ಬೈಕ್‌ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

ಬೆಳ್ತಂಗಡಿ : ಎರಡು ದಿನಗಳ ಹಿಂದೆ ತಾಲೂಕಿನ ಮಡಂತ್ಯಾರು ಸಮೀಪದ ಪಾರೆಂಕಿ ಎಂಬಲ್ಲಿ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಪಾರೆಂಕಿ ನಿವಾಸಿ ಕೃಷ್ಣ (55) ಮೃತ ವ್ಯಕ್ತಿ. ಏ.20ರಂದು ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಮಾರಿಗುಡಿ ರಾಮನಗರ ಕ್ರಾಸ್ ಬಳಿಯಲ್ಲಿ ಸೈಪುದ್ದೀನ್ ಎಂಬಾತ ಮಡಂತ್ಯಾರುವಿನಿಂದ ಬಳ್ಳಮಂಜ ಕಡೆಗೆ ಬೈಕನ್ನು ಚಲಾಯಿಸಿಕೊಂಡು ಬಂದು ಬಳ್ಳಮಂಜ ಕಡೆಯಿಂದ ಮಡಂತ್ಯಾರು ಕಡೆಗೆ ಹೋಗುತ್ತಿದ್ದ […]

ಬೈಕ್‌ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು Read More »

ಹಾರ್ಮುಜ್‌ನಲ್ಲಿ ಮತ್ತೆ ಮೂರು ಹಡಗುಗಳ ಮೇಲೆ ಇರಾನ್‌ ದಾಳಿ

ಗನ್‌ಬೋಟ್‌ನಲ್ಲಿ ಬಂದು ಹಡಗುಗಳ ಮೇಲೆ ಗುಂಡಿನ ಸುರಿಮಳೆಗೈದ ಇರಾನ್‌ ಸೇನೆ ಟೆಹ್ರಾನ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಾತ್ಕಾಲಿಕ ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ಮುಂದುವರಿಸಿರುವಂತೆಯೇ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್‌ ಸೇನೆ ಮತ್ತೆ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಹಾರ್ಮುಜ್‌ ಜಾಗತಿಕ ಸಂಘರ್ಷದ ಕೇಂದ್ರವಾಗಿ ಮಾರ್ಪಟ್ಟಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ನಡುವೆ, ಸಮುದ್ರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮೂರು ಹಡಗುಗಳ ಮೇಲೆ ನಡೆದ ದಾಳಿ ಜಗತ್ತನ್ನು ಆತಂಕಕ್ಕೆ ತಳ್ಳಿದೆ. ಪಶ್ಚಿಮ ಏಷ್ಯಾದ ಅತ್ಯಂತ ನಿರ್ಣಾಯಕ

ಹಾರ್ಮುಜ್‌ನಲ್ಲಿ ಮತ್ತೆ ಮೂರು ಹಡಗುಗಳ ಮೇಲೆ ಇರಾನ್‌ ದಾಳಿ Read More »

ಬೆಳ್ತಂಗಡಿ : ಮಗನಿಂದಲೇ ತಂದೆಯ ಕೊಲೆ ಯತ್ನ

ಬೆಳ್ತಂಗಡಿ : ಮದ್ಯದ ಅಮಲಿನಲ್ಲಿ ಮಗನೇ ತಂದೆಯ ಮೇಲೆಯೇ ಮಚ್ಚಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಆಘಾತಕಾರಿ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿ ಭರತ್ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದವರು ಉಜಿರೆ ಗ್ರಾಮದ ಮಣಿಕೆ ನಿವಾಸಿ, ಗಾರೆ ಕೆಲಸ ಮಾಡುವ ನಾರಾಯಣ (52) ಎಂದು ಗುರುತಿಸಲಾಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮರದ ಮಿಲ್‌ನಲ್ಲಿ ಕೆಲಸ ಮಾಡುವ ಭರತ್ ಮತ್ತು ಆತನ ತಂದೆ ನಾರಾಯಣ ಇಬ್ಬರೂ ಮದ್ಯ ಸೇವಿಸಿದ್ದರು.

ಬೆಳ್ತಂಗಡಿ : ಮಗನಿಂದಲೇ ತಂದೆಯ ಕೊಲೆ ಯತ್ನ Read More »

