ಪುತ್ತೂರು: ಸಂಟ್ಯಾರ್ ಅಪಾಯಕಾರಿ ರಸ್ತೆ ದುರಸ್ಥಿ ಕಾರ್ಯ ಫೆ.3 ರಂದು ಆರಂಭಗೊಳ್ಳಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಸಂಟ್ಯಾರ್ ನಿಂದ ಪಾಣಾಜೆಗೆ ತೆರಳುವ ರಸ್ತೆಯ ಬಳಕ್ಕ ಎಂಬಲ್ಲಿರುವ ಸೇತುವೆಯ ಬಳಿ ರಸ್ತೆ ಅಪಾಯಕಾರಿ ಸ್ಥಿತಿಯಲ್ಲಿದೆ. ರಸ್ತೆ ನಿರ್ಮಾಣದ ವೇಳೆ ಅಪಾಯಕಾರಿ ಹುಬ್ಬುಗಳನ್ನು ತೆರವು ಮಾಡದೆ ಇರುವ ಕಾರಣ ಈ ಭಾಗದಲ್ಲಿ ಸಂಚರಿಸುವ ವಾಹನಗಳು ರಸ್ತೆಯ ಪಕ್ಕಕ್ಕೆ ತೆರಳಿ ಪಲ್ಟಿಯಾಗುತ್ತಿದೆ. ಇದೇ ಸ್ಥಳದಲ್ಲಿ ವಾಹನ ಅಪಘಾತದಿಂದ ಮೂರು ಜೀವಗಳು ಬಲಿಯಾಗಿದೆ. ಮೂರು ದಿನಗಳ ಹಿಂದೆ ರಿಕ್ಷಾವೊಂದು ಪಲ್ಟಿಯಾಗಿ ವ್ಯಕ್ತಿ ಮೃಯಪಟ್ಟಿದ್ದು, ಕಳೆದ ವರ್ಷ ನಿಡ್ಪಳ್ಳಿ ಗ್ರಾಪಂ ಸದಸ್ಯರ ಕಾರೊಂದು ಪಲ್ಟಿಯಾಗಿ ಮೃತಪಟ್ಟಿದ್ದರು.
ಅಪಾಯಕಾರಿ ರಸ್ತೆಯನ್ನು ದುರಸ್ಥಿ ಮಾಡಿಸುವಂತೆ ಸಾರ್ವಜನಿಕರು ಶಾಸಕರಿಗೆ ಮನವಿ ಮಾಡಿದ್ದರು.ಶಾಸಕರು ದುರಸ್ತಿ ಕಾರ್ಯ ಮಾಡುವಂತೆ ಇಲಾಖೆಗೆ ಸೂಚಿಸಿದ ಹಿನ್ನಲೆಯಲ್ಲಿ ಇಲಾಖೆ ಸ್ಪಂದಿಸಿದ್ದು ಫೆ.3 ಶನಿವಾರ ದುರಸ್ಥಿ ಕಾರ್ಯ ನಡೆಯಲಿದೆ.
























