ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಆಪರೇಷನ್ ಸಿಂಧೂರ್‌ನ ಯೋಧರ ವಿಜಯೋತ್ಸವ ಆಚರಿಸಿಲಿದೆ. ಇಡೀ ಜಗತ್ತಿಗೆ ಭಾರತದ ಶಕ್ತಿಯ ಅರಿವನ್ನು ಆಪರೇಷನ್ ಸಿಂಧೂರ್ ಮಾಡಿಸಿದ್ದು, ಈ ವಿಜಯೋತ್ಸವದಲ್ಲಿ ಎಲ್ಲಾ ಪಕ್ಷಗಳು ಒಗ್ಗಟ್ಟು ಪ್ರದರ್ಶನ ಮಾಡುವಂತೆ ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ.
ಸಂಸತ್ ಕಲಾಪ ಆರಂಭದಲ್ಲೇ ಆಪರೇಷನ್ ಸಿಂಧೂರ್‌ನ ವಿಜಯೋತ್ಸವನ್ನು ಪಟಾಕಿ ಹಚ್ಚಿ ಸಂಭ್ರಮಿಸಲಾಯಿತು. ಹಾಗೆಯೇ ಇದರಲ್ಲಿ ಭಾಗವಹಿಸಿ 100% ಗುರಿ ಸಾಧಿಸಿದ ಸಶಸ್ತ್ರ ಪಡೆಗಳನ್ನು ಪ್ರಧಾನಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ವಿಪಕ್ಷಗಳು ಆಪರೇಷನ್ ಸಿಂಧೂರ್ ಸಮಯದಲ್ಲಿ ಮಧ್ಯಸ್ಥಿಕೆ ವಹಿಸಿರುವುದಾಗಿ ಅಮೆರಿಕಾ ಹೇಳುತ್ತಿದ್ದು, ಈ ಬಗ್ಗೆ ಚರ್ಚೆ ನಡೆಸುವಂತೆ ಒತ್ತಾಯಿಸಿದವು. ಈ ವೇಳೆ ಕಲಾಪವನ್ನು ಕೊಂಚ ಕಾಲ ಮುಂದೂಡಲಾಯಿತು.
ನಕ್ಸಲಿಸಂ ಬಗೆಗೂ ಮಾತನಾಡಿದ ಅವರು ಅದನ್ನು ಕೊನೆಗೊಳಿಸಲು ಸರ್ಕಾರ ಸಂಕಲ್ಪ ಮಾಡಿದೆ ಎಂದಿದ್ದಾರೆ. ಹಲವಾರು ಜಿಲ್ಲೆಗಳು ನಕ್ಸಲಿಸಂ ಮುಕ್ತವಾಗಿ ಅಭಿವೃದ್ಧಿಗೆ ತೆರೆದುಕೊಂಡಿದೆ ಎಂದು ತಿಳಿಸಿದರು.
ಭಾರತವು ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ, ದುರ್ಬಲ 5 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವನ್ನು ಪರಿಗಣಿಸಲಾಗಿದ್ದ ದಿನಗಳು ಕಳೆದು ಹೋಗಿದೆ ಎಂದು ಹರ್ಷಿಸಿದ್ದಾರೆ.

