ತಣ್ಣೀರುಬಾವಿ ದರೋಡೆ ಕೃತ್ಯದ ಅರೋಪಿ ಸೆರೆ

ಹುಟ್ಟುಹಬ್ಬ ಆಚರಿಸಲು ಬಂದವರನ್ನು ಬೆದರಿಸಿ ದರೋಡೆ ಮಾಡಿದ್ದ ರೌಡಿಶೀಟರ್‌ ಮಂಗಳೂರು: ತಣ್ಣೀರುಬಾವಿ ಬೀಚ್ ಬಳಿ ನಡೆದಿದ್ದ ದರೋಡೆ ಪ್ರಕರಣದ ತಲೆಮರೆಸಿಕೊಂಡಿದ್ದ ರೌಡಿಶೀಟರ್‌ನನ್ನು ಪಣಂಬೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕಸಬಾ ಬೆಂಗ್ರೆ ನಿವಾಸಿ ಚಂದು ಹಾರೀಸ್(33) ಬಂಧಿತ ಆರೋಪಿ. ಆರೋಪಿಯಿಂದ ಸುಲಿಗೆ ಮಾಡಿದ ವಸ್ತುಗಳಾದ ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್ ಮತ್ತು ಕೃತ್ಯಕ್ಕೆ ಬಳಸಿದ ಬೈಕನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಈಗಾಗಲೇ ರೌಡಿಶೀಟ್ ತೆರೆಯಲಾಗಿದೆ. ಏಪ್ರಿಲ್

ತಣ್ಣೀರುಬಾವಿ ದರೋಡೆ ಕೃತ್ಯದ ಅರೋಪಿ ಸೆರೆ Read More »

ಇಂದು ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ

ಪಶ್ಚಿಮ ಬಂಗಾಳದಲ್ಲಿ ಶಾಂತಿಯುತ ಮತದಾನಕ್ಕಾಗಿ ಅಭೂತಪೂರ್ವ ಬಂದೋಬಸ್ತು ನವದೆಹಲಿ: ಇಂದು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ತಮಿಳುನಾಡಿನಲ್ಲಿ 234 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಡಿಎಂಕೆ-ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಮತ್ತು ಎಐಎಡಿಎಂಕೆ – ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಇದೇ ಮೊದಲ ಬಾರಿಗೆ ತಮಿಳು ಸೂಪರ್ ಸ್ಟಾರ್

ಇಂದು ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ Read More »

ಪ್ರೀತಿಸಿ ಮಗು ಕರುಣಿಸಿದ ಪ್ರಕರಣ : ಮದುವೆಯಾಗುವುದೇ ಉತ್ತಮ ಎಂದ ಹೈಕೋರ್ಟ್‌

ಯುವತಿಗೆ ಮಾಸಿಕ ಹತ್ತು ಸಾವಿರ ರೂ. ಜೀವನಾಂಶ ನೀಡಲು ಸಿದ್ಧರಿದ್ದಿರಾ ಎಂದು ಕೇಳಿದ ಕೋರ್ಟ್‌ ಬೆಂಗಳೂರು: ಪುತ್ತೂರು ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ. ರಾವ್ ಯುವತಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಮಗು ಕರುಣಿಸಿದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಯುವತಿಗೆ ಆರೋಪಿಯಿಂದಲೇ ಮಗುವಾಗಿರುವುದರಿಂದ ಮದುವೆಯಾಗುವುದೇ ಉತ್ತಮ ಎಂದು ಅಭಿಪ್ರಾಯಪಟ್ಟಿದೆ. ಯುವತಿ ಹಾಗೂ ಮಗುವನ್ನು ಅನಾಥವನ್ನಾಗಿಸುವುದು ಸರಿಯಲ್ಲ. ತಂದೆಯಾಗಿರುವುದರಿಂದ ಮಗುವಿನ ಆರೈಕೆ ಮಾಡುವುದು ಆರೋಪಿಯ ಕರ್ತವ್ಯ. ಯುವತಿಗೆ ಮಾಸಿಕ

ಪ್ರೀತಿಸಿ ಮಗು ಕರುಣಿಸಿದ ಪ್ರಕರಣ : ಮದುವೆಯಾಗುವುದೇ ಉತ್ತಮ ಎಂದ ಹೈಕೋರ್ಟ್‌ Read More »

ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ

ವೆಬ್‌ಸೈಟ್‌, ಡಿಜಿಲಾಕರ್‌ನಲ್ಲೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಲಭ್ಯ ಬೆಂಗಳೂರು : ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತರದಿಂದ ಕಾಯುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದಾರೆ. ಈ ಬಾರಿ ರಾಜ್ಯದ ಒಟ್ಟು 2,870 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 8,65,988 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರ ಶೈಕ್ಷಣಿಕ ಬದುಕಿನ ಮೊದಲ ಮಹತ್ವದ ತಿರುವು ಇಂದು ನಿರ್ಧಾರವಾಗಲಿದೆ. ಫಲಿತಾಂಶ ಪ್ರಕಟವಾದ ನಂತರ

ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ Read More »

