ವಿಟ್ಲ: ಸೇತುವೆ ನಿರ್ಮಾಣಕ್ಕೆಂದು ತಂದಿಟ್ಟಿದ್ದ ವಸ್ತುಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಬಿ ಮೂಡ ಗ್ರಾಮದ ನಿವಾಸಿ, ಕೆ.ಎಸ್.ಆರ್. ಕನ್ ಸ್ಟ್ರಕ್ಷನ್ ಕಂಪೆನಿಯ ಪಿಆರ್ ಒ ಆಗಿರುವ ಆರ್.ನಂದಕುಮಾರ್ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆಂದು ತಂದಿಟ್ಟಿದ್ದ ಕಬ್ಬಿಣದ ಸಲಾಖೆಗಳು, ಪ್ಲೇಟ್ಸ್ ಇನ್ನಿತರ ಸಾಮಾಗ್ರಿಗಳು ಸೋಮವಾರ ಕಳ್ಳತನವಾಗಿತ್ತು. ಕಳ್ಳತನವಾದ ಸಾಮಾಗ್ರಿಗಳ ಒಟ್ಟು ಮೌಲ್ಯ 3.50 ಲಕ್ಷ ಎಂದು ಅಂದಾಜಿಸಲಾಗಿದೆ.
























