ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಆಡಿಯೋ, ವೀಡಿಯೋ

ಪುತ್ತೂರು : ಆಧುನಿಕ ಜಗತ್ತಿನಲ್ಲಿ ಆಧುನೀಕರಣಕ್ಕೆ ತಕ್ಕಂತೆ ಒಂದೆಡೆ ಜಗತ್ತಿನ ಆಗುಹೋಗುಗಳು ಕ್ಷಣಾರ್ಧದಲ್ಲಿ ಜನರನ್ನು ತಲುಪುತ್ತಿದ್ದು, ವಾಟ್ಸ್ಅಪ್, ಫೇಸ್ಬುಕ್, ಟ್ವಿಟರ್ ಮುಂತಾದ ಜಾಲತಾಣ ಸೌಲಭ್ಯಗಳು ಸಹಕಾರಿಯಾಗಿವೆ. ಇನ್ನೊಂದೆಡೆ ಅಷ್ಟೇ ವೇಗದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಮನುಷ್ಯರ ತೇಜೋವಧೆಗಳು ನಡೆಯುತ್ತಿರುವುದು ಆಘಾತಕಾರಿ ಸಂಗತಿಯಾಗಿದ್ದು, ಸಮಾಜದ ಮೇಲೂ ಕೆಟ್ಟ ಪರಿಣಾಮ ಬೀಳುವುದರಲ್ಲಿ ಸಂದೇಹವಿಲ್ಲ.

ಇತ್ತೀಚಿನ ದಿನಗಳಲ್ಲಿ ವ್ಯಕ್ತಿಗತವಾಗಿ ಕೆಟ್ಟ ಶಬ್ದಗಳಿಂದ ಅವಹೇಳನ ಮಾಡಿ ಆತನ ವರ್ಚಸ್ಸನ್ನು ಹಾಳುಗೆಡವುತ್ತಿರುವ ಸಂಗತಿಗಳು ಪ್ರಸ್ತುತ ಪ್ರತಿಯೊಂದು ದಿನಗಳಲ್ಲೂ ನಾವು ಕಾಣುತ್ತಿದ್ದೇವೆ. ಕೇವಲ ಒಂದು ಟಚ್ ಮೂಲಕ ಇಂತಹಾ ಪ್ರಕರಣಗಳು ನಮ್ಮ ಕಣ್ಣಮುಂದೆ ಕ್ಷಣಾರ್ಧದಲ್ಲಿ ಕಾಣಸಿಗುತ್ತವೆ.

ಅದರಲ್ಲೂ ದೇಶದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರಾಜಕೀಯ ಪಕ್ಷ ಹಾಗೂ ಪಕ್ಷಕ್ಕೆ ಸೇರಿದ ಪ್ರಮುಖರ ತೇಜೋವಧೆಗಳು ಅತ್ಯಂತ ಹೆಚ್ಚಾಗಿ ವಾಟ್ಸ್ಅಪ್ ಮೂಲಕ ಹರಿದಾಡುತ್ತಿದೆ. ಅದೂ ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ಹಲವಾರು ಪಕ್ಷಗಳ ಚುನಾವಣೆ ಬಂತೆಂದರೆ ಸಾಕು ಇಂತಹಾ ತೇಜೋವಧೆಗಳನ್ನು ಮಾಡಲು ಶುರುವಿಟ್ಟುಕೊಳ್ಳುತ್ತವೆ. ಉದಾಹರಣೆಗೆ ಯಾರೋ ಒಬ್ಬ ತನ್ನ ಗೆಳೆಯರಾಗಲಿ ಅಥವಾ ಎರಡು-ಮೂರನೇ ವ್ಯಕ್ತಿಯಾಗಲಿ ತನ್ನೊಂದಿಗೆ ಇದ್ದಾಗ ರಾಜಕೀಯ ಪಕ್ಷದ ಪ್ರಮುಖನಾಗಲಿ ಅಥವಾ ಓರ್ವ ವ್ಯಕ್ತಿಯನ್ನು ಕೆಟ್ಟ ಶಬ್ದಗಳಿಂದ ಅವಹೇಳ ಮಾಡುತ್ತಿರುವುದನ್ನು ಯಾರೋ ಒಬ್ಬ ತನಗಾಗದವ ಆತನ ಆ ಧ್ವನಿಯನ್ನು ವಾಟ್ಸ್ಅಪ್ ಮೂಲಕ ಆತನಿಗೆ ತಿಳಿಯದಂತೆ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿರುತ್ತಾನೆ. ಆಗ ಅವಾಂತರಗಳು ಸೃಷ್ಟಿಯಾಗುವುದು ಸಹಜ. ಈ ಸಂದರ್ಭದಲ್ಲಿ ಸಮಾಜದ ಪ್ರತಿನಿಧಿಯಾಗಲಿ, ಮುಖಂಡನಾಗಲಿ, ರಾಜಕೀಯ ಪಕ್ಷದ ಒಳ್ಳೆಯ ನಾಯಕಕನಾಗಲಿ ತನ್ನ ಉತ್ತಮ ಕಾರ್ಯದ ವರ್ಚಸ್ಸನ್ನು ಕಳೆದುಕೊಳ್ಳುವ ಮೂಲಕ ಸಮಾಜದಲ್ಲಿ ತಲೆಎತ್ತಿ ನಿಲ್ಲದ ಪರಿಸ್ಥಿತಿ ಉಂಟಾಗುತ್ತಿದೆ.





















































