ಎತ್ತಿನಹೊಳೆ ಯೋಜನೆಗೆ ಬಯಲುಸೀಮೆಯಲ್ಲೂ ವಿರೋಧ

ಅಣೆಕಟ್ಟು ನಿರ್ಮಾಣ ವಿರೋಧಿಸಿ ಪ್ರತಿಭಟನೆಗಿಳಿದ ದೊಡ್ಡಬಳ್ಳಾಪುರದ ಜನರು ಬೆಂಗಳೂರು: ನೇತ್ರಾವತಿಯ ಉಪನದಿಯಾದ ಎತ್ತಿನಹೊಳೆಯ ಹರಿವನ್ನು ತಿರುಗಿಸಿ ಬಯಲುಸೀಮೆಯ ಜಿಲ್ಲೆಗಳಿಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭದಿಂದಲೂ ವಿರೋಧ ಇದೆ. ಆದರೂ ಸರ್ಕಾರ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದು, ಈಗ ಇದಕ್ಕೆ ಬಯಲುಸೀಮೆಯಲ್ಲೂ ವಿರೋಧ ವ್ಯಕ್ತವಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಲಕ್ಕೆನಹಳ್ಳಿ ಬಳಿ ಎತ್ತಿನಹೊಳೆಯ ನೀರು ಸಂಗ್ರಹಿಸುವ ಸಲುವಾಗಿ ಬೃಹತ್‌ ಅಣೆಕಟ್ಟು ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ಯೋಜನೆಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ಲಕ್ಕೆನಹಳ್ಳಿ ಬಳಿ‌ ಎತ್ತಿನಹೊಳೆ‌ […]

ಎತ್ತಿನಹೊಳೆ ಯೋಜನೆಗೆ ಬಯಲುಸೀಮೆಯಲ್ಲೂ ವಿರೋಧ Read More »

ಗ್ಯಾರಂಟಿ ಯೋಜನೆ: ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರಿಂದ ಮಹತ್ವದ ಮಾಹಿತಿ

ರದ್ದಾಗಲಿವೆಯೇ ಗ್ಯಾರಂಟಿ ಯೋಜನೆಗಳು? ಬೆಂಗಳೂರು: ಕರ್ನಾಟಕದಲ್ಲಿನ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಹಾಗೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ರಸ್ತೆ ಬೇಕು ಎಂದಾದರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕಾಗುತ್ತದೆ ಎಂಬ ಅವರ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಯಾವುದೇ ಕಾರಣಕ್ಕೂ ಉಚಿತ ಯೋಜನೆಗಳನ್ನು ನಿಲ್ಲಿಸುವ ಮಾತೇ ಇಲ್ಲ. ಈ ಹಿಂದೆ ಗ್ಯಾರಂಟಿ ಯೋಜನೆಗಳ ಬಗ್ಗೆ ಹೇಳಲಾದ ಮಾಹಿತಿಗಳನ್ನು ತಪ್ಪಾಗಿ ಅರ್ಥೈಸಲಾಗಿರುವುದಾಗಿ ಅವರು ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಗೆ

ಗ್ಯಾರಂಟಿ ಯೋಜನೆ: ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರಿಂದ ಮಹತ್ವದ ಮಾಹಿತಿ Read More »

ಮಾದಕ ವಸ್ತು ಪೂರೈಸುತ್ತಿದ್ದ ಆರೋಪಿ ಪೊಲೀಸ್ ವಶಕ್ಕೆ

ಮಂಗಳೂರು: ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಮೈಸೂರಿನಲ್ಲಿ ಮಂಗಳೂರು ನಗರದ ಸೆನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಧ್ರುವ ಡಿ. ಶೆಟ್ಟಿ ಎಂದು ಗುರುತಿಸಲಾಗಿದ್ದು, ಈತ ಹಾಸನದ ಸಕಲೇಶಪುರದವನು ಎಂದು ತಿಳಿದು ಬಂದಿದೆ. ಈತನ ಬಗ್ಗೆ ಮಾದಕ ವಸ್ತು ಪೂರೈಕೆ ಆರೋಪದಲ್ಲಿ ಜುಲೈ 2 ರಂದು ಪ್ರಕರಣ ದಾಖಲಾಗಿತ್ತು. ಈಗಾಗಲೇ ಐವರು ಆರೋಪಿಗಳನ್ನು ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಬಂಧಿಸಲಾಗಿದ್ದು, ಇವರೆಲ್ಲರಿಗೂ ಧ್ರುವ ಡ್ರಗ್ಸ್ ಪೂರೈಕೆ ಮಾಡುತ್ತಿದ್ದನು ಎಂಬುದಾಗಿ ಮೂಲಗಳು ತಿಳಿಸಿವೆ. ಬಂಧಿತನಿಂದ ಮೊಬೈಲ್ ಫೋನ್,

