ಅತಿ ವೇಗದಿಂದ ಬಂದ ಕಾರು ಢಿಕ್ಕಿ: ವ್ಯಕ್ತಿ ಸಾವು

ಹುಬ್ಬಳ್ಳಿ: ರಸ್ತೆ ಪಕ್ಕದಲ್ಲಿ ಕೆಟ್ಟು ನಿಂತ ಜೆಸಿಬಿಯನ್ನು ರಿಪೇರಿ ಮಾಡುತ್ತಿದ್ದ ವ್ಯಕ್ತಿಗೆ ಎದುರಿನಿಂದ ವೇಗವಾಗಿ ಬಂದ ಕಾರೊಂದು ಗುದ್ದಿದ್ದು, ವ್ಯಕ್ತಿಯ ರುಂಡ ದೇಹದಿಂದ ಬೇರ್ಪಟ್ಟು ಕಾರಿನ ಎಂಜಿನ್ ಒಳಗೆ ಸಿಲುಕಿದ ಘಟನೆ ಕುಂದಗೋಳದ ಶೇರವಾಡದ ಬಳಿ ನಡೆದಿದೆ. ಸದಾನಂದ ಕಾಟೇಗಾರ(32) ಮೃತ ದುರ್ದೈವಿ. ಇವರು ಶೇರವಾಡ ಗ್ರಾಮದವರು ಎಂದು ತಿಳಿದು ಬಂದಿದೆ. ಹಾಳಾಗಿ ನಿಂತಿದ್ದ ಬುಲ್ಡೋಸರ್ ಅನ್ನು ಸರಿಪಡಿಸಲು ಸದಾನಂದ ಅವರು ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದಿರುವುದಾಗಿದೆ. ಪರಿಣಾಮ ಅವರ ರುಂಡ […]

ಅತಿ ವೇಗದಿಂದ ಬಂದ ಕಾರು ಢಿಕ್ಕಿ: ವ್ಯಕ್ತಿ ಸಾವು Read More »

ಸಿಲಿಂಡರ್ ಸ್ಪೋಟ: ಹೊತ್ತುರಿದ ‌ಹೊಟೇಲ್, ಓರ್ವನಿಗೆ ‌ಗಾಯ

ಬಳ್ಳಾರಿ: ಎರಡು ಗ್ಯಾಸ್‌‌ ಸಿಲಿಂಡರ್‌ಗಳು ‌ಸ್ಪೋಟಗೊಂಡ ಪರಿಣಾಮ ಹೊಟೇಲ್ ಒಂದು ಬೆಂಕಿಗೆ ಹೊತ್ತಿ ಉರಿದ ಘಟನೆ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ‌ನಡೆದಿದೆ. ಈರಣ್ಣ ಎನ್ನುವವರ ಹೊಟೇಲ್‌ನಲ್ಲಿ ‌ರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಈರಣ್ಣ ಅವರ ಕುಟುಂಬದ 9 ಜನರು ಹೊಟೇಲ್‌ನಲ್ಲಿ ‌ಮಲಗಿದ್ದು, ಇದರಲ್ಲಿ 10 ವರ್ಷದ ಶ್ರೀನಿವಾಸ್ ಎಂಬವನಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಗಾಯಾಳು ಬಾಲಕನನ್ನು ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಹೊಟೇಲ್‌ನ ವಸ್ತುಗಳೆಲ್ಲಾ ಬೆಂಕಿಗೆ ಆಹುತಿಯಾಗಿದೆ. ಅಕ್ಕಪಕ್ಕದಲ್ಲಿದ್ದ

ಸಿಲಿಂಡರ್ ಸ್ಪೋಟ: ಹೊತ್ತುರಿದ ‌ಹೊಟೇಲ್, ಓರ್ವನಿಗೆ ‌ಗಾಯ Read More »

ತುಮಕೂರು ಜಿಲ್ಲೆಯಲ್ಲಿ 32 ನವಿಲುಗಳ‌ ಸಾವು

ತುಮಕೂರು: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 32 ನವಿಲುಗಳು ಮೃತಪಟ್ಚಿವೆ.‌ ನವಿಲುಗಳ ಸಾವಿಗೆ ಬಿಸಿಲಿನ ತಾಪವೇ ಕಾರಣ ಎಂದು ಹೇಳಲಾಗುತ್ತಿದೆ. ಎ.16 – 21 ರ ವರೆಗೆ ತಾಲೂಕಿನ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂಧ್ರ, ಹುಲ್ಲೆನಹಳ್ಳಿ ಗ್ರಾಮದಲ್ಲಿ ಮೂವತ್ತೆರಡು ನವಿಲುಗಳು ಸಾವನ್ನಪ್ಪಿರುವುದಾಗಿದೆ. ಜಿಲ್ಲೆಯಲ್ಲಿಯೂ ಬಿಸಿಲಿನ ಧಗೆ ಹೆಚ್ಚುತ್ತಿದ್ದು, ಹೀಟ್‌ಸ್ಟ್ರೋಕ್‌ನಿಂದ ನವಿಲುಗಳ ಸಾವಾಗಿದೆ ಎಂದು ಹೇಳಲಾಗುತ್ತಿದೆ.

