20 ದಿನ ಹೋಟೆಲ್‌ ಕೋಣೆಯಲ್ಲಿ ಬಂಧಿಯಾಗಿದ್ದ ವಿದ್ಯಾರ್ಥಿನಿಯ ರಕ್ಷಣೆ

ಹೈದರಾಬಾದ್‌: ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಲೇಜು ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ 20 ದಿನ ಹೋಟೆಲ್‌ ರೂಮ್‌ನಲ್ಲಿ ಬಂಧನದಲ್ಲಿಟ್ಟ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ಸಂಭವಿಸಿದೆ. ಹೈದರಾಬಾದ್​ನ ಮಹಿಳಾ ಪೊಲೀಸರು ಕೊನೆಗೂ ಯುವತಿಯನ್ನು ಬಂಧನದಿಂದ ರಕ್ಷಿಸಿದ್ದಾರೆ.

ಹೈದರಾಬಾದ್​ ಪೊಲೀಸ್​ ವಿಭಾಗದ ‘SHE’ ತಂಡ ವಿದ್ಯಾರ್ಥಿನಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. 19 ವರ್ಷದ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಭೈಂಸಾ ಪಟ್ಟಣದ ವಿದ್ಯಾರ್ಥಿನಿಯ ಪೋಷಕರು ಹೈದರಾಬಾದ್‌ನ ‘SHE’ ಟೀಮ್​ಗೆ ಮಗಳು ಕಿಡ್ನಾಪ್‌​ ಆಗಿದ್ದಾಳೆ ಎಂದು ತಿಳಿಸಿದ್ದರು. ಅದರಂತೆ ತನಿಖೆ ನಡೆಸಿದಾಗ ಯುವತಿ ಹೋಟೆಲ್‌ ಕೊಠಡಿಯಲ್ಲಿ ಬಂಧಿಯಾಗಿರುವುದು ತಿಳಿದುಬಂದಿದೆ. ಆರೋಪಿ ಬೆದರಿಕೆ ಹಾಕಿ ಹೈದರಾಬಾದ್​ಗೆ ಬರುವಂತೆ ಒತ್ತಾಯಿಸಿದ್ದ, 20 ದಿನಗಳ ಕಾಲ ಹೋಟೆಲ್​ ಕೊಠಡಿಯಲ್ಲಿ ಬೀಗ ಹಾಕಿ ಕೂರಿಸಿದ್ದ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.
ಆಕೆ ತನ್ನ ಮೊಬೈಲ್‌ ಕಾಡಿಬೇಡಿ ಪಡೆದುಕೊಂಡು ಕೂಡಲೇ ಇನ್​ಸ್ಟಂಟ್ ಮೆಸೇಜಿಂಗ್ ಆ್ಯಪ್ ಮೂಲಕ ಪೋಷಕರಿಗೆ ಸಂದೇಶ ಕಳುಹಿಸಿದ್ದಳು. ತಕ್ಷಣವೇ ಪೊಲೀಸರು ಸ್ಥಳವನ್ನು ಪತ್ತೆ ಹಚ್ಚಿದ್ದಾರೆ.
ನಾರಾಯಣಗುಡಾದಲ್ಲಿ ಬೀಗ ಹಾಕಲಾದ ಹೋಟೆಲ್ ಕೋಣೆಯಲ್ಲಿ ಬಾಲಕಿಯನ್ನು ಪತ್ತೆಹಚ್ಚಿ, ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top