ಪುತ್ತೂರು: ಕಾವು ವಿಶ್ವ ಹಿಂದೂ ಪರಿಷತ್ ಬಜರಂಗದಳ ಮತ್ತು ಗೋಪೂಜಾ ಸಮಿತಿ ನೇತೃತ್ವದಲ್ಲಿ 13 ನೇ ವರ್ಷದ ಸಾಮೂಹಿಕ ಗೋಪೂಜೆ, ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ವಠಾರದಲ್ಲಿ ಭಾನುವಾರ ನಡೆಯಿತು

ಸಂಜೆ ಗಂಟೆ 6.30 ಕ್ಕೆ ವೇದಮೂರ್ತಿ ಶಿವಪ್ರಸಾದ್ ಕಡಮಣ್ಣಾಯರ ಪೌರೋಹಿತ್ಯದಲ್ಲಿ ಸಾಮೂಹಿಕ ಗೋಪೂಜೆ ಕಾರ್ಯಕ್ರಮ ನಡೆಯಿತು.
ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆನ್ನು ಕಾವು ಗೋಪೂಜಾ ಸಮಿತಿ ಅಧ್ಯಕ್ಷ ನಹುಷ ಭಟ್ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿದರು .ವಿಶ್ವ ಹಿಂದೂ ಪರಿಷತ್ ಕಾವು ಘಟಕದ ಅಧ್ಯಕ್ಷ ಭಾಸ್ಕರ ಬಲ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಸೀತಾರಾಮ ಬಾಳೆಕೊಚ್ಚಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 13 ವರ್ಷಗಳಿಂದ ಹಮ್ಮಿಕ್ಕೊಳ್ಳುತ್ತಿರುವ ಗೋಪೂಜಾ ಕಾರ್ಯಕ್ರಮದ ಪ್ರಾರಂಭದ ಹಂತದಲ್ಲಿ ಸಕ್ರಿಯರಾಗಿದ್ದ ಅಶೋಕ್ ಪೂಜಾರಿ ಕರ್ನೂರು ಹಾಗೂ ಪ್ರವೀಣ್ ಪೆರ್ಲಂಪಾಡಿ ಅವರನ್ನು ಸನ್ಮಾನಿಸಲಾಯಿತು. ಕಿರಣ್ ಕುಮಾರ್ ಮಾಣಿಯಡ್ಕ, ವಿಶ್ವನಾಥ ಬಾಳೆಕೊಚ್ಚಿ, ಸುಪ್ರೀತ್ ಹೊಸಮನೆ, ಅಶ್ವಥ್ ಹೊಸಮನೆ ಅತಿಥಿಗಳನ್ನು ಗೌರವಿಸಿದರು.
ಸ್ನೇಹ ಮತ್ತು ತಂಡದವರು ಪ್ರಾರ್ಥಿಸಿದರು. ಗೋಪೂಜೆ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಾವು ವಂದಿಸಿದರು. ಭವಿಷತ್ ಹಸಂತಡ್ಕ ಕಾರ್ಯಕ್ರಮ ನಿರ್ವಹಿಸಿದರು. ತುಳು ಹಾಸ್ಯಮಯ ಕುಶಲ್ಡೊಂತೆ ಅಸಲ್ ಪ್ರದರ್ಶನಗೊಂಡಿತು.
























