ರೈತನನ್ನು ಜೀವಂತವಾಗಿ ನುಂಗಿದ ದೈತ್ಯ ಹೆಬ್ಬಾವು

ನಾಪತ್ತೆಯಾದ ರೈತನ ಶವ ಸಿಕ್ಕಿದ್ದು 26 ಅಡಿ ಉದ್ದದ ಹೆಬ್ಬಾವಿನ ಹೊಟ್ಟೆಯಲ್ಲಿ

ಜಕಾರ್ತ : ನಾಪತ್ತೆಯಾಗಿದ್ದ ರೈತನೊಬ್ಬನ ಶವ ದೈತ್ಯ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾದ ಬೆಚ್ಚಿಬೀಳಿಸಿದ ಘಟನೆ ಇಂಡೋನೇಷ್ಯಾದಲ್ಲಿ ಸಂಭವಿಸಿದೆ. ಇಂಡೋನೇಷ್ಯಾದ ದಕ್ಷಿಣ ಬುಟಾನ್ ಜಿಲ್ಲೆಯ 63 ವರ್ಷದ ರೈತ 26 ಅಡಿ ಉದ್ದವಿದ್ದ ಹೆಬ್ಬಾವಿನ ಹೊಟ್ಟೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ರೈತ ತೋಟಕ್ಕೆ ಹೋದವರು ಹಿಂದಿರುಗಿ ಬಂದಿರಲಿಲ್ಲ. ಹುಡುಕಾಡಿದಾಗ ಮಧ್ಯಾಹ್ನ 2.30ರ ಸುಮಾರಿಗೆ ಹಳ್ಳಿಯ ಜನರು ಹೆಬ್ಬಾವಿನ ಹೊಟ್ಟೆಯಲ್ಲಿ ಶವವನ್ನು ಪತ್ತೆ ಮಾಡಿದ್ದಾರೆ.

ತೋಟದಲ್ಲಿ ಒಂದು ಹೆಬ್ಬಾವು ಒದ್ದಾಡುತ್ತಿರುವುದು ಜನರ ಕಣ್ಣಿಗೆ ಬಿದ್ದಿತ್ತು, ಯಾವುದೋ ದೊಡ್ಡ ಹಾವನ್ನು ನುಂಗಿರಬೇಕು ಎಂದು ಜನರು ತಿಳಿದಿದ್ದರು. ಜನರು ಹಾವನ್ನು ಕೊಂದು ಹೊಟ್ಟೆ ಬಗೆದು ನೋಡಿದಾಗ ಅಲ್ಲಿ ರೈತರ ಶವ ಕಂಡಿದೆ. ಬಳಿಕ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿ ಶವವನ್ನು ಮನೆಗೆ ಸಾಗಿಸಿದ್ದಾರೆ. ರೈತನನ್ನು ಜೀವಂತವಾಗಿ ಹೆಬ್ಬಾವು ನುಂಗಿತ್ತು.





















































 
 

ಈ ಪ್ರದೇಶದಲ್ಲಿ ಮನುಷ್ಯರನ್ನು ಹೆಬ್ಬಾವು ನುಂಗಿದ ಮೊದಲ ಘಟನೆ ಇದಾಗಿದೆ. ಈ ಗ್ರಾಮದಲ್ಲಿ ಮಳೆಗಾಲದ ಸಂದರ್ಭದಲ್ಲಿ ಹಲವು ಬಾರಿ ಜಾನುವಾರುಗಳ ಮೇಲೆ ದಾಳಿ ಮಾಡುವ ಘಟನೆಗಳು ಆಗಾಗ ವರದಿಯಾಗಿರುತ್ತದೆ. ರೈತ ತೋಟದಿಂದ ಹಿಂದಿರುಗದ ಕಾರಣ ಕುಟುಂಬವು ನಾಪತ್ತೆ ದೂರನ್ನು ದಾಖಲಿಸಿತ್ತು. ತೋಟದಲ್ಲಿಡೀ ಹುಡುಕಿದಾಗ ರಸ್ತೆಯ ಪಕ್ಕದಲ್ಲಿ ಬೈಕ್ ನಿಂತಿದ್ದನ್ನು ಗಮನಿಸಿದ್ದಾರೆ. ಹೆಚ್ಚಿನ ಹುಡುಕಾಟ ನಡೆಸಿದಾಗ ಹೆಬ್ಬಾವು ಪತ್ತೆಯಾಗಿತ್ತು. ಆ ಹಾವು ಒದ್ದಾಡುತ್ತಿರುವುದನ್ನು ನೋಡಿ ಮೊದಲು ಹಾವನ್ನು ನುಂಗಿರಬೇಕು ಎಂದುಕೊಂಡರು ಬಳಿಕ ಹೊಟ್ಟೆ ತುಂಬಾ ದೊಡ್ಡದಾಗಿದ್ದ ಕಾರಣ ಮನುಷ್ಯನನ್ನೇ ನುಂಗಿರಬೇಕೆಂದು ತಿಳಿದು ಹಾವನ್ನು ಕೊಂದು ಹೊಟ್ಟೆ ಸೀಳಿದಾಗ ವ್ಯಕ್ತಿಯ ದೇಹ ಕಂಡುಬಂದಿದೆ.

error: Content is protected !!
Scroll to Top