ಹೃದಯಾಘಾತಕ್ಕೆ ಕೊರೋನಾ ‌ಲಸಿಕೆ ಕಾರಣವಲ್ಲ : ದಿನೇಶ್ ಗುಂಡೂರಾವ್ | ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಕಡ್ಡಾಯ | ಹಾರ್ಟ್ ಅಟ್ಯಾಕ್‌ಗೆ ‌ಸಂಬಂಧಿಸಿದಂತೆ ಪ್ರತ್ಯೇಕ ಪಠ್ಯ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆಯಿಂದಾಗಿ ಹೃದಯಾಘಾತ ಸಂಭವಿಸಿರುವುದಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಸಭೆ ನಡೆಸಿ‌ ಮಾತನಾಡಿದ ಅವರು, ಕೊರೋನಾ‌ದಿಂದ ಸ್ವಲ್ಪ ಮಟ್ಟಿಗೆ ಹೃದಯಾಘಾತಗಳಂತಹ ಅಪಾಯ ಹೆಚ್ಚಾಗಿದೆ. ಆದರೆ ಕೊರೋನಾ ಬಂದ ಒಂದು ವರ್ಷದೊಳಗೆ ರಕ್ತನಾಳ ಬ್ಲಾಕ್ ಆಗುವ ಸಂಭವ ಹೆಚ್ಚು. ಮೂರು ವರ್ಷಗಳ ನಂತರ ಅದರ ಸಾಧ್ಯತೆ ಕಡಿಮೆ. ಹೃದಯಾಘಾತ ಪ್ರಕರಣಗಳಿಗೆ ಕೊರೋನಾ ‌ಲಸಿಕೆ ಕಾರಣ ಅಲ್ಲ ಎಂದು ಅವರು ಹೇಳಿದ್ದಾರೆ. ಕೊರೋನಾ ‌ಲಸಿಕೆಯಿಂದ ಜನರಿಗೆ […]

ಹೃದಯಾಘಾತಕ್ಕೆ ಕೊರೋನಾ ‌ಲಸಿಕೆ ಕಾರಣವಲ್ಲ : ದಿನೇಶ್ ಗುಂಡೂರಾವ್ | ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಕಡ್ಡಾಯ | ಹಾರ್ಟ್ ಅಟ್ಯಾಕ್‌ಗೆ ‌ಸಂಬಂಧಿಸಿದಂತೆ ಪ್ರತ್ಯೇಕ ಪಠ್ಯ Read More »

ಯುವತಿಗೆ ಹಲ್ಲೆ ಮಾಡಿ ಆಕೆಯ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಯುವಕ

ಬಂಟ್ವಾಳ: ಯುವತಿಗೆ ಹಲ್ಲೆ ಮಾಡಿದ ಯುವಕನೊಬ್ಬ ಆಕೆಯ ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ಸುಜೀರಿನಲ್ಲಿ ‌ನಡೆದಿದೆ. ಗ್ಯಾರೇಜಿನಲ್ಲಿ ಕೆಲಸ‌ ಮಾಡುತ್ತಿದ್ದ ಕೊಡ್ಮಣ್ ನಿವಾಸಿ ಸುಧೀರ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕ. ಹಲ್ಲೆಗೊಳಗಾದ ಯುವತಿ ತುಂಬೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಯುವತಿಯ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಈ ಘಟನೆ ನಡೆದಿರುವ ಸಾಧ್ಯತೆ ಇದೆ. ಈ ಘಟನೆಗೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿಗೆ ಹಲ್ಲೆ ಮಾಡಿ ಆಕೆಯ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಯುವಕ Read More »

ಹಿಂದುತ್ವದ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು? | ಹೇರ್‌ಸ್ಟೈಲ್ ಬಗ್ಗೆ ಟೀಕೆ ಮಾಡಿದವರಿಗೆ ಸಚಿವರು ಕೊಟ್ಟ ಉತ್ತರ ಹೇಗಿತ್ತು?

