ಪರ್ ಚಾಲಕ

ವಿಟ್ಲ: ಮುಚ್ಚಿರಪದವಿನಲ್ಲಿ ಸರ್ಕಾರಿ ಬಸ್ಸು ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ.

ಬಸ್ಸು ಪಕಳಕುಂಜದಿಂದ ವಿಟ್ಲಕ್ಕೆ ಬರುತ್ತಿತ್ತು. ಟಿಪ್ಪರ್ ‌ಪೆರುವಾಯಿ ಕಡೆಗೆ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಇವೆರಡೂ ವಾಹನಗಳು ಮುಖಾಮುಖಿ ಗುದ್ದಿಕೊಂಡಿವೆ. ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಆದರೆ ಅಪಘಾತದ ಬಳಿಕ ಎರಡೂ ವಾಹನಗಲ‌ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ಟಿಪ್ಪರ್ ‌ಚಾಲಕ ಬಿಲಾಲ್ ‌ಎಂಬಾತ‌ ಕರ್ತವ್ಯದಲ್ಲಿದ್ದ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಯಾಳು ಕಂಡಕ್ಟರ್ ವಿಟ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.























































 
 

ಈ ಅಪಘಾತಕ್ಕೆ ಟಿಪ್ಪರ್ ‌ಚಾಲಕನ ಅತಿ ವೇಗದ ಚಾಲನೆಯೇ ಕಾರಣ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

error: Content is protected !!
Scroll to Top