ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 51.50 ರೂ. ಇಳಿಕೆ ಮಾಡಿವೆ. ಇದರಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಆಹಾರೋದ್ಯಮಗಳಿಗೆ ತುಸು ಅನುಕೂಲವಾಗಿದೆ. ಪರಿಷ್ಕೃತ ದರಗಳು ಇಂದಿನಿಂದಲೇ (ಸೆಪ್ಟೆಂಬರ್ 1) ಜಾರಿಗೆ ಬಂದಿವೆ. ಪರಿಷ್ಕೃತ ಬೆಲೆಯ ಪ್ರಕಾರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಈಗ 1,580 ರೂ. ಆಗಿದ್ದು, ಪ್ರತಿ ಸಿಲಿಂಡರ್‌ಗೆ 51.50 ರೂ.ಗಳ ಕಡಿತ ಆಗಿದೆ. ಜಾಗತಿಕ ಇಂಧನ ಬೆಲೆ ಮತ್ತು ಇನ್‌ಪುಟ್ ವೆಚ್ಚಗಳಿಗೆ ಸಂಬಂಧಿಸಿದ ನಿಯಮಿತ ಮಾಸಿಕ ಪರಿಷ್ಕರಣೆಗಳ ಭಾಗವಾಗಿ ಈ ದರ ಇಳಿಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 51.50 ರೂ. ಇಳಿಕೆಯೊಂದಿಗೆ 1,653 ರೂ. ಆಗಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಈಗಿರುವ 855.50 ರೂ. ಮುಂದುವರಿದಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ 5 ಕೆಜಿಗೆ 318.50 ರೂ. ಆಗಿದೆ. ವಾಣಿಜ್ಯ ಬಕೆಯ ಎಲ್‌ಪಿಜಿ ಸಿಲಿಂಡರ್ 47.5 ಕೆಜಿಗೆ 4,129 ರೂ. ಆಗಿದೆ. ಅಂದರೆ, ಇದರ ಬೆಲೆ 127 ರೂ. ಇಳಿಕೆಯಾಗಿದೆ.
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮನೆಗಳಲ್ಲಿ ಅಡುಗೆಗೆ ಬಳಸುವ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಯಥಾಸ್ಥಿತಿ ಕಾಯ್ದಕೊಳ್ಳಲಾಗಿದೆ.
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆಯು ದೈನಂದಿನ ಕಾರ್ಯಾಚರಣೆಗಳಿಗೆ ವಾಣಿಜ್ಯ ಸಿಲಿಂಡರ್‌ಗಳನ್ನು ಹೆಚ್ಚು ಅವಲಂಬಿಸಿರುವ ತಿಂಡಿ ತಿನಿಸು ಮಾರಾಟ ಉದ್ಯಮ, ಹೋಟೆಲ್‌ಗಳು, ಢಾಬಾಗಳು ಮತ್ತು ಸಣ್ಣ ಪ್ರಮಾಣದ ಆಹಾರ ವ್ಯವಹಾರಗಳಿಗೆ ತುಸು ರಿಲೀಫ್ ನೀಡುವ ನಿರೀಕ್ಷೆಯಿದೆ. ಸಣ್ಣ ಮಟ್ಟಿನ ದರ ಇಳಿಕೆ ಇದಾಗಿದ್ದರೂ, ವಿಶೇಷವಾಗಿ ಬೇಡಿಕೆ ಹೆಚ್ಚಿರುವ ನಗರ ಕೇಂದ್ರಗಳಲ್ಲಿ ಕಾರ್ಯಾಚರಣೆಯ ವೆಚ್ಚವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಲಿದೆ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

























