ಧರ್ಮಸ್ಥಳ ಪ್ರಕರಣ: ಹೊಸ ಸ್ಥಳದಲ್ಲಿ ದೂರುದಾರನ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಿದ SIT

ಧರ್ಮಸ್ಥಳ: ನೂರಾರು ಹೆಣಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ SIT ಇಂದು ಅನಾಮಿಕ ದೂರುದಾರ ‌ತಿಳಿಸಿದ ಹೊಸ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

ಧರ್ಮಸ್ಥಳದ ಬೊಳಿಯಾರ್‌ ಗೋಂಕ್ರತಾರ್ ಬಳಿ ಇಂದು ಶೋಧ ಕಾರ್ಯ ನಡೆದಿದೆ. ಮುಸುಕುಧಾರಿ ದೂರುದಾರನ ಜೊತೆಗೆ ಅಧಿಕಾರಿಗಳು ಇಂದು ಶೋಧ ಕಾರ್ಯ ನಡೆಸಿರುವುದಾಗಿದೆ.

ಈ ವರೆಗೆ ದೂರುದಾರ ಗುರುತಿಸಿದ್ದ ಪಾಯಿಂಟ್‌ಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸದ್ಯ ಹೊಸ ಸ್ಥಳದಲ್ಲಿ ಹೂಳಲಾಗಿದೆ ಎನ್ನಲಾದ ಶವದ ಅವಶೇಷ ಸಿಗುವುದೋ ಎಂದು ಕಾರ್ಯಾಚರಣೆ ನಡೆಸಲಾಗಿದೆ. ಈ ಪ್ರದೇಶದಲ್ಲಿ ದೂರುದಾರ ಎಷ್ಟು ಪ್ರದೇಶಗಳನ್ನು ಗುರುತು ಮಾಡುತ್ತಾನೆ ಎನ್ನುವುದು ಸದ್ಯದ ಕುತೂಹಲ.





















































 
 

ಈಗಾಗಲೇ ಗುರುತಿಸಲಾದ 13 ಪಾಯಿಂಟ್‌ಗಳಲ್ಲಿ 12 ಪಾಯಿಂಟ್‌ಗಳಲ್ಲಿ ಶೋಧ ನಡೆಸಲಾಗಿದ್ದು, 13 ನೇ ಸ್ಥಳದಲ್ಲಿ ಶೋಧ ನಡೆಸದ SIT ನಡೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

error: Content is protected !!
Scroll to Top