ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಮಿತಿ ರಚನೆ | ಗೌರವಾಧ್ಯಕ್ಷರಾಗಿ ಎ.ವಿ. ನಾರಾಯಣ, ಅಧ್ಯಕ್ಷರಾಗಿ ಗೋಪಾಲಕೃಷ್ಣ ಪಟೇಲ್‍ ಚಾರ್ವಾಕ, ಪ್ರಧಾನ ಕಾರ್ಯದರ್ಶಿಯಾಗಿ ಹೂವಪ್ಪ ಗೌಡ ಪರ್ಪುಂಜ, ಜತೆ ಕಾರ್ಯದರ್ಶಿಗಳಾಗಿ ಪೂವಪ್ಪ ಗೌಡ ಸೂರ್ಯ, ವೇದಾವತಿ ಕೊಯಿಲ, ಕೋಶಾಧಿಕಾರಿಯಾಗಿ ಕಲಾವತಿ ಎಸ್‍. ಗೌಡ ಪಟ್ಲಡ್ಕ

ಕಾಣಿಯೂರು: ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ 10 ವರ್ಷಗಳನ್ನು ಪೂರೈಸಿದ್ದು, ಟ್ರಸ್ಟ್ ನ ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸುವ ಕುರಿತು ದಶಮಾನೋತ್ಸವ ಸಮಿತಿಯನ್ನು ಟ್ರಸ್ಟ್ ನ ಸ್ವಂತ ಕಟ್ಟಡದಲ್ಲಿ ರಚಿಸಲಾಯಿತು.

ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಡಿ. ವಿ. ಮನೋಹರ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು.

ದಶಮಾನೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಎ. ವಿ. ನಾರಾಯಣ, ಅಧ್ಯಕ್ಷರಾಗಿ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಪ್ರಧಾನ ಕಾರ್ಯದರ್ಶಿಯಾಗಿ ಹೂವಪ್ಪ ಗೌಡ ಪರ್ಪುಂಜ, ಜತೆ ಕಾರ್ಯದರ್ಶಿಗಳಾಗಿ ಪೂವಪ್ಪ ಗೌಡ ಸೂರ್ಯ, ವೇದಾವತಿ ಕೊಯಿಲ, ಕೋಶಾಧಿಕಾರಿಯಾಗಿ ಕಲಾವತಿ ಎಸ್‍. ಗೌಡ ಪಟ್ಲಡ್ಕರವರನ್ನು ಆಯ್ಕೆ ಮಾಡಲಾಗಿದೆ. ಸಂಪನ್ಮೂಲ ಸಮಿತಿ ಸದಸ್ಯರಾಗಿ ನ್ಯಾಯವಾದಿಗಳಾದ ಮೋಹನ ಗೌಡ ಇಡ್ಯಡ್ಕ, ಚಿದಾನಂದ ಬೈಲಾಡಿ, ಯು.ಪಿ. ರಾಮಕೃಷ್ಣ, ನಾಗಪ್ಪ ಗೌಡ ಬೊಮ್ಮೆಟ್ಟಿ, ಪ್ರವೀಣ್ ಕುಂಟ್ಯಾನ, ರವಿಚಂದ್ರ ಹೊಸೋಕ್ಲು, ಸ್ಮರಣ ಸಂಚಿಕೆ ಸಮಿತಿ ಪ್ರಧಾನ ಸಂಪಾದಕರಾಗಿ ಸೀತಾರಾಮ ಕೇವಳ, ಸದಸ್ಯರಾಗಿ ವಸಂತ ವೀರಮಂಗಲ, ನಾಗೇಶ್ ಕೆಡೆಂಜಿ, ರಾಮಚಂದ್ರ ಅನ್ಯಾಡಿ, ಉದಯ ಕುಮಾರ್ ಕರ್ಮಲ, ಸಂಧ್ಯಾ ಶಶಿಧರ್ ಆಯ್ಕೆಯಾದರು. ಸಭೆಯಲ್ಲಿ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಚರ್ಚಿಸಲಾಯಿತು. ಈ ನಿಟ್ಟಿನಲ್ಲಿ ವಿಜ್ಞಾಪನಾ ಪತ್ರ ಮುದ್ರಿಸಿ ಪ್ರತಿ ಒಕ್ಕೂಟದ ಸದಸ್ಯರಿಗೆ ತಲುಪಿಸುವ ಬಗ್ಗೆ ನಿರ್ಣಯಿಸಲಾಯಿತು. ದಶಮಾನೋತ್ಸವ ಸವಿನೆನಪಿಗಾಗಿ ನೂತನ ಕಟ್ಟ ಡದಲ್ಲಿ ಸಭಾಭವನ ನಿರ್ಮಾಣ ಮತ್ತು ಸ್ಮರಣ ಸಂಚಿಕೆ ಹೊರ ತರುವ ಬಗ್ಗೆ ತೀರ್ಮಾನಿಸಲಾಯಿತು. ಸಭೆಯಲ್ಲಿ 62 ಗ್ರಾಮದ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿಗಳು ಭಾಗವಹಿಸಿದ್ದರು. ವಲಯಾಧ್ಯಕ್ಷರನ್ನು ಸಮಿತಿಯ ಉಪಾಧ್ಯಕ್ಷರಾಗಿ ಮತ್ತು ಒಕ್ಕೂಟದ ಅಧ್ಯಕ್ಷರುಗಳನ್ನು ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಟ್ರಸ್ಟ್ ನ ಕಾರ್ಯದರ್ಶಿ ದಿವ್ಯಪ್ರಸಾದ್, ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ಸಲಹಾ ಸಮಿತಿ ಸದಸ್ಯ ವೆಂಕಪ್ಪಗೌಡ ಕೆಯ್ಯೂರು, ಸುರೇಶ್ ಗೌಡ ಕಲ್ಲಾರೆ, ಶ್ರೀಧರ ಗೌಡ ಕಣಜಾಲು ಸಲಹೆ ಸೂಚನೆ ನೀಡಿದರು





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top