ಬೆಳಂದೂರು: ಬೆಳಂದೂರು ಗ್ರಾಮದ ಶ್ರೀ ಉಳ್ಳಾಕುಲು, ವ್ಯಾಘ್ರ ಚಾಮುಂಡಿ ಮತ್ತು ಪರಿವಾರ ದೈವಗಳ ಸಾನಿಧ್ಯ ಕೊಡಿಮಾರು ಅಬೀರದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದವು.
ಶಿವರಾಮ ಉಪಾಧ್ಯಾಯ ಮತ್ತು ಜಗನ್ನಾಥ ಕಲ್ಪಡ ನೇತೃತ್ವದಲ್ಲಿ ಬೆಳಿಗ್ಗೆ ಗಣಪತಿ ಹವನ ಮೃತ್ಯುಂಜಯ ಹೋಮ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು ಸಂಜೆ ದುರ್ಗಾ ಪೂಜೆ ನಡೆದು ರಾತ್ರಿ ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ತಿಮ್ಮಪ್ಪ ಗೌಡ ಕಾಯೆರ್ತಡಿ, ಅಧ್ಯಕ್ಷರಾದ ಉದಯ ರೈ ಮಾದೋಡಿ, ಪ್ರಧಾನ ಕಾರ್ಯದರ್ಶಿ ಜಯಂತ ಅಬೀರ, ಕೋಶಾಧಿಕಾರಿ ಶೇಷಪ್ಪ ಕರೆಮನೆ, ತರವಾಡು ಮನೆಯ ಕೃಷ್ಣಪ್ಪ ಗೌಡ ಕಂಡೂರು,ಸೇವಾಕರ್ತರಾದ ವಿಷ್ಣು ಗೌಡ ಅಬೀರ, ಸಮಿತಿಯ ಪದಾಧಿಕಾರಿಗಳು, ಊರವರು ಉಪಸ್ಥಿತರಿದ್ದರು.

























