ದರ್ಬೆಯಲ್ಲಿ ರಿಕ್ಷಾ – ದ್ವಿಚಕ್ರ ವಾಹನದ ನಡುವೆ ಅಪಘಾತ

ಪುತ್ತೂರು: ದರ್ಬೆಯ ಹರ್ಷ ಮಳಿಗೆಯ ಸಮೀಪ ಇಂದು ಮಧ್ಯಾಹ್ನ ಅಟೋ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದ್ದು, ಇದರಲ್ಲಿ ಸವಾರ ಗಾಯಗೊಂಡಿದ್ದಾರೆ.

ಸ್ಕೂಟಿ ಸವಾರ ಒಳ ರಸ್ತೆಯಿಂದ ಮುಖ್ಯರಸ್ತೆಗೆ ‌ಸಂಪರ್ಕಿಸುತ್ತಿದ್ದು, ಆಟೋ ರಿಕ್ಷಾ ದರ್ಬೆಯಿಂದ ಪುತ್ತೂರಿಗೆ ‌ಹೋಗುತ್ತಿತ್ತು. ಅಪಘಾತದ ರಭಸಕ್ಕೆ ಸ್ಕೂಟಿ ರಸ್ತೆಗೆ ಬಿದ್ದು ಸವಾರ ಮತ್ತು ಹಿಂಬದಿ ಸವಾರೆ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಪರಿಣಾಮ ಇವರಿಗೆ ತರಚು ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಘಟನೆಯ ‌ಬಳಿಕ ರಿಕ್ಷಾ ಚಾಲಕ ಮತ್ತು ಸ್ಕೂಟಿಯಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆದಿದೆ. ಘಟನೆಯಿಂದ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು ಎಂದು ತಿಳಿದು ಬಂದಿದೆ.























































 
 

error: Content is protected !!
Scroll to Top