ಮಂಗಳೂರು: ಹೃದಯಾಘಾತದಿಂದ ಇಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

ಮಂಗಳೂರು : ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಕುಸಿದು ಬಿದ್ದು ಮೃತಪಟ್ಟ ಘಟನೆ ಸುರತ್ಕಲ್‌ನ ಕೃಷ್ಣಾಪುರ ಹಿಲ್‌ಸೈಡ್ ಬಳಿ ಸಂಭವಿಸಿದೆ.ಮೃತರನ್ನು ಹಿಲ್‌ಸೈಡ್ ನಿವಾಸಿ ಅಸ್ಗರ್ ಅಲಿ ಅವರ ಪುತ್ರ ಅಫ್ತಾಬ್ (18) ಎಂದು ಗುರುತಿಸಲಾಗಿದೆ. ಅವರು ಸುರತ್ಕಲ್‌ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು. ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಫ್ತಾಬ್ ಮನೆಯಲ್ಲಿ ಸ್ನಾನಕ್ಕೆ ಹೋಗುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಅಸ್ಗರ್ ಅಲಿ ಅವರ ನಾಲ್ಕು ಮಕ್ಕಳಲ್ಲಿ ಅಫ್ತಾಬ್ ಏಕೈಕ ಪುತ್ರ. ಅವರ ಮೂವರು ಸಹೋದರಿಯರಿಗೆ […]

ಮಂಗಳೂರು: ಹೃದಯಾಘಾತದಿಂದ ಇಂಜಿನಿಯರಿಂಗ್‌ ವಿದ್ಯಾರ್ಥಿ ಸಾವು Read More »

ರಾಜ್ಯ ಸರಕಾರದ ಹಿಂದೂ ವಿರೋಧಿ ಧೋರಣೆ ವಿರುದ್ಧ ಹಿಂಜಾವೇ ಯಿಂದ ಬೃಹತ್‍ ಪ್ರತಿಭಟನೆ

ಪುತ್ತೂರು: ರಾಜ್ಯ ಸರಕಾರ ಹಿಂದೂ ವಿರೋಧಿ ಧೋರಣೆಯ ಮೂಲಕ ಹಿಂದೂ ಸಂಘಟನೆಗಳ ಸಾಮಾಜಿಕ ಕಾರ್ಯಕರ್ತರ ಮೇಲೆ ಕಾನೂನು ವಿರೋಧಿ ಕ್ರಮಗಳನ್ನು ನಡೆಸುತ್ತಿದೆ ಎಂದು ರಾಜ್ಯ ಸರಕಾರದ ನಿಲುವನ್ನು ಖಂಡಿಸಿ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಪರಿವಾರ ಸಂಘಟನೆಗಳ ಸಹಭಾಗಿತ್ವದಲ್ಲಿ ಬೃಹತ್ ಪ್ರತಿಭಟನೆ ಸೋಮವಾರ ಸಂಜೆ ದರ್ಬೆ ವೃತ್ತದಲ್ಲಿ ನಡೆಯಿತು. ಹಿಂದು ಜಾಗರಣ ವೇದಿಕೆ ಕರ್ನಾಟಕ ಪ್ರಾಂತದ ಕಾರ್ಯಾಕಾರಿಣಿ ಸದಸ್ಯ ಅಜಿತ್ ಕೊಡಗು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ,  ರಾಜ್ಯದ ಕಾಂಗ್ರೆಸ್ ಸರಕಾರ ಇವತ್ತು ಹಿಂದು ಕಾರ್ಯಕರ್ತರನ್ನು ಯಾವುದೇ ಕಾರ್ಯಕ್ರಮಕ್ಕೆ ಹೋಗದಂತೆ

ರಾಜ್ಯ ಸರಕಾರದ ಹಿಂದೂ ವಿರೋಧಿ ಧೋರಣೆ ವಿರುದ್ಧ ಹಿಂಜಾವೇ ಯಿಂದ ಬೃಹತ್‍ ಪ್ರತಿಭಟನೆ Read More »

