ಚಾರ್ಮಾಡಿ ಘಾಟ್‌ನಲ್ಲಿ ‌ಪಲ್ಟಿಯಾದ ಟಿಟಿ ವಾಹನ: ಒಂಬತ್ತು ಜನರಿಗೆ ಗಾಯ

ಕೊಟ್ಟಿಗೆಹಾರ: ಟಿಟಿ ‌ವಾಹನವೊಂದು ಚಾಲಕನ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾದ ಘಟನೆ ಚಾರ್ಮಾಡಿ ಘಾಟಿಯಲ್ಲಿ ‌ನಡೆದಿದ್ದು, ಒಂಬತ್ತು ಜನರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.

ಈ ವಾಹನವು ಭದ್ರಾವತಿಯಿಂದ ಧರ್ಮಸ್ಥಳದತ್ತ ಹೋಗುತ್ತಿತ್ತು. ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದ ಇದು, ಗಾಯಾಳು ಒಂಬತ್ತು ಜನರ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಸ್ಥಳೀಯರು ಘಟನೆ ನಡೆದ ತಕ್ಷಣವೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಗಾಯ ಆಲಿ ಗಳನ್ನು ನೆರೆಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.























































 
 

error: Content is protected !!
Scroll to Top