ಅಕ್ಷಯ ಕಾಲೇಜಿನಲ್ಲಿ ಬೇಸಿಕ್ ಕಂಪ್ಯೂಟರ್ ಸ್ಕಿಲ್ಸ್ ತರಬೇತಿ ಕಾರ್ಯಾಗಾರ

ಪುತ್ತೂರು: ವ್ಯಾಪಕ ಡೇಟಾ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಅತ್ಯಮೂಲ್ಯವಾದ ಒಂದು ಅಂಶವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಅತ್ಯವಶ್ಯವಾಗಿ ಬೇಕಾಗುವ ಕೌಶಲ್ಯವೆಂದರೆ ಕಂಪ್ಯೂಟರ್ ಕೌಶಲ್ಯ. ಫ್ಯಾಶನ್ ಡಿಸೈನ್ ವಿಭಾಗದಲ್ಲೂ ವಸ್ತ್ರ, ಆಭರಣ ಮೊದಲಾದ ಫ್ಯಾಶನ್ ಉತ್ಪನ್ನಗಳ ವಿನ್ಯಾಸಗಳಲ್ಲಿ ಕಂಪ್ಯೂಟರ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸಂಬಂಧಿತ ಮೂಲಭೂತ ವಿಷಯಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಪುತ್ತೂರು ಅಕ್ಷಯ ಕಾಲೇಜಿನ ಫ್ಯಾಷನ್ ಡಿಸೈನ್ ವಿಭಾಗ, ಫಸೆರಾ ಫ್ಯಾಷನ್ ಡಿಸೈನ್ ಅಸೋಸಿಯೇಷನ್ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ ಪ್ರಥಮ ಫ್ಯಾಶನ್ ಡಿಸೈನ್ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಗಾರವು ಮಂಗಳವಾರ ಕಾಲೇಜಿನ ಸಭಾಭವನದಲ್ಲಿ ನಡೆಯಿತು.

ತರಬೇತುದಾರರಾಗಿ ಕಾಲೇಜಿನ ಗಣಕ ವಿಭಾಗದ ಉಪನ್ಯಾಸಕಿ ಸೌಜನ್ಯ, ವಿದ್ಯಾರ್ಥಿಗಳಿಗೆ ಬೇಸಿಕ್ ಕಂಪ್ಯೂಟರ್ ಸ್ಕಿಲ್ಸ್ ಎನ್ನುವ ವಿಷಯದಲ್ಲಿ ತರಬೇತಿ ಕಾರ್ಯಗಾರ ನಡೆಸಿಕೊಟ್ಟು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗಣಕಯಂತ್ರದ ಸಹಾಯದಿಂದ ಯಾವುದೇ ಕೆಲಸ ಕಾರ್ಯಗಳನ್ನು ನಿರ್ವಹಿಸಲು, ಮಾಹಿತಿಗಳನ್ನು ನಿಖರವಾಗಿ ಮತ್ತು ಸರಳವಾಗಿ ಸಂಗ್ರಹಿಸಲು, ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

ಫ್ಯಾಶನ್ ಡಿಸೈನ್ ವಿಭಾಗದ ಉಪನ್ಯಾಸಕಿ ಅನನ್ಯ ಭಟ್ ಸ್ವಾಗತಿಸಿದರು. ವಿಭಾಗ ಉಪನ್ಯಾಸಕರು ಮತ್ತು ಪ್ರಥಮ ಫ್ಯಾಶನ್ ಡಿಸೈನ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.























































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top