ಸುಳ್ಯ: ಐವರ್ನಾಡು ಗ್ರಾಮದ ಕೃಷಿಕರಾದ ಸಿ.ಕೆ.ನವೀನ್ ಚಾತುಬಾಯಿ ಅವರಿಗೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ಕೊಡ ಮಾಡುವ ಕೃಷಿಕ ರತ್ನ ಪುರಸ್ಕಾರ ಜುಲೈ 5 ರಂದು ನೀಡಲಾಗಿದೆ.

ಮಂಗಳೂರಿನ ರೀಜನಲ್ ಕಚೇರಿಯಲ್ಲಿ ಜು.5 ರಂದು ನಡೆದ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ಮಾಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗೌರವಿಸಲಾಯಿತು.
ಕಾರ್ಯಕ್ರಮವನ್ನು ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿಯ ಸೀನಿಯರ್ ಮ್ಯಾನೇಜರ್ ಸುಧಾಕರ್ ಶೆಟ್ಟಿ, ಮ್ಯಾನೇಜರ್ ಪೂಜಿಕ್, ಜಗದೀಶ್ ಬೆಳ್ಳಾರೆ, ತಾರನಾಥ್‍ಪುತ್ತೂರು ಉಪಸ್ಥಿತರಿದ್ದರು.
























