ಭಾರತೀಯ ವಾಯುಪಡೆಗೆ ಸಂತ ಫಿಲೋಮಿನಾ ಕಾಲೇಜಿನ ಎನ್‍.ಸಿ.ಸಿ. ಕೆಡೆಟ್ ಮಂಜುನಾಥ್‍ ಟಿ.ವಿ. ಆಯ್ಕೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಬಿ.ಎಸ್ಸಿ ವಿಭಾಗದ  ವಿದ್ಯಾರ್ಥಿ ಕೆಡೆಟ್ ಮಂಜುನಾಥ್ ಟಿ. ವಿ ಯವರು ಭಾರತೀಯ ವಾಯುಪಡೆಯ ವೈದ್ಯಕೀಯ ಸಹಾಯಕರಾಗಿ ಸೇವೆ ಸಲ್ಲಿಸಲು ಜುಲೈ 1 ರಂದು ಬೆಂಗಳೂರಿನ ಮಿಲಿಟರಿ ತರಬೇತಿ ಕೇಂದ್ರಕ್ಕೆ ಹಾಜರಾಗುವ ಮೂಲಕ ತನ್ನ ಕನಸನ್ನು ನನಸಾಗಿಸಲಿದ್ದಾರೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಶಿಕ್ಷಕರಾಗಿರುವ  ವೆಂಕಟೇಶ ಟಿ. ಜೆ. ಮತ್ತು ರಾಧಮಣಿ ಜಿ. ಆರ್. ದಂಪತಿಯ ಪುತ್ರರಾಗಿರುವ ಮಂಜುನಾಥ್ ಟಿ. ವಿ. 2013 ರಿಂದ ಹಲವಾರು ಭಾರತೀಯ ಸೈನ್ಯದ ಹಲವಾರು ವಿಭಾಗದ ಆಯ್ಕೆ ಪ್ರಕ್ರಿಯೆಗಳಲ್ಲಿ ಭಾಗವಸಿದ್ದರು. ಅಂತಿಮವಾಗಿ ಭಾರತೀಯ ವಾಯುಪಡೆಯ ವೈದ್ಯಕೀಯ ಸಹಾಯಕರಾಗಿ ಆಯ್ಕೆಗೊಂಡ ಸಲುವಾಗಿ ಕಾಲೇಜಿನ ವತಿಯಿಂದ ಅಭಿನಂದನಾಕಾರ್ಯಕ್ರಮವನ್ನು ಸಂಯೋಜಿಸಲಾಯಿತು.

ಮಂಜುನಾಥ್‌ ಅವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top