 
 

ಇದರ ಪರಿಣಾಮ ಓರ್ವ ವ್ಯಕ್ತಿಯನ್ನು ತೇಜೋವಧೆ ಮಾಡುವುದರಿಂದ ಆತ ಪ್ರತಿನಿಧಿಸುವ ಪಕ್ಷಕ್ಕೂ ಕೆಟ್ಟ ಹೆಸರು ಬರುವುದು ಸಹಜ. ಈ ನಿಟ್ಟಿನಲ್ಲಿ ಇದಕ್ಕೆ ಕಡಿವಾಣ ಹಾಕುವುದು ಇಲ್ಲಿ ಮುಖ್ಯವಾಗುತ್ತದೆ.

ಜಾಲತಾಣಗಳಲ್ಲಿ ತೇಜೋವಧೆಯಂತಹ ವೀಡಿಯೋ, ಆಡಿಯೋ ಅಪ್ಲೋಡ್ ಮಾಡಿ ಬಳಿಕ ಇದು ನನ್ನದಲ್ಲ ಎಂದು ಸಮರ್ಥನೆ ಮಾಡುವವರು ಧೈರ್ಯ ಇಲ್ಲದಿದ್ದಲ್ಲಿ ಯಾಕೆ ಈ ರೀತಿ ಮಾಡಬೇಕು ? ಇಂತಹಾ ತೇಜೋವಧೆಗಳು ಎಷ್ಟು ಸರಿ. ಯಾರೇ ಆಗಲಿ ನಿದರ್ಶನ ಇದ್ದರೆ ಮಾತ್ರ ಮಾಡಬೇಕು. ಸರಕಾರ ಯಾಕೇ ಈ ರೀತಿ ಮಾಡುವವರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಯಾಕೆ ಸಾಧ್ಯವಾಗಿಲ್ಲ ?

ಸರಕಾರದಿಂದ ಕಡಿವಾಣ : ಪ್ರಸ್ತುತ ಜಗತ್ತಿನಲ್ಲಿ ಬೇಕಾದಷ್ಟು ಸಾಮಾಜಿಕ ಜಾಲತಾಣಗಳು ದಿನದಿಂದ ದಿನಕ್ಕೆ ಅಭಿವೃದ್ಧಿಗೊಳ್ಳುತ್ತಾ ಇದೆ. ಸಾಮಾಜಿಕ ಜಾಲತಾಣಗಳನ್ನು ಬಳಸದೇ ಇರುವ ವ್ಯಕ್ತಿ ಶೇಕಡಾವಾರು ಕಡಿಮೆ. ಎಲ್ಲರಲ್ಲೂ ಅಂಡ್ರಾಯಿಡ್ ಮೊಬೈಲ್ಗಳ ಬಳಕೆ ಆಗುವುದರಿಂದ ತೇಜೋವಧೆಯಂತಹ ಆವಾಂತರಗಳು ನಡೆಯುತ್ತಿರುತ್ತದೆ. ಸಾಮಾಜಿಕ ಜಾಲತಾಣಗಳನ್ನು ಕೆಲವರು ಒಳ್ಳೆಯದಕ್ಕೆ ಬಳಸಿದರೆ, ಮತ್ತೆ ಕೆಲವು ಪುಂಡ ಪೋಕರಿಗಳು ಕೆಟ್ಟದಕ್ಕೂ ಬಳಸುತ್ತಾರೆ. ಈ ನಿಟ್ಟಿನಲ್ಲಿ ಸರಕಾರ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುವವರ ಮೇಲೆ ಹದ್ದಿನ ಕಣ್ಣು ಇಡಬೇಕಾಗಿದೆ. ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಬೇಕಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳ ತಾಂತ್ರಿಕತೆಯಲ್ಲಿ ನೀತಿ ನಿಯಮಗಳನ್ನು ತಂದು, ಸಾಮಾಜಿಕ ಜಾಲತಾಣ ಅಭಿವೃದ್ಧಿಪಡಿಸುವ ಪ್ರತಿಯೊಂದು ಕಂಪೆನಿಗಳಿಗೆ ಬಳಕೆಯ ನೀತಿ ನಿಯಮಗಳನ್ನು ಅನುಸರಿಸುವಂತೆ ಎಚ್ಚರಿಕೆಯನ್ನು ನೀಡಬೇಕಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top