ರಕ್ಷಿಸಿ ಎರಡೇಟು ಬಿಗಿದು ಬುದ್ಧಿ ಕಲಿಸಿದ ಜನ
ಮಂಗಳೂರು : ಗುರುಪುರ ಸೇತುವೆ ಮೇಲಿಂದ ವ್ಯಕ್ತಿಯೊಬ್ಬ 2 ವರ್ಷದ ಮಗುವಿನ ಜೊತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಕೈಕಂಬ ನಿವಾಸಿ ಸಂದೀಪ್ ಎಂದು ಗುರುತಿಸಲಾಗಿದೆ. ಸೇತುವೆಯ ತಡೆಗೋಡೆ ಏರಿ ಮಗುವಿನ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದು ವಾಹನ ಸವಾರರು ತಡೆದು ರಕ್ಷಿಸಿ ಥಳಿಸಿದ್ದಾರೆ.
ಮೊದಲಿಗೆ ಕೆಲ ಮುಸ್ಲಿಂ ಯುವಕರು ಸಂದೀಪ್‌ನ ಮನವೊಲಿಸುವ ಪ್ರಯತ್ನ ಮಾಡಿದ್ದಾಗ ಅವನು ಯಾರನ್ನೂ ಸಮೀಪಕ್ಕೆ ಬಿಟ್ಟುಕೊಂಡಿಲ್ಲ. ಈ ವೇಳೆ ಅವನು ನದಿಗೆ ಹಾರಿದರೆ ರಕ್ಷಣೆ ಮಾಡಲು ಕೆಲ ಯುವಕರು ಸಿದ್ಧರಾಗಿ ನಿಂತಿದ್ದರು. ಕೊನೆಗೆ ನದಿಗೆ ಹಾರಲು ಸಂದೀಪ್ ಯತ್ನಿಸಿದಾತ ಆಯತಪ್ಪಿ ಸೇತುವೆಯ ಮೇಲೆ ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಹಿಡಿದು ಮಗುವನ್ನು ರಕ್ಷಣೆ ಮಾಡಿ ಆತ್ಮಹತ್ಯೆ ಮಾಡಲು ಮುಂದಾದವನಿಗೆ ಯುವಕರು ಎರಡೇಟು ನೀಡಿ ಬುದ್ಧಿ ಕಲಿಸಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ. ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
