ಕರಾಯ ಬ್ರಹ್ಮಕಲಶೋತ್ಸವದಲ್ಲಿ ಉಲೂಪಿ ಕಲ್ಯಾಣ ತಾಳಮದ್ದಳೆ

ಪುತ್ತೂರು: ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಶ್ರೀ ಮಹೇಶ ಮರ್ದಿನಿ ಯಕ್ಷಕಲಾ ಪ್ರತಿಷ್ಠಾನ (ರಿ )ಚಾರ – ಹೆಬ್ರಿ ಸಂಯೋಜನೆಯಲ್ಲಿ ಚಾರ ಪ್ರದೀಪ ಹೆಬ್ಬಾರ್ ರಚಿತ ಉಲೂಪಿ ಕಲ್ಯಾಣ ತಾಳಮದ್ದಳೆ ಜರಗಿತು. ಭಾಗವತರಾಗಿ ದೇವಿ ಪ್ರಸಾದ್ ಗುರುವಾಯನಕೆರೆ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ ಆಳ್ವ ಬಾರ್ಯ ಅರ್ಥಧಾರಿಗಳಾಗಿ ಶ್ರೀಧರ ಎಸ್. ಪಿ. ಕೃಷ್ಣಾಪುರ (ಅರ್ಜುನ), ದಿವಾಕರ ಆಚಾರ್ಯ ಗೇರುಕಟ್ಟೆ(ಉಲೂಪಿ), ಸಂಜೀವ ಪಾರೆಂಕಿ (ಕೌರವ್ಯ), ಚಾರ ಪ್ರದೀಪ ಹೆಬ್ಬಾರ್( ದೃತರಾಷ್ಟ್ರ) ಭಾಗವಹಿಸಿದ್ದರು. ಬ್ರಹ್ಮಕಲಶೋತ್ಸವ

ಕರಾಯ ಬ್ರಹ್ಮಕಲಶೋತ್ಸವದಲ್ಲಿ ಉಲೂಪಿ ಕಲ್ಯಾಣ ತಾಳಮದ್ದಳೆ Read More »

ಗಾಂಜಾ ಬೆಳೆದು ಪೊಲೀಸರ ಅತಿಥಿಯಾದ ಟೆಕ್ಕಿ

ಹೈದರಾಬಾದ್: ಡ್ರಗ್ಸ್‌ ‌ಕಾರಣದಿಂದ ಕೆಲಸ ಕಳೆದುಕೊಂಡಿದ್ದ ಟೆಕ್ಕಿಯೊಬ್ಬ ಮನೆಯಲ್ಲೇ ಗಾಂಜಾ ಬೆಳೆದು ಪೊಲೀಸರ ಅತಿಥಿಯಾಗಿದ್ದಾನೆ. ಆರೋಪಿಯನ್ನು ನಾಚರಾಂ ನಿವಾಸಿ ಸಿ. ಎಚ್. ಶಶಿಧರ್ ಎಂದು ಗುರುತಿಸಲಾಗಿದೆ. ಆತನನ್ನು ಮಾದಕ ವಸ್ತು ನಿಷೇಧ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಬಂದಿತು ಮನೆಯಿಂದ ಪೊಲೀಸರು 17 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಗಿಡಗಳಿಂದ ಸುಮಾರು 10 ಕೆ.ಜಿ. ಡ್ರಗ್ಸ್ ದೊರೆಯಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಕೆಲವು ಗಿಡಗಳು ಮೂರು ಮೀ. ಗಳಷ್ಟು ಉದ್ದ ಬೆಳೆದಿದ್ದರೆ ಇನ್ನು ಕೆಲವು

ಗಾಂಜಾ ಬೆಳೆದು ಪೊಲೀಸರ ಅತಿಥಿಯಾದ ಟೆಕ್ಕಿ Read More »

ಪ್ರವಾಸಕ್ಕೆ ಗೆಳೆಯರ ಜೊತೆಗೆ ಮಲ್ಪೆಗೆ ಬಂದ ವ್ಯಕ್ತಿ ಸಾವು

ಉಡುಪಿ: ಪ್ರವಾಸಕ್ಕೆಂದು ಮಲ್ಪೆಗೆ ಬಂದಿದ್ದ ವ್ಯಕ್ತಿಯೊಬ್ಬರು ಹೊಟೇಲ್ ರೂಮಿನಲ್ಲೇ ‌ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರಿನ ಅನೇಕಲ್ ‌ನಿವಾಸಿ ಧನಂಜಯ್ ಕೆ. ಎನ್. (37) ಎನ್ನುವವರೇ ಮೃತ ದುರ್ದೈವಿ. ಇವರು ಸುಮಾರು 4 ವರ್ಷಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇವರು ಎ. 19 ರಂದು ತಮ್ಮ ಗೆಳೆಯರ ಜೊತೆಗೆ ಮಲ್ಪೆಗೆ ‌ಪ್ರವಾಸಕ್ಕೆ ಬಂದಿದ್ದಾರೆ. ಎ. 20 ರಂದು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಕೊಠಡಿಯಲ್ಲೇ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರವಾಸಕ್ಕೆ ಗೆಳೆಯರ ಜೊತೆಗೆ ಮಲ್ಪೆಗೆ ಬಂದ ವ್ಯಕ್ತಿ ಸಾವು Read More »

error: Content is protected !!
Scroll to Top