ಚಿನ್ನಾಭರಣ ಕಳವು ಪ್ರಕರಣ : ಮೂವರ ಬಂಧನ

ಮಂಗಳೂರು: ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿಯ ಶ್ರೇಯಸ್, ತೌಸಿಫ್, ಉರ್ವದ ಪೃಥ್ವಿರಾಜ್ ಬಂಧಿತ ಆರೋಪಿಗಳು.

ಉಳ್ಳಾಲದಲ್ಲಿ ಕಳವು ಪ್ರಕರಣ ನಡೆದಿದ್ದು, ಮಂಗಳೂರಿನ ವಿವಿಧ ಜ್ಯುವೆಲ್ಲರಿಗೆ ಮಾರಾಟ ಮಾಡಿದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.





















































 
 

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಶ್ರೇಯಸ್, ಪೃಥ್ವಿರಾಜ್ ಮತ್ತು ತೌಸಿಫ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಜೂನ್ 28 ರಂದು ಉಳ್ಳಾಲ ಧರ್ಮನಗರದ ನಿವಾಸಿ ಶ್ರೀಧರ್ (65) ಎಂಬುವರು ತಮ್ಮ ಬೆಡ್‌ರೂಮ್ ಕಬೋರ್ಡ್‌ನಿಂದ ಸುಮಾರು 15 ಲಕ್ಷ ಮೌಲ್ಯದ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಜೂನ್ 8 ರಂದು ಬೆಳಿಗ್ಗೆ 8 ಗಂಟೆ ಹಾಗೂ ಜೂನ್ 16 ರಂದು ಮಧ್ಯಾಹ್ನ 12 ಗಂಟೆ ವೇಳೆ ಕಳ್ಳತನ ನಡೆದಿತ್ತು. ದೂರಿನ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಅವರ ಮಾರ್ಗದರ್ಶನ ಮತ್ತು ನಿರ್ದೇಶನದಲ್ಲಿ, ಪೊಲೀಸ್ ಉಪ ಕಮಿಷನರ್ (ಅಪರಾಧ ಮತ್ತು ಸಂಚಾರ) ಸಿದ್ದಾರ್ಥ್ ಗೋಯಲ್, ಪೊಲೀಸ್ ಉಪ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಬಿ ಪಿ ದಿನೇಶ್ ಕುಮಾರ್, ಮತ್ತು ಸಹಾಯಕ ಪೊಲೀಸ್ ಕಮಿಷನರ್ (ದಕ್ಷಿಣ) ಧನ್ಯಾ ನಾಯಕ್, ಉಳ್ಳಾಲ ಪೊಲೀಸ್‌ ಇನ್ಸ್‌ಪೆಕ್ಟ‌ರ್ ಬಾಲಕೃಷ್ಣ ಮತ್ತು ಅವರ ತಂಡ ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top