ಕೊಪ್ಪಳ: ಹಿಂದುತ್ವದ ಕುರಿತು ಮಾತನಾಡುವವರು ಬಾಯಿ ಮುಚ್ಚಿಕೊಂಡಿರಲಿ. ಹಿಂದುತ್ವ ಎನ್ನುವವರಿಗೆ ಗೊತ್ತಿರುವುದು ಬದನೆಕಾಯಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ನಾಲಿಗೆ ಹರಿಬಿಟ್ಟಿದ್ದಾರೆ. ಬಂಗಾರಪ್ಪ ಅವರು ಈ ಹಿಂದೆ ಹಳ್ಳಿಗಳಲ್ಲಿ ದೇಗುಲಗಳಲ್ಲಿ ಆರ್ಥಿಕ ಬಲ ತುಂಬಲು ಆರಾಧನಾ ಯೋಜನೆ ಆರಂಭ ಮಾಡಿದ್ದರು. ಈಗ ಅಜೀಂ ಪ್ರೇಮ್‌ಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ಹಣ ನೀಡಿದ್ದಾರೆ. ಆದರೆ ಇವರ್ಯಾರೂ ಜಾತಿ ನೋಡಿಲ್ಲ. ಮಕ್ಕಳಿಗೆ ಬಾಳೆಹಣ್ಣು, ಮೊಟ್ಟೆ ನೀಡಿದ್ದಾರೆ ಎಂದಿದ್ದಾರೆ. ಹಾಗೆಯೇ ಗ್ಯಾರಂಟಿ ಯೋಜನೆಗಳಿಂದ ಪುರುಷರಿಗೆ ಯಾವುದೇ ಬೇಸರ ಇಲ್ಲ ಎಂದು

ಹಿಂದುತ್ವದ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು? | ಹೇರ್‌ಸ್ಟೈಲ್ ಬಗ್ಗೆ ಟೀಕೆ ಮಾಡಿದವರಿಗೆ ಸಚಿವರು ಕೊಟ್ಟ ಉತ್ತರ ಹೇಗಿತ್ತು? Read More »

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಪುತ್ತೂರು: ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಕನಾರ್ಟಕ ಕಟ್ಟಡ ಕಾರ್ಮಿಕರ ಸಂಘ ಪುತ್ತೂರು ಘಟಕದ ವತಿಯಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕಟ್ಟಡ ಕಾರ್ಮಿಕರು ದಿನ ನಿತ್ಯದ ದುಡಿಮೆಯಿಂದಲೇ ಕಾರ್ಮಿಕರು ಮತ್ತು ಅವಲಂಬಿತರು ಜೀವನ ನಡೆಸುತ್ತಿದ್ದು ಪ್ರಸ್ತುತ ಕೆಂಪು ಕಲ್ಲು ಮತ್ತು ಮರುಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಗದಿರುವುದರಿಂದ ಬಡ ಕಾರ್ಮಿಕರಿಗೆ ತುಂಬಾ ತೊಂದರೆಯಾಗಿದೆ. ನಿತ್ಯ ಕೆಲಸವನ್ನೇ ನಂಬಿ ಜೀವನ ನಡೆಸುವ ಕಾರ್ಮಿಕರಿಗೆ ಪ್ರಸ್ತುತ  ಕಲ್ಲು ಮತ್ತು ಮರುಳು ಸಿಗದಿರುವುದರಿಂದ ಕೆಲಸವಿಲ್ಲದಂತಾಗಿದೆ.ಅದರ ಬಗ್ಗೆ ತಾವುಗಳು ಪರಿಶೀಲನೆ ನಡೆಸಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ Read More »

ಡ್ರಗ್ಸ್ ಪಾರ್ಟಿ ನಡೆದರೆ ಬಾಡಿಗೆಗೆ ಸ್ಥಳಾವಕಾಶ ಒದಗಿಸಿದ ಮಾಲೀಕನ ಮೇಲೆಯೂ ಕೇಸ್?

