ಹಾಸನ : ಮನಸಾರೆ ಪ್ರೀತಿಸಿದ ಪ್ರಿಯಕನನ್ನು ಚಾಕುವಿನಿಂದ ಇರಿದ ಘಟನೆ ಹಾಸನ ನಗರದ ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ನಡೆದಿದೆ.
ಚಾಕುವಿನಿಂದ ಇರಿತಕ್ಕೊಳಗಾದವ 25 ವರ್ಷದ ಮನು ಕುಮಾರ್ ಸ್ಥಿತಿ ಗಂಭೀರವಾಗಿದೆ.
ಹಾಸನದ ತಾಲೂಕಿನ ಎ ಗುಡುಗನ ಹಳ್ಳಿ ಗ್ರಾಮದ ಮನುಕುಮಾರ್ ಮತ್ತು ಭವಾನಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕೆಲ ದಿನಗಳ ಹಿಂದೆ ಮನಸ್ತಾಪ ಮೂಡಿದ್ದರಿಂದ ಪ್ರೀತಿಯಲ್ಲಿ ಬಿರುಕು ಮೂಡಿತ್ತು. ಹೊಸ ವರ್ಷದ ಸಂಭ್ರಮಾಚರಣೆಯ ಸಲುವಾಗಿ ಹೋಟೆಲ್ ಹೋಗಿದ್ದ ಮನುವಿಗೆ ಭವಾನಿ ಪದೇ ಪದೇ ಫೋನ್ ಮಾಡುತ್ತಿದ್ದಳು. ತಡರಾತ್ರಿ 12.30ಕ್ಕೆ ಹೋಟೆಲ್ ಬಳಿ ಭವಾನಿ ಬಂದಿದ್ದಾಳೆ.
ಅಲ್ಲೆ ಬಿದ್ದಿದ್ದ ಪಾಸನ್ನು ಕೊರಳಿಗೆ ಹಾಕಿಕೊಂಡು ಗೇಟ್ ಒಳಗೆ ಹೋಗಿದ್ದಾಳೆ. ಆ ಸಮಯದಲ್ಲಿ ಗೇಟ್ ಬಳಿ ಬಂದಿದ್ದಾನೆ. ಈ ವೇಳೆ ಭವಾನಿ ಹಾಗೂ ಮನುಕುಮಾರ್ ನಡುವೆ ಜೋರಾಗಿ ಜಗಳವೇ ಶುರುವಾಗಿದೆ. ಮನು ಜೊತೆ ಬಂದಿದ್ದ ಸ್ನೇಹಿತರು ಜಗಳವನ್ನು ಬಿಡಿಸಲು ಬಂದಿದ್ದರು. ಇದೇ ವೇಳೆ ಏಕಾಏಕಿಯಾಗಿ ಮನುವಿಗೆ ಚಾಕುವಿನಿಂದ ಚುಚ್ಚಿದ್ದಾಳೆ.
ಗಾಯಗೊಂಡ ಮನು ಕುಮಾರ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಆರೋಗ್ಯ ಸ್ಥಿತಿ ತುಂಬಾ ಗಂಭೀರವಿದೆ ಎಂದು ತಿಳಿದು ಬಂದಿದೆ.
ಪ್ರಕರಣ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
























