ಜಾಲ್ಸೂರು-ಕಾಸರಗೋಡು ರಸ್ತೆಯಲ್ಲಿ ಆನೆ ಪ್ರತ್ಯಕ್ಷ | ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡ ಬೈಕ್ ಸವಾರ

ಜಾಲ್ಸೂರು: ಜಾಲ್ಲೂರು- ಕಾಸರಗೋಡು ಅಂತರಾಜ್ಯ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು, ತಿರುವಿನಲ್ಲಿ ಎದುರಿನಿಂದ ಬಂದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ಸುಳ್ಯ ಸಮೀಪದ ಪಂಜಿಕಲ್ಲಿನಲ್ಲಿ ಶನಿವಾರ ನಡೆದಿದೆ.

ದೇಲಂಪಾಡಿ ಗ್ರಾಮದ ಬೆಳ್ಳಿಪಾಡಿ ಗ್ರಾಮ ಸುತ್ತ ಮುತ್ತ ಕಾಡಿನಿಂದ  ಆವರಿಸಿದ್ದು, ಈ ಪರಿಸರದಲ್ಲಿ ರಾತ್ರಿ, ಹಗಲೆನ್ನದೆ ಆನೆಗಳು ಓಡಾಡುತ್ತಿರುತ್ತವೆ. ಇಲ್ಲಿನ ಜನ ಪ್ರತಿ ದಿನ ಆತಂಕದಲ್ಲೇ ಬದುಕುವಂತಾಗಿದೆ. ಹಲವು ದಿನಗಳಿಂದ ನಿರಂತರವಾಗಿ ಕಾಡಾನೆಗಳು ಕೃಷಿಕರ ತೋಟಗಳಿಗೆ ದಾಳಿ ಇಡುತ್ತಿದ್ದು, ಕೃಷಿಯನ್ನು ಹಾನಿ ಮಾಡುತ್ತಿವೆ.

ಕಾಸರಗೋಡು ಹಾಗೂ ಸುಳ್ಯ ಮುಖ್ಯ ರಸ್ತೆ ಆಗಿರುವ ಇಲ್ಲಿ ಅನೇಕರು ದಿನನಿತ್ಯ ಓಡಾಡುತ್ತಿರುತ್ತಾರೆ. ಶಾಲಾ-ಕಾಲೇಜಿಗೆ ದಿನನಿತ್ಯ ಅನೇಕ ಮಕ್ಕಳು ಹೋಗುತ್ತಿರುತ್ತಾರೆ. ಈ ಬಗ್ಗೆ ಅನೇಕ ಬಾರಿ ಅರಣ್ಯ ಇಲಾಖೆಗಮನಕ್ಕೆ ತಂದಿದ್ದರು. ಅವರು ಏನು ಮಾಡದ ಪರಿಸ್ಥಿತಿಯಲ್ಲಿದ್ದಾರೆ. ಈ ಕಡೆಯಿಂದ ಓಡಿಸಿ ಇನ್ನೊಂದು ಕಾಡಿಗೆ ಬಿಟ್ಟರೆ, ಅಲ್ಲಿ ಜನರಿಗೆ ಕಾಟ ಕೊಟ್ಟು, ತಿಂದು ತೇಗಿ ಮತ್ತೆ ಇತ್ತಕಡೆ ಪಯಣ ಬೆಳೆಸುತ್ತದೆ. ಒಟ್ಟಿನಲ್ಲಿ ಜನ ಆತಂಕದಿಂದ ದಿನ ಕಳೆಯುವಂತಾಗಿದೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top