ಬೆಂಗಳೂರು: ಡ್ರಗ್ಸ್ ದಂಧೆಗೆ, ಸೇವನೆಗೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಈಶಾನ್ಯ ವಿಭಾಗ ಪೊಲೀಸರು ರೆಸಾರ್ಟ್, ಹೋಂಸ್ಟೇ, ಹೊಟೇಲ್ ಸೇರಿದಂತೆ ಇನ್ನಿತರ ಪಾರ್ಟಿ ಮಾಡುವ ಸ್ಥಳಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ಹೊರವಲಯದಲ್ಲಿರುವ ರೆಸಾರ್ಟ್‌ಗಳು, ಹೊಟೇಲ್‌ಗಳು, ಹೋಮ್‌ಸ್ಟೇ‌ಗಳಲ್ಲಿ ಪಾರ್ಟಿಗಾಗಿ ಬುಕ್ ಮಾಡುವ ಕೆಲ ಆಯೋಜಕರು, ಅಲ್ಲಿ ಮಾದಕ ದ್ರವ್ಯಗಳಿಗಾಗಿಯೂ ವ್ಯವಸ್ಥೆ ಮಾಡುತ್ತಾರೆ‌. ಡ್ರಗ್ಸ್ ಸೇವನೆಯಂತಹ ಸಮಾಜ ಘಾತುಕ ಕೆಲಸಗಳೂ ನಡೆಯುತ್ತಿವೆ. ಈ ಹಿನ್ನೆಲೆ ಪಾರ್ಟಿಗಳಿಗೆ ತಮ್ಮ ಕಟ್ಟಡಗಳು, ಸ್ಥಳಗಳನ್ನು ಬಿಟ್ಟು ಕೊಡುವವರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ಹೋಂಸ್ಟೇ ನಡೆಸುವವರು

ಡ್ರಗ್ಸ್ ಪಾರ್ಟಿ ನಡೆದರೆ ಬಾಡಿಗೆಗೆ ಸ್ಥಳಾವಕಾಶ ಒದಗಿಸಿದ ಮಾಲೀಕನ ಮೇಲೆಯೂ ಕೇಸ್? Read More »

ಈಗ ಚುನಾವಣೆ ನಡೆದರೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಗ್ಯಾರಂಟಿ : ಬಿ.ವೈ. ವಿಜಯೇಂದ್ರ | ನನ್ನನ್ನೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸುವ ವಿಶ್ವಾಸವಿದೆ | ನನ್ನ ಕೆಲಸದ ಮೇಲೆ ಕಾರ್ಯಕರ್ತರು, ಹೈಕಮಾಂಡ್‌ಗೆ ತೃಪ್ತಿ ಇದೆ.

ಬೆಂಗಳೂರು: ಕರ್ನಾಟಕದಲ್ಲಿ ಈಗ ವಿಧಾನಸಭಾ ಚುನಾವಣೆ ನಡೆದರೂ ಅದರಲ್ಲಿ ಬಿಜೆಪಿಗೆ 130 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೇರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ವರೆಗೆ ತಾನು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. ಕೇಂದ್ರ ಸರ್ಕಾರದ ಜೊತೆಗೆ ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸುವುದಾಗಿ ಹೇಳಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಪಕ್ಷ ಸಂಘಟನೆಯ ದೃಷ್ಟಿಯಿಂದ ಕೆಲಸ ಮಾಡಿರುವುದಾಗಿಯೂ ಅವರು ನುಡಿದಿದ್ದಾರೆ. ಬಿಜೆಪಿಯ ಕಾರ್ಯಕರ್ತರು ಮತ್ತು ಹೈಕಮಾಂಡ್‌ಗೆ ನನ್ನ ಕಾರ್ಯ ವೈಖರಿಯ ಬಗ್ಗೆ ತೃಪ್ತಿ

