ಕಾಣಿಯೂರು: ಇಲ್ಲಿನ ಯಕ್ಷಮಿತ್ರ ಬಳಗದ ವತಿಯಿಂದ ನಡೆಯಲಿರುವ ಶ್ರೀ ದೇವಿ ಲಲಿತೋಪಖ್ಯಾನ ಯಕ್ಷಗಾನ ಬಯಲಾಟದ ಆಮಂತ್ರಣ ಪತ್ರಿಕೆಯನ್ನು ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ಜ. 2ರ ಮಂಗಳವಾರ ಸಂಜೆ 6.30ರಿಂದ ಕಾಣಿಯೂರು ಜಾತ್ರಾ ಗದ್ದೆಯಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ ಮೇಳದಿಂದ `ಶ್ರೀ ದೇವಿ ಲಲಿತೋಪಖ್ಯಾನ’ ಯಕ್ಷಗಾನ ಬಯಲಾಟ ನಡೆಯಲಿದೆ.

ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕಾಣಿಯೂರು ಮಠದ ಮೆನೇಜರ್ ನಿರಂಜನ ಆಚಾರ್ಯ ಅವರು ಆಮಂತ್ರಣವನ್ನು ಬಿಡುಗಡೆಗೊಳಿಸಿದರು.
ಯಕ್ಷಮಿತ್ರ ಬಳಗದ ಅಧ್ಯಕ್ಷ ಹರಿಪ್ರಸಾದ್ ರೈ ಕಾಣಿಯೂರು, ಸಂಚಾಲಕ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಕಾರ್ಯದರ್ಶಿ ನಾರಾಯಣ ಭಟ್, ಉಪಾಧ್ಯಕ್ಷ ಮೋನಪ್ಪ ಬಂಡಾಜೆ, ಜತೆ ಕಾರ್ಯದರ್ಶಿ ರಕ್ಷಿತ್ ಭಂಡಾರಿ, ಪದಾಧಿಕಾರಿಗಳಾದ ಜಯಂತ ವೈ. ಚಾರ್ವಾಕ, ಡಾ. ಉದಯ ಕುಮಾರ್, ವಾಸುದೇವ ನಾಯ್ಕ್ ತೋಟ, ಪರಮೇಶ್ವರ ಅನಿಲ, ಜಯಂತ ಅಬೀರ, ರಾಜೇಶ್ ಮೀಜೆ, ದಿನೇಶ್ ಪೈಕ, ರವೀಂದ್ರ ಅನಿಲ, ಪ್ರೀತಮ್ ಕಂಡೂರು, ಬಾಲಚಂದ್ರ ಅಬೀರ, ಸೀತಾರಾಮ ಅನಿಲ, ರಂಜಿತ್ ಅಬೀರ, ಪ್ರಗತ್ ರಾಜ್ ಬೈತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.
























