ಅಡಿಕೆ ಕ್ಯಾನ್ಸರ್ ನಿರೋಧಕ | ಹೊರಬಿತ್ತು ಸಂಶೋಧನಾ ವರದಿಯಿಂದ | ರೈತರಲ್ಲಿ ಸಂತಸ ಮೂಡಿಸಿದ ಸಂಶೋಧನಾ ವರದಿ

ಅಡಿಕೆ ಬೆಳೆಗಾರರಲ್ಲಿದ್ದ ಆತಂಕ ದೂರವಾಡುವ ಸುದ್ದಿಯೊಂದು ಹೊರಬಿದ್ದಿದ್ದು, ಸಂತೇಬೆನ್ನೂರಿನ ಸಂಸ್ಥೆ ನಡೆಸಿದ ಸಂಶೋಧನೆಯಿಂದ ಬಹಿರಂಗಗೊಂಡಿದೆ.

ನೆಕ್ಸ್ಜೆನ್ ಸಂಸ್ಥೆ ಸೈಟಾಕ್ಸನ್ ಬಯೋ ಸೊಲ್ಯುಷನ್ ಪ್ರೈ. ಲಿಮಿಟೆಡ್ ನ ಪ್ರಯೋಗಾಲಯದಲ್ಲಿ ನಡೆಸಿದ ಸಂಶೋಧನಾ ವರದಿಯಲ್ಲಿ ಈ ಅಂಶ ಪತ್ತೆಯಾಗಿದೆ ಎಂದು ನೆಕ್ಸ್ಜೆನ್ ಸಂಸ್ಥಾಪಕ ರಘು ಮಾದ್ಯಮಗಳಿಗೆ ತಿಳಿಸಿದ್ದಾರೆ.

ಈ ಹಿಂದೆ ಅಡಿಕೆಯಲ್ಲಿ ಕ್ಯಾನ್ಸರ್ ಅಂಶ ಇದ್ದು, ಅಡಕೆ ನಿಷೇಧ ಮಾಡಬೇಕು ಎಂಬ ಮಾತು ಕೇಳಿ ಬಂದಿತ್ತು. ಇದರಿಂದ ರೈತರಲ್ಲಿ ಆತಂಕ ಮನೆಮಾಡಿತ್ತು. ಇದೀಗ ಅಡಿಕೆಯಲ್ಲಿ ಕ್ಯಾನ್ಸರ್ ನಿರೋಧಕ ಅಂಶ ಇದೆ ಎಂದು ಸಂಸ್ಥೆ ಸಂಶೋಧನೆ ನಡೆಸಿ ಬಹಿರಂಗಪಡಿಸಿದೆ.





























 
 

ಅಡಿಕೆಯಲ್ಲಿ ಆಂಟಿ ಬ್ಯಾಕ್ಟೀರಿಯ, ಆಂಟಿ ಫಂಗಸ್, ಆಂಟಿ ಆಕ್ಸಿಡಂಟ್, ಆಂಟಿ ಡಯಾಬಿಟಿಕ್, ಆಂಟಿ ಇಫ್ಲಾಮೆಟರಿ, ಗಾಯ ವಾಸಿಗೊಳಿಸುವ, ಸೈಟೋ ಟಾಕ್ಸಿಕ್ ಜೀವಶಾಸ್ತ್ರೀಯ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿವೆ ಎಂಬ ಅಂಶವೂ ಸಂಶೋಧನೆಯ ವರದಿಯಲ್ಲಿ ಬಹಿರಂಗವಾಗಿದೆ.

ಪರಿಶುದ್ಧ ಅಡಿಕೆಯ ಹಾಲನ್ನು ಪ್ರಯೋಗ ಶಾಲೆಯಲ್ಲಿ ವಿವಿಧ ಹಂತದ ಪ್ರಯೋಗಗಳಿಗೆ ಒಳಪಡಿಸಿದಾಗ ಕ್ಯಾನ್ಸರ್ ನಿರೋಧಕ ಅಂಶ ಇರುವುದು ತಿಳಿದುಬಂದಿದೆ. ಇದರಿಂದ ರೈತರಲ್ಲಿ ಆತ್ಮವಿಶ್ವಾಸ ವೃದ್ಧಿಸಲಿದೆ. ಆಸಕ್ತ ಕಂಪನಿಗಳು ಹಾಗೂ ಸಂಶೋಧನಾ ಸಂಸ್ಥೆಗಳು ಹೆಚ್ಚಿನ ಆಸಕ್ತಿ ತೋರಿದರೆ ನೆಕ್ಸ್ಜೆನ್ ಸಂಸ್ಥೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವರು ಹೇಳಿದರು.

100 ಕೆ.ಜಿ. ಸುಲಿದ ಹಸಿ ಅಡಿಕೆಗಳನ್ನು ಅಡಿಕೆ ಡ್ರಯರ್ನಲ್ಲಿ ಸಂಸ್ಕರಿಸಿದರೆ ಕನಿಷ್ಠ 1 ಲೀ. ಪರಿಶುದ್ಧ ಹಾಲು ದೊರೆಯುತ್ತದೆ. ಈ ಹಾಲನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು ಎಂದು ಅವರು ಹೇಳಿದರು. ನೆಕ್ಸ್ಜೆನ್ ಸಂಸ್ಥೆಯಿಂದ ಹಿಂದೆ ಅಡಿಕೆ ಬಾಯ್ಲರ್ ಆವಿಷ್ಕರಿಸಲಾಗಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top