ಬೆಂಗಳೂರು: ಸುಳ್ಯ ಶಾಸಕಿ ಬಾಗೀರಥಿ ಮುರುಳ್ಯ ಬೆಂಗಳೂರು ಕಚೇರಿ ಶುಕ್ರವಾರ ಆರಂಭಗೊಂಡಿತು.
ಬೆಂಗಳೂರಿನ ಶಾಸಕರ ಭವನದಲ್ಲಿ ಭವನದಲ್ಲಿ ಕಚೇರಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭಿಸಲಾಯಿತು.
ಬೆಂಗಳೂರಿನ ಶಾಸಕರ ಭವನದ ಎರಡು ಹಾಗೂ ಮೂರನೇ ಮಹಡಿಯ ರೂಂ ಸಂಖ್ಯೆ 335 ಹಾಗೂ 226 ರಲ್ಲಿ ಆರಂಭಗೊಂಡಿತು.
ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಮುರುಳ್ಯ ಗ್ರಾಪಂ ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಮುಖಂಡರಾದ ಎ.ವಿ.ತೀರ್ಥರಾಮ, ರಂಜಿತ್ ಎನ್.ಆರ್., ಸುನಿಲ್ ಕೇರ್ಪಳ, ವಸಂತ ನಡುಬೈಲು, ಮಹೇಶ್ ರೈ ಮೇನಾಲ, ಹರೀಶ್ ರೈ ಉಬರಡ್ಕ, ಯೋಗಾನಂದ ಎಣ್ಮೂರು, ಅನೂಪ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
