ಈಗ ಚುನಾವಣೆ ನಡೆದರೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಗ್ಯಾರಂಟಿ : ಬಿ.ವೈ. ವಿಜಯೇಂದ್ರ | ನನ್ನನ್ನೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸುವ ವಿಶ್ವಾಸವಿದೆ | ನನ್ನ ಕೆಲಸದ ಮೇಲೆ ಕಾರ್ಯಕರ್ತರು, ಹೈಕಮಾಂಡ್‌ಗೆ ತೃಪ್ತಿ ಇದೆ. Read More »

ರೈತನನ್ನು ಜೀವಂತವಾಗಿ ನುಂಗಿದ ದೈತ್ಯ ಹೆಬ್ಬಾವು

ನಾಪತ್ತೆಯಾದ ರೈತನ ಶವ ಸಿಕ್ಕಿದ್ದು 26 ಅಡಿ ಉದ್ದದ ಹೆಬ್ಬಾವಿನ ಹೊಟ್ಟೆಯಲ್ಲಿ ಜಕಾರ್ತ : ನಾಪತ್ತೆಯಾಗಿದ್ದ ರೈತನೊಬ್ಬನ ಶವ ದೈತ್ಯ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾದ ಬೆಚ್ಚಿಬೀಳಿಸಿದ ಘಟನೆ ಇಂಡೋನೇಷ್ಯಾದಲ್ಲಿ ಸಂಭವಿಸಿದೆ. ಇಂಡೋನೇಷ್ಯಾದ ದಕ್ಷಿಣ ಬುಟಾನ್ ಜಿಲ್ಲೆಯ 63 ವರ್ಷದ ರೈತ 26 ಅಡಿ ಉದ್ದವಿದ್ದ ಹೆಬ್ಬಾವಿನ ಹೊಟ್ಟೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ರೈತ ತೋಟಕ್ಕೆ ಹೋದವರು ಹಿಂದಿರುಗಿ ಬಂದಿರಲಿಲ್ಲ. ಹುಡುಕಾಡಿದಾಗ ಮಧ್ಯಾಹ್ನ 2.30ರ ಸುಮಾರಿಗೆ ಹಳ್ಳಿಯ ಜನರು ಹೆಬ್ಬಾವಿನ ಹೊಟ್ಟೆಯಲ್ಲಿ ಶವವನ್ನು ಪತ್ತೆ ಮಾಡಿದ್ದಾರೆ. ತೋಟದಲ್ಲಿ ಒಂದು ಹೆಬ್ಬಾವು

ರೈತನನ್ನು ಜೀವಂತವಾಗಿ ನುಂಗಿದ ದೈತ್ಯ ಹೆಬ್ಬಾವು Read More »

15ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ, ಶೋಭಯಾತ್ರೆ | ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು : ವಿಶ್ವ ಹಿಂದೂ ಪರಿಷದ್ ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಮತ್ತು ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಹಾಗೂ ವಿಶ್ವ ಹಿಂದೂ ಪರಿಷದ್‌ ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆಯುವ 15ನೇ ವರುಷದ ಪುತ್ತೂರು ಮೊಸರುಕುಡಿಕೆ ಉತ್ಸವ ಮತ್ತು ಶೋಭಯಾತ್ರೆಯ ಆಮಂತ್ರಣ ಪತ್ರಿಕೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಬಿಡುಗಡೆ ಮಾಡಲಾಯಿತು. ಉತ್ಸವ ಸಮಿತಿಯ ಸಂಚಾಲಕ ಅರುಣ್ ಕುಮಾರ್ ರೈ ಆನಾಜೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ

15ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ, ಶೋಭಯಾತ್ರೆ | ಆಮಂತ್ರಣ ಪತ್ರಿಕೆ ಬಿಡುಗಡೆ Read More »

ರೈಲ್ವೆ ನಿಲ್ದಾಣದಲ್ಲಿ ಹೆರಿಗೆ ಮಾಡಿಸಿದ  ಸೇನಾ ವೈದ್ಯ

ಲಕ್ನೋ :  ಉತ್ತರ ಪ್ರದೇಶದ ರೈಲ್ವೆ ನಿಲ್ದಾಣದಲ್ಲಿ ಗರ್ಭಿಣಿ ನೋವಿನಲ್ಲಿ ನರಳಾಡುತಿದ್ದು , ಮೇಜರ್‌  ಡಾ. ರೋಹಿತ್‌ ಬಚ್‌ ವಾಲ ಎಂಬ  ಸೇನಾ ವೈದ್ಯ ಹೆರಿಗೆ ಮಾಡಿಸಿದ ಘಟನೆ ಶನಿವಾರ ನಡೆದಿದೆ . ಪನ್ವೇಲ್‌ – ಗೋರಖ್‌ ಪುರ ಎಕ್ಸ್‌ ಪ್ರೆಸ್ಸ್‌ ನಲ್ಲಿ ಪ್ರಯಾಣಿಸುತ್ತಿದ್ದಾಗ ಗರ್ಭಿಣಿಯೋರ್ವರಿಗೆ ಹೆರಿಗೆ ನೋವು ಪ್ರಾರಂಭವಾಗಿದ್ದು , ಝಾನ್ಸಿ ನಿಲ್ದಾಣದಲ್ಲಿ ಇಳಿದಿದ್ದಾರೆ . ಆಕೆಯ ಸ್ಥಿತಿ ಕಂಡು ರೈಲ್ವೆಯ ಮಹಿಳಾ ಸಿಬ್ಬಂದಿ ಸಹಾಯಕ್ಕೆ ಬಂದು ವೀಲ್‌ಚೇರ್‌ ನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ಓರ್ವ

ರೈಲ್ವೆ ನಿಲ್ದಾಣದಲ್ಲಿ ಹೆರಿಗೆ ಮಾಡಿಸಿದ  ಸೇನಾ ವೈದ್ಯ Read More »

ಭಾಷೆಯ ವಿಷಯದಲ್ಲಿ ದೇಶವನ್ನು ಬೇರ್ಪಡಿಸುವುದು ಸಲ್ಲ: ಕಂಗನಾ ‌ರಾಣಾವತ್

ಭಾಷಾ ವಿಭಜನೆ ಜನರ ಮಧ್ಯೆ ಸಂವಹನಕ್ಕೆ ಅಡ್ಡಿ ಮಾಡುತ್ತದೆ ಮುಂಬೈ: ಭಾಷಾ ವಿಷಯದಲ್ಲಿ ನಾವು ಸಮಾಜವನ್ನು ಬೇರ್ಪಡಿಸಬಾರದು. ದೇಶದ ಏಕತೆಯನ್ನು ನಾವು ಕಾಪಾಡಬೇಕು ಎಂದು ಸಂಸದೆ ಕಂಗನಾ ರಾಣಾವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತವನ್ನು ವಿಭಜಿಸುವ ಶಕ್ತಿಗಳಿಂದ ನಾವು ಅಂತರ ಕಾಪಾಡಿಕೊಳ್ಳಬೇಕು .ಭಾರತೀಯರು ವಿಭಿನ್ನ ಕ್ರಮಗಳ ಮೂಲಕ ಪರಸ್ಪರ ಸಂವಹನ ನಡೆಸಲು ಪ್ರಯತ್ನ ಪಡುತ್ತಾರೆ. ಭಾಷೆಗೆ ಸಂಬಂಧಿಸಿದ ಹಾಗೆ ಬೇರ್ಪಡಿಸಲು ಹೊರಟರೆ ಅದು ಅವರ ಪ್ರಯತ್ನಗಳಿಗೆ ಅಡ್ಡಿ ಮಾಡಿದ ಹಾಗಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇಲ್ಲಿಗೆ ಪ್ರವಾಸೋದ್ಯಮಕ್ಕಾಗಿ ಹಲವಾರು

ಭಾಷೆಯ ವಿಷಯದಲ್ಲಿ ದೇಶವನ್ನು ಬೇರ್ಪಡಿಸುವುದು ಸಲ್ಲ: ಕಂಗನಾ ‌ರಾಣಾವತ್ Read More »

error: Content is protected !!
Scroll to Top