ಎತ್ತಿಹೊಳೆ ಯೋಜನೆಗೆ ಹೆಚ್ಚುವರಿ ಅರಣ್ಯ ಭೂಮಿ ಬಳಕೆಗಿಲ್ಲ ಅನುಮತಿ

ಈಗಾಗಲೇ ನಿಗದಿಪಡಿಸಿರುವುದಕ್ಕಿಂತ ಹೆಚ್ಚು ಅರಣ್ಯ ನಾಶವಾಗಿದೆ ಎಂದ ಪರಿಸರ ಸಚಿವಾಲಯ ನವದೆಹಲಿ: ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ 23 ಸಾವಿರ ಕೋಟಿ ರೂ. ವೆಚ್ಚದ ಎತ್ತಿನಹೊಳೆ ಯೋಜನೆಗೆ ಹೆಚ್ಚುವರಿಯಾಗಿ 423 ಎಕರೆ ಅರಣ್ಯ ಬಳಕೆಗೆ ಅನುಮೋದನೆ ನೀಡಬೇಕೆಂಬ ಕರ್ನಾಟಕ ಸರ್ಕಾರದ ಪ್ರಸ್ತಾವವನ್ನು ಕೇಂದ್ರ ಅರಣ್ಯ, ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ತಿರಸ್ಕರಿಸಿದೆ. ಗುರುತ್ವಾಕರ್ಷಣೆ ಕಾಲುವೆ ನಿರ್ಮಾಣಕ್ಕೆ ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ 432 ಎಕರೆ ಅರಣ್ಯ ಬಳಕೆಗೆ ಒಪ್ಪಿಗೆ ನೀಡುವಂತೆ ಕೋರಿ ರಾಜ್ಯ ಸರ್ಕಾರ

ಎತ್ತಿಹೊಳೆ ಯೋಜನೆಗೆ ಹೆಚ್ಚುವರಿ ಅರಣ್ಯ ಭೂಮಿ ಬಳಕೆಗಿಲ್ಲ ಅನುಮತಿ Read More »

ದ.ಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ)ಸಮಿತಿ ಸದಸ್ಯರಾಗಿ ಪೂರ್ಣಿಮಾ ಅಪ್ಪಯ್ಯ ಸೂಂತೋಡು

ಸುಳ್ಯ: ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ)ಯ ಸದಸ್ಯರಾಗಿ ಉಬರಡ್ಕ ಮಿತ್ತೂರು ಗ್ರಾ.ಪಂ ಅಧ್ಯಕ್ಷೆ ಪೂರ್ಣಿಮಾ ಅಪ್ಪಯ್ಯ ಸೂಂತೋಡು ನೇಮಕಗೊಂಡಿದ್ದಾರೆ. ಉಬರಡ್ಕ ಮಿತ್ತೂರು ಗ್ರಾ.ಪಂ.ನ ಅಧ್ಯಕ್ಷೆಯಾಗಿ ಕಳೆದ 2 ವರ್ಷದಿಂದ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಇವರು ಅಪ್ಪಯ್ಯ ಸೂಂತೋಡುರವರ ಪತ್ನಿ. ಶ್ರೀ ಶಾರದಾ ಮಹಿಳಾ ಕಾಲೇಜಿನ ಹಳೆ ವಿದ್ಯಾರ್ಥಿನಿ ಸುಳ್ಯದ ಶ್ರೀ ಶಾರದಾ ಮಹಿಳಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ ಇವರು ಉತ್ತಮ ಕಲಾವಿದೆಯೂ ಆಗಿದ್ದರು. ಸಂಸದರು

ದ.ಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ)ಸಮಿತಿ ಸದಸ್ಯರಾಗಿ ಪೂರ್ಣಿಮಾ ಅಪ್ಪಯ್ಯ ಸೂಂತೋಡು Read More »

ಮಾಟ ಮಾಡಿದ ಅನುಮಾನದಲ್ಲಿ ಒಂದೇ ಕುಟುಂಬದ ಐವರ ಜೀವಂತ ದಹನ

ಭೀಕರ ಕೃತ್ಯ ಎಸಗಿದ ಬಳಿಕ ಗ್ರಾಮಕ್ಕೆ ಗ್ರಾಮವೇ ಪಲಾಯನ ಪಾಟ್ನಾ: ಮಾಟ ಮಂತ್ರ ಮಾಡಿದ ಅನುಮಾನದಲ್ಲಿ ಒಂದೇ ಕುಟುಂಬದ ಐವರು ಸದಸ