‘ಡೆವಿಲ್’ ನಾಯಕ ದರ್ಶನ್’ಗೆ ಪುತ್ತೂರಿನ ರಚನಾ ರೈ ನಾಯಕಿ!!

ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಗುರುತಿಸಿಕೊಂಡಿರುವ ಸ್ಯಾಂಡಲ್ ವುಡ್’ನ ನಟ ದರ್ಶನ್ ಅವರ ಹೊಸ ಸಿನಿಮಾ ‘ಡೆವಿಲ್’ಗೆ ನಾಯಕಿ ಫಿಕ್ಸ್ ಆಗಿದ್ದಾರೆ. ನಾಯಕಿಯಾಗುವ ಅದೃಷ್ಟ ಪಡೆದುಕೊಂಡವರು ಕೋಸ್ಟಲ್ ವುಡ್’ನ ನಟಿ ಎನ್ನುವುದು ಲೇಟೆಸ್ಟ್ ಸುದ್ದಿ. ಅದರಲ್ಲೂ ಆಕೆ ಪುತ್ತೂರಿನವರು ಎನ್ನುವುದು ವಿಶೇಷ.

ರಚನಾ ರೈ. ಈ ಹೆಸರಿನ ನಟಿಯನ್ನು ನೋಡದವರು ತೀರಾ ಕಡಿಮೆ. ರೂಪೇಶ್ ಶೆಟ್ಟಿ ಅಭಿನಯದ ಸರ್ಕಸ್ ಸಿನಿಮಾ ಕರಾವಳಿ ಮಾತ್ರವಲ್ಲ ದೇಶ – ವಿದೇಶಗಳಲ್ಲೂ ಸದ್ದು ಮಾಡಿತ್ತು. ಇದರಲ್ಲಿ ನಾಯಕಿ ಪಾತ್ರಧಾರಿಯಾಗಿ ಕಾಣಿಸಿಕೊಂಡವರೇ ಈ ರಚನಾ ರೈ. ನಾಯಕಿಯಾಗಿ ಮಾತ್ರವಲ್ಲ ಇವರು ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ, ಬರಹಗಾರ್ತಿಯಾಗಿಯೂ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದವರು.

ದರ್ಶನ್ ನಾಯಕರಾಗಿ ಕಾಣಿಸಿಕೊಳ್ಳಲಿರುವ ಡೆವಿಲ್ ಸಿನಿಮಾದಲ್ಲಿ ರಚನಾ ರೈ ಅವರು ನಾಯಕಿಯಾಗಿ ಬಣ್ಣ ಹಚ್ಚುವುದು ಪಕ್ಕಾ ಆಗಿದೆ ಎಂದು ಹೇಳಲಾಗಿದೆ.





























 
 

ಮಿಲನ ಪ್ರಕಾಶ್ ನಿರ್ದೇಶನದಲ್ಲಿ ಡೆವಿಲ್ ಸಿನಿಮಾ ಮೂಡಿಬರುತ್ತಿದೆ. ನಾಯಕಿಯ ತಲಾಶ್’ನಲ್ಲಿದ್ದ ಈ ತಂಡ ರಚನಾ ರೈ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top