ತುಮಕೂರು ಜಿಲ್ಲೆಯಲ್ಲಿ 32 ನವಿಲುಗಳ‌ ಸಾವು Read More »

ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಏಳು ಜನರಿಂದ ಹಲ್ಲೆ: ದೂರು ದಾಖಲು

ಪುತ್ತೂರು: ಏಳು ಜನರ ಗುಂಪೊಂದು ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ಪುತ್ತೂರಿನ ಸರ್ಕಾರಿ ಬಸ್ ನಿಲ್ದಾಣದ ಸಮೀಪ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಬೆಳ್ತಂಗಡಿ ಆದಿಲ್ ಹುಸೈನ್ (21) ಎಂದು ಗುರುತಿಸಲಾಗಿದೆ. ಈ ಹಿಂದೆ ನಡೆದಿದ್ದ ಜಗಳವೊಂದನ್ನು ಬಿಡಿಸಿದ್ದಕ್ಕೆ ‌ಪ್ರತಿಕಾರವಾಗಿ ಈತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈತ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದು, ಎ. 22 ರಂದು ತನ್ನ ಗೆಳೆಯರಿಬ್ಬರ ಜೊತೆಗೆ ಪುತ್ತೂರು ಬಸ್‌ಸ್ಟಾಂಡ್‌ನಲ್ಲಿ ‌ಟಿ ಕುಡಿಯುತ್ತಿದ್ದ ವೇಳೆ ಈ ಹಲ್ಲೆ ನಡೆದಿದೆ.

ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಏಳು ಜನರಿಂದ ಹಲ್ಲೆ: ದೂರು ದಾಖಲು Read More »

ಪತಿಯ ಮನೆಯವರ ವರದಕ್ಷಿಣೆ ದಾಹಕ್ಕೆ ‌ಮಹಿಳೆ ಆತ್ಮಹತ್ಯೆ: ಒಂದೂವರೆ ವರ್ಷದ ಕೂಸು ಅನಾಥ

ಬೆಂಗಳೂರು: ಪತಿಯ ಮನೆಯವರ ವರದಕ್ಷಿಣೆ ಕಿರುಕುಳ ಸಹಿಸಲಾರದೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ತಲಘಟ್ಟಪುರದಲ್ಲಿ ನಡೆದಿದೆ. ಇವರ ಒಂದೂವರೆ ವರ್ಷದ ಮಗು ತಾಯಿಯ ಸಾವಿನಿಂದ ಅನಾಥವಾಗಿದೆ. ಮೃತರನ್ನು ತಮಿಳುನಾಡಿನ ತಿರುವಾರೂರ್ ಜಿಲ್ಲೆಯ ನೀಡಮಂಗಳಂ ನಿವಾಸಿ, ಸಾಫ್ಟ್‌ವೇರ್ ಉದ್ಯೋಗಿ ಭುವನೇಶ್ವರಿ ಎಂದು ಗುರುತಿಸಲಾಗಿದೆ. ಭುವನೇಶ್ವರಿ ಮತ್ತು ಹರೀಶ್ ಕುಮಾರ್ ಪ್ರೀತಿಸಿ ಮದುವೆಯಾಗಿದ್ದರು. ಅದ್ಧೂರಿಯಾಗಿ ಈ ಮದುವೆಯನ್ನು ಸಹ ಭುವನೇಶ್ವರಿ ಕುಟುಂಬಸ್ಥರು ‌ಮಾಡಿಕೊಟ್ಟಿದ್ದು, ಇದಕ್ಕಾಗಿ 25 ಲಕ್ಷ ರೂ. ವ್ಯಯಿಸಿದ್ದರು. ಹೀಗಿದ್ದರೂ ಪತಿ, ಪತಿಯ ತಾಯಿ ಮತ್ತು ಸಹೋದರ ಭುವನೇಶ್ವರಿ

