ಪುತ್ತೂರು: ತಾಲೂಕಿನ ಮಾಡಾವು ಪ್ರದೇಶದಲ್ಲಿ ಆನೆಗಳ ಸಂಚಾರ ಕಂಡು ಬಂದಿದ್ದು, ಕೃಷಿಕರ ಅಡಿಕೆ ತೋಟಗಳಿಗೆ ದಾಳಿ ಮಾಡಿದೆ.
ಬುಧವಾರ ರಾತ್ರಿ ವೇಳೆ ಮಾಡಾವು ಮಲೆ ಸಮೀಪದ ಕೃಷಿಕರ ಅಡಿಕೆ ತೋಟಗಳಿಗೆ ಆನೆ ದಾಳಿ ಮಾಡಿದ್ದು, ಬಾಳೆ ಗಿಡಗಳು ನೆಲಸಮವಾಗಿರುವುದು ಕಂಡುಬಂದಿದೆ.
ಆನೆ ದಾಳಿಯಿಂದಾಗಿ ಅಲ್ಲಲ್ಲಿ ಬೆಳೆ ನಾಶ, ಕೃಷಿ ನಷ್ಟ ಸಂಭವಿಸಿದೆ. ಹಲವಾರು ಬಾಳೆಗಿಡಗಳು ನೆಲಸಮವಾಗಿದೆ. ಆನೆಯ ಹೆಜ್ಜೆಯ ಗುರುತುಗಳು ಅಲ್ಲಲ್ಲಿ ಸ್ಪಷ್ಟವಾಗಿ ಕಾಣುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
























