ಬಿಜತ್ರೆ ಕಾಲನಿಗೆ ಅಚ್ಛೇ ದಿನ್: ಕಾಮಗಾರಿ ಶಿಲಾನ್ಯಾಸ ನೆರವೇರಿಸಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಒಳಮೊಗ್ರು ಗ್ರಾಮದ ಬಿಜತ್ರೆ ಪರಿಶಿಷ್ಠ  ಪಂಗಡ ಕಾಲೋನಿಗೆ ಮಂಜೂರಾಗಿರುವ 20 ಲಕ್ಷ ರೂ. ಅನುದಾನದ ಅಬಿವೃಧ್ದಿ ಕಾಮಗಾರಿಯ ಶಿಲಾನ್ಯಾಸವನ್ನು ಶಾಸಕ ಸಂಜೀವ ಮಠದೂರು ಅವರು ನೆರವೇರಿಸಿದರು.

ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5 ವರ್ಷದ ಅವಧಿಯಲ್ಲಿ ರಸ್ತೆ ಕಾಮಗಾರಿಗಳಿಗೆ ಅತೀ ಹೆಚ್ಚು ಅನುದಾನವನ್ನು ರಸ್ತೆ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ. ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ದೃಷ್ಠಿಯಿಂದ ಕಾಂಕ್ರೀಟ್ ರಸ್ತೆಗೆ ಹೆಚ್ಚಿನ ಮಹತ್ವವವನ್ನು ನೀಡಲಾಗಿದೆ. ನೂತನ ವರ್ಷಕ್ಕೆ ಒಳಮೊಗ್ರು ಬಿಜತ್ರೆ ಕಾಲೋನಿ ಮಹಾಜನತೆಗೆ ಅಛ್ಛೇ ದಿನ್ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಭಾ.ಜ.ಪಾ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಭೂ ನ್ಯಾಯ ಮಂಡಲಿ ಸದಸ್ಯ ಹರೀಶ್ ಬಿಜತ್ರೆ, ಶಕ್ತಿಕೇಂದ್ರದ ಸಂಚಾಲಕರಾದ ರಾಜೇಶ್ ಪರ್ಪುಂಜ, ಜಯಂತ್, ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಅಭಿವೃಧ್ದಿ ಅಧಿಕಾರಿ, ಪಕ್ಷದ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top