ಪತಿಯ ಮನೆಯವರ ವರದಕ್ಷಿಣೆ ದಾಹಕ್ಕೆ ‌ಮಹಿಳೆ ಆತ್ಮಹತ್ಯೆ: ಒಂದೂವರೆ ವರ್ಷದ ಕೂಸು ಅನಾಥ Read More »

ಎಸ್‌ಎಸ್‌ಎಲ್ಸಿ ಫಲಿತಾಂಶ: ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ

ಈ ಬಾರಿಯೂ ಬಾಲಕಿಯರದ್ದೇ ಮೇಲ್ಗೈ ಬೆಂಗಳೂರು: 2025-26ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ ಮತ್ತು ಉತ್ತರ ಕನ್ನಡ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 98.40ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ ಶೇ 98.18 ರ ಫಲಿತಾಂಶದೊಂದಿಗೆ 2ನೇ ಸ್ಥಾನದಲ್ಲಿದೆ. ಉತ್ತರ ಕನ್ನಡ 3ನೇ ಸ್ಥಾನ (ಶೇ 98.09), ಹಾಸನ 4ನೇ ಸ್ಥಾನ

ಎಸ್‌ಎಸ್‌ಎಲ್ಸಿ ಫಲಿತಾಂಶ: ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ Read More »

ಈ ಸಲ ಎಸ್‌ಎಸ್‌ಎಲ್‌ಸಿಯಲ್ಲಿ ದಾಖಲೆಯ ಶೇ.94.1 ವಿದ್ಯಾರ್ಥಿಗಳು ತೇರ್ಗಡೆ

ಮೂವರು ವಿದ್ಯಾರ್ಥಿಗಳಿಗೆ ಭರ್ತಿ 625 ಅಂಕ-ರಾಜ್ಯದಲ್ಲೇ ಟಾಪರ್‌ಗಳು ಬೆಂಗಳೂರು: 2025-26ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ ಬುಧವಾರ ಶಿಕ್ಷಣ ಇಲಾಖೆಯ ವೆಬ್​ಸೈಟ್​ನಲ್ಲಿ ಪ್ರಕಟವಾಗಿದೆ. ಅದಾದ ಬೆನ್ನಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶದ ವಿವರ ನೀಡಿದರು. ಈ ಬಾರಿ SSLC ಪರೀಕ್ಷೆಯಲ್ಲಿ ಶೇ 94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ದಾಖಲೆಯ ಫಲಿತಾಂಶ ಬಂದಿದೆ ಎಂದು ಸಚಿವರು ತಿಳಿಸಿದರು. ಮೂವರು ವಿದ್ಯಾರ್ಥಿಗಳು 625ರಲ್ಲಿ 625

ಈ ಸಲ ಎಸ್‌ಎಸ್‌ಎಲ್‌ಸಿಯಲ್ಲಿ ದಾಖಲೆಯ ಶೇ.94.1 ವಿದ್ಯಾರ್ಥಿಗಳು ತೇರ್ಗಡೆ Read More »

ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರ ಮೂಗುತಿಗೆ ಗಮ್‌ಟೇಪ್‌ ಅಂಟಿಸಿದ ಸಿಬ್ಬಂದಿ

ಸಿಇಟಿ ಪರೀಕ್ಷೆಗೆ ಮೂಗುತಿಯೂ ನಿಷೇಧ ಹಿನ್ನೆಲೆಯಲ್ಲಿ ಕ್ರಮ ಚಿಕ್ಕಮಗಳೂರು : ಚಿಕ್ಕಮಗಳೂರಿನ ಸಿಇಟಿ ಪರೀಕ್ಷಾ ಕೇಂದ್ರವೊಂದರಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದ ನೂರಾರು ವಿದ್ಯಾರ್ಥಿನಿಯರಿಗೆ ಕಾಲೇಜಿನ ಪ್ರವೇಶ ದ್ವಾರದಲ್ಲೇ ಸಿಬ್ಬಂದಿ ಶಾಕ್ ನೀಡಿದ್ದಾರೆ. ನಗರದ MES ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಮೂಗುತಿ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರ ಮೂಗುತಿಗೆ ಸಿಬ್ಬಂದಿ ಗಮ್‌ಟೇಪ್ ಅಂಟಿಸಿ ಪರೀಕ್ಷಾ ಕೊಠಡಿಯೊಳಗೆ ಕಳುಹಿಸಿದ್ದಾರೆ. ಮೂಗುತಿ ತೆಗೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿಯರಿಗೆ ಈ ರೀತಿ ಗಮ್‌ಟೇಪ್ ಅಂಟಿಸಲಾಗಿದೆ. ರಾಜ್ಯಾದ್ಯಂತ ಇಂದು ಮತ್ತು

ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರ ಮೂಗುತಿಗೆ ಗಮ್‌ಟೇಪ್‌ ಅಂಟಿಸಿದ ಸಿಬ್ಬಂದಿ Read More »

ಪಶ್ಚಿಮ ಬಂಗಾಳದಲ್ಲಿ ಮತದಾನದ ವೇಳೆ ಬಾಂಬ್‌ ದಾಳಿ : ಹಲವರಿಗೆ ಗಾಯ

ಅಪರಿಚಿತ ದುಷ್ಕರ್ಮಿಗಳಿಂದ ಕಚ್ಚಾ ಬಾಂಬ್‌ ದಾಳಿ ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ಸಲುವಾಗಿ ಚುನಾವಣಾ ಆಯೋಗ ಅಭೂತಪೂರ್ವ ಬಂದೋಬಸ್ತಿನ ವ್ಯವಸ್ಥೆ ಮಾಡಿದ್ದರೂ ಹಿಂಸಾಚಾರದ ಘಟನೆಗಳು ನಡೆಯುತ್ತಿವೆ. ಮತದಾನ ನಡೆಯುತ್ತಿದ್ದ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಕಚ್ಚಾ ಬಾಂಬ್‌ ದಾಳಿ ನಡೆಸಿದ್ದಾರೆ. ಜಿಲ್ಲೆಯ ನೌಡಾದಲ್ಲಿ ಘಟನೆ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಇದು ಸ್ಥಳೀಯರಲ್ಲಿ ಭೀತಿ ಹೆಚ್ಚಿಸಿದೆ. ಬಾಂಬ್‌ ದಾಳಿಯ ಬಳಿಕ ಹಿಂಸಾಚಾರ ಪೀಡಿತವಾಗಿರುವ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಕಳೆದ ತಿಂಗಳು ಜಿಲ್ಲೆಯ

ಪಶ್ಚಿಮ ಬಂಗಾಳದಲ್ಲಿ ಮತದಾನದ ವೇಳೆ ಬಾಂಬ್‌ ದಾಳಿ : ಹಲವರಿಗೆ ಗಾಯ Read More »

ಮೇ 2ರಂದು ಕನ್ಯಾನ ಕುಟ್ಟಿತಡ್ಕ ಕ್ಷೇತ್ರದಲ್ಲಿ ಕೆಂಡಸೇವೆ

ಶ್ರೀ ವಿಷ್ಣುಮೂರ್ತಿ ವಯನಾಟ್‌ ಕುಲವನ್‌ ದೈವಸ್ಥಾನ ವಿಟ್ಲ: ಕನ್ಯಾನದ ಸಮೀಪ ಕುಟ್ಟಿತಡ್ಕದಲ್ಲಿರುವ ಶ್ರೀ ವಿಷ್ಣುಮೂರ್ತಿ ವಯನಾಟ್‌ ಕುಲವನ್‌ ಕ್ಷೇತ್ರದ ವಾರ್ಷಿಕ ಕೆಂಡಸೇವೆ ಮೇ 2ರಂದು ಜರುಗಲಿದೆ. ಬೆಳಗ್ಗೆ 6ಕ್ಕೆ ಮೆಲೇರಿ ರಚನೆ, ಸಂಜೆ 6ಕ್ಕೆ ದೀಪ ಪ್ರಜ್ವಲನೆ, 7ಕ್ಕೆ ವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನೆ, ರಾತ್ರಿ 7.30ಕ್ಕೆ ಭಂಡಾರ ತೆಗೆಯುವುದು, 8ಕ್ಕೆ ಮೆಲೇರಿಗೆ ಅಗ್ನಿಸ್ಪರ್ಶ, 10ಕ್ಕೆ ಅನ್ನ ಸಂತರ್ಪಣೆ, ರಾತ್ರಿ 12ರಿಂದ ಕುಳಿಚ್ಚಾಟಂ ದರ್ಶನ, ಮೇ 3ರಂದು ಮುಂಜಾನೆ 4ಕ್ಕೆ ವಿಷ್ಣುಮೂರ್ತಿ ದೈವದ ಕೆಂಡಸೇವೆ, ಬೆಳಗ್ಗೆ 5ಕ್ಕೆ

ಮೇ 2ರಂದು ಕನ್ಯಾನ ಕುಟ್ಟಿತಡ್ಕ ಕ್ಷೇತ್ರದಲ್ಲಿ ಕೆಂಡಸೇವೆ Read More »

error: Content is protected !!
Scroll to Top