ಮಾಣಿಲ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ | ಪರಿಸರ ಜಾಗೃತಿ ಮೂಡಿಸಲು ಜಾಥಾ

ಪುತ್ತೂರು: ಪರಿಸರ ಪ್ರಜ್ಞೆಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಾದ್ದು ಇಂದಿನ ಅಗತ್ಯ  ಎಂದು  ಶಿಕ್ಷಕಿ ಲತಾ ಯು. ಹೇಳಿದರು.

ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ  ‘ವಿಶ್ವಪರಿಸರ ದಿನ’ ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಿಡವೊಂದಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕನ್ನಡ ಶಿಕ್ಷಕ ಸುಧೀಶ್ ಕೆ , ವಿಜ್ಞಾನ ಶಿಕ್ಷಕಿ ಮಮತಾ ರಾವ್. ಬಿ ಪರಿಸರ ದಿನಾಚರಣೆಯ ಮಹತ್ವ ವಿವರಿಸಿದರು.  ವಿದ್ಯಾರ್ಥಿಗಳು ಪರಿಸರ ಗೀತೆಗಳನ್ನು ಹಾಡಿದರು. ಗಿಡಮರಗಳ ಮಹತ್ವ ಸಾರುವ ನೃತ್ಯವನ್ನು ಗೀತಾಲಕ್ಷ್ಮೀ  ಮತ್ತು ಶೈನಾ ಪ್ರಸ್ತುತಪಡಿಸಿದರು.





















































 
 

ವಿದ್ಯಾರ್ಥಿನಿ ಗೀತಾಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಫಾತಿಮತ್ ಝಿಲ್ಪಾ ಸ್ವಾಗತಿಸಿದರು. ಕೀರ್ತನಾ ವಂದಿಸಿದರು. ಶಾಲಾ ಶಿಕ್ಷಕವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು .

ಈ ಸಂದರ್ಭದಲ್ಲಿ ಪರಿಸರ ದಿನದ ಮಹತ್ವ ಸಾರುವ ಸ್ವರಚಿತ ಚಿತ್ರಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿಸಿದರು. ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಜಾಥಾ ನಡೆಸಲಾಯಿತು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಕೈಗೊ೦ಡರು.  ‘ಅಶ್ವಿನಿ ಇಕೋ ಕ್ಲಬ್’ ವತಿಯಿಂದ ಶಾಲಾ ಪರಿಸರದಲ್ಲಿ ವಿವಿಧ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top