ಮಾದಕ ವಸ್ತು ಪೂರೈಸುತ್ತಿದ್ದ ಆರೋಪಿ ಪೊಲೀಸ್ ವಶಕ್ಕೆ Read More »

ಗೋಮಾಳದ ಜಾಗವನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಗೆ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಪುತ್ತೂರು: ಮುಂಡೂರು ಗ್ರಾಮದಲ್ಲಿರುವ ಗೋಮಾಳಕ್ಕೆ ಮೀಸಲಿರಿಸಿದ ಜಾಗವನ್ನು ಗೋ ಶಾಲೆ ಆರಂಭಿಸಲು ಟ್ರಸ್ಟ್ ಗೆ ನೀಡಬೇಕೆಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ಬಗ್ಗೆ ಕಂದಾಯ ಇಲಾಖೆಯವರ ಜೊತೆ ಚರ್ಚಿಸಿ ಮುಂದಿನ ನಿರ್ಧಾರವನ್ನು ತಿಳಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಪುತ್ತೂರಿನಲ್ಲಿ ಗೋವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಗೋ ಶಾಲೆ ಬೇಕೆಂದು ಸಾರ್ವಜನಿಕರ ಅಭಿಪ್ರಾಯದಂತೆ ಪೂಜ್ಯ ಪೇಜಾವರ ಸ್ವಾಮೀಜಿಗಳು ಕಳೆದ ವರ್ಷದ ಶ್ರೀನಿವಾಸ ಕಲ್ಯಾಣ ಸಂದರ್ಭದಲ್ಲಿ ಗೋ ಶಾಲೆ ಆರಂಬಿಸಬೇಕೆಂಬ ಆಶಯ

ಗೋಮಾಳದ ಜಾಗವನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಗೆ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ Read More »

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಪುತ್ತೂರು ಘಟಕದಿಂದ ಧಾರ್ಮಿಕ ಪುಸ್ತಕಗಳ ಕೊಡುಗೆ

ಪುತ್ತೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ.ರಿ ಮೆಲ್ಕಾರ್ ಬಂಟ್ವಾಳ ಇದರ ಪುತ್ತೂರು ಘಟಕದ ವತಿಯಿಂದ ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಾಲಯದ ಧಾರ್ಮಿಕ ಗ್ರಂಥಾಲಯಕ್ಕೆ ಸದಸ್ಯರಿಂದ  ಸಂಗ್ರಹಿಸಿದ ಪುಸ್ತಕಗಳನ್ನು ಅರ್ಪಿಸುವ ಕಾರ್ಯಕ್ರಮವು ದೇವಳದ ಆಡಳಿತ ಕಚೇರಿಯಲ್ಲಿ ಜರಗಿತು. ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್ ಪುಸ್ತಕಗಳನ್ನು ಸ್ವೀಕರಿಸಿ ಹಿರಿಯರ ಸೇವಾ ಪ್ರತಿಷ್ಠಾನವು ಜ್ಞಾನಪ್ರಸಾರದ ಕಾರ್ಯದಲ್ಲಿ ಕೈಜೋಡಿಸಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಪುತ್ತೂರು ಘಟಕದ ಕೇಂದ್ರ ಸಮಿತಿ ಪ್ರತಿನಿಧಿ ಮತ್ತು ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಮಹಾಬಲ ರೈ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಪುತ್ತೂರು ಘಟಕದಿಂದ ಧಾರ್ಮಿಕ ಪುಸ್ತಕಗಳ ಕೊಡುಗೆ Read More »

ದಿಢೀರ್‌ ಪ್ರವಾಹಕ್ಕೆ 82 ಮಂದಿ ಬಲಿ; 41 ಜನರು ನಾಪತ್ತೆ

ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹ ವಾಷಿಂಗ್ಟನ್‌: ಅಮೆರಿಕದ ಟೆಕ್ಸಾಸ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಸಾವನ್ನಪ್ಪಿದವರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ಈ ಪೈಕಿ 28 ಮಕ್ಕಳು ಸೇರಿದ್ದಾರೆ. 41 ಮಂದಿ ಕಾಣೆಯಾಗಿದ್ದಾರೆ. ಕಳೆದ 100 ವರ್ಷಗಳಲ್ಲೇ ಇದು ಅತ್ಯಂತ ಭೀಕರ ಪ್ರವಾಹ ಎನ್ನಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಹೆಚ್ಚಿನ ಬಿರುಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇಲ್ಲಿ ವಿಷಪೂರಿತ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಹೇಳಲಾಗಿದೆ. ಮೃತರಿಗೆ

ದಿಢೀರ್‌ ಪ್ರವಾಹಕ್ಕೆ 82 ಮಂದಿ ಬಲಿ; 41 ಜನರು ನಾಪತ್ತೆ Read More »

ಬಸವರಾಜ ರಾಯರಡ್ಡಿಗೆ ಸತ್ಯವಾನ್ ರಾಯರಡ್ಡಿ ಪ್ರಶಸ್ತಿ ಕೊಡುತ್ತೇವೆ : ಆರ್‌.ಅಶೋಕ್‌ ವ್ಯಂಗ್ಯ

ವಿಪಕ್ಷಕ್ಕೆ ಅಸ್ತ್ರವಾಗಿ ಸಿಕ್ಕಿದ ರಸ್ತೆ ಬೇಕಾ? ಗ್ಯಾರಂಟಿ ಬೇಕಾ ಹೇಳಿಕೆ ಬೆಂಗಳೂರು : ನಿಮಗೆ ರಸ್ತೆ ಬೇಕಾ ಗ್ಯಾರಂಟಿ ಬೇಕಾ? ರಸ್ತೆ ಬೇಕಾದರೆ ಗ್ಯಾರಂಟಿ ನಿಲ್ಲಿಸುತ್ತೇವೆ ಎಂದಿರುವ ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿಕೆ ಸರ್ಕಾರದ ಮೇಲೆ ದಾಳಿ ಮಾಡಲು ಪ್ರತಿಪಕ್ಷಕ್ಕೆ ಹೊಸ ಅಸ್ತ್ರವಾಗಿ ಸಿಕ್ಕಿದೆ. ವಿಪಕ್ಷ ನಾಯಕ ಆರ್‌.ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಮತ್ತಿತರರು ಈ ಹೇಳಿಕೆ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ದುಸ್ಥಿತಿ

ಬಸವರಾಜ ರಾಯರಡ್ಡಿಗೆ ಸತ್ಯವಾನ್ ರಾಯರಡ್ಡಿ ಪ್ರಶಸ್ತಿ ಕೊಡುತ್ತೇವೆ : ಆರ್‌.ಅಶೋಕ್‌ ವ್ಯಂಗ್ಯ Read More »

ಆನ್‌ಲೈನ್‌ ಬೆಟ್ಟಿಂಗ್‌, ಗ್ಯಾಂಬ್ಲಿಂಗ್‌ ನಿಷೇಧಿಸಲು ಸಿದ್ಧತೆ

3 ವರ್ಷ ಜೈಲು, 5 ಲ.ರೂ. ದಂಡ ವಿಧಿಸುವ ಕಾನೂನು ರಚನೆಗೆ ಮುಂದಾದ ಸರ್ಕಾರ ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್‌ ನಿಷೇಧಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಹೊಸ ತಿದ್ದುಪಡಿ ಮಸೂದೆ ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ 2025 ಕರಡು ಸಿದ್ಧಪಡಿಸಲಾಗಿದೆ. ಮುಂಬರುವ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಪ್ರಸ್ತಾಪಿತ ಕಾನೂನು ಪ್ರಕಾರ ಗೇಮ್ ಆಫ್ ಚಾನ್ಸ್ ಅಂದರೆ ಯಾವುದೇ ಆಟ, ಸ್ಪರ್ಧೆಯ ಫಲಿತಾಂಶಗಳು ಅದೃಷ್ಟದಿಂದ ಅವಲಂಬಿತವಾಗಿರುವ, ಅನಿಶ್ಚಿತತೆಗಳಿಂದ ಕೂಡಿರುವ ಆನ್‌ಲೈನ್ ಗ್ಯಾಂಬ್ಲಿಂಗ್‌,

ಆನ್‌ಲೈನ್‌ ಬೆಟ್ಟಿಂಗ್‌, ಗ್ಯಾಂಬ್ಲಿಂಗ್‌ ನಿಷೇಧಿಸಲು ಸಿದ್ಧತೆ Read More »

ಎಡ್ಜ್‌ಬಾಸ್ಟನ್‌ನಲ್ಲಿ 6 ದಶಕಗಳ ಕಾಯುವಿಕೆಯ ಬಳಿಕ ಟೀ ಇಂಡಿಯಾಕ್ಕೆ ದಕ್ಕಿದ ಮೊದಲ ಗೆಲುವು

ಹಲವು ಕಾರಣಗಳಿಗೆ ವಿಶೇಷವಾಗಿದೆ ಶುಭಮನ್‌ ಗಿಲ್‌ ಪಡೆಯ ಟೆಸ್ಟ್‌ ಜಯ ಲಂಡನ್‌ : ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ದಕ್ಕಿದ ಅದ್ಭುತ ಗೆಲುವು ಹಲವು ಕಾರಣಗಳಿಂದಾಗಿ ಗಮನ ಸೆಳೆದಿದೆ. ಮುಖ್ಯವಾಗಿ ಸ್ಟಾರ್‌ ಆಟಗಾರರಿಲ್ಲದ, ಯುವ ಕ್ರಿಕೆಟಿಗರಿಂದಲೇ ತುಂಬಿದ ಟೀಂ ಇಂಡಿಯಾ ಹೊಸ ನಾಯಕನ ನೇತೃತ್ವದಲ್ಲಿ ಈ ಅದ್ಭುತ ಸಾಧನೆ ಮಾಡಿದೆ. ಇದಕ್ಕೂ ಮಿಗಿಲಾಗಿ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಸುಮಾರು ಆರು ದಶಕಗಳ ಕಾಯುವಿಕೆಯ ಬಳಿಕ ಭಾರತಕ್ಕೆ ಮೊದಲ ಗೆಲುವು ದಕ್ಕಿದೆ. ಶುಭ್‌ಮನ್ ಗಿಲ್

ಎಡ್ಜ್‌ಬಾಸ್ಟನ್‌ನಲ್ಲಿ 6 ದಶಕಗಳ ಕಾಯುವಿಕೆಯ ಬಳಿಕ ಟೀ ಇಂಡಿಯಾಕ್ಕೆ ದಕ್ಕಿದ ಮೊದಲ ಗೆಲುವು Read More »

ಯುವಕ-ಯುವತಿಯ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್‍ ಲೋಡ್‍ | ಇಬ್ಬರ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಇಲ್ಲಿನ ಬಿರುಮಲೆ ಬೆಟ್ಟದಲ್ಲಿ ಯುವಕ ಮತ್ತು ಯುವತಿಯ ಫೋಟೋ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಹಿನ್ನಲೆ ಪುತ್ತೂರು ನಗರ ಠಾಣೆಯಲ್ಲಿ ಯುವಕನ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುದ್ಮಾರು, ಕಡಬ ನಿವಾಸಿ ಪುರುಷೋತ್ತಮ (43) ಹಾಗೂ ಆರ್ಯಾಪು, ಪುತ್ತೂರು ನಿವಾಸಿ ರಾಮಚಂದ್ರ (38) ಬಂಧಿತ ವ್ಯಕ್ತಿಗಳು. ಯುವಕರು ಬಿರುಮಲೆ ಗುಡ್ಡೆಯಲ್ಲಿ  ಯುವಕ ಹಾಗೂ ಯುವತಿ ಇರುವಾಗ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ತಿಳಿದು ಬಂದಿದೆ. ಈ

ಯುವಕ-ಯುವತಿಯ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್‍ ಲೋಡ್‍ | ಇಬ್ಬರ ವಿರುದ್ಧ ಪ್ರಕರಣ ದಾಖಲು Read More »

error: Content is protected !!
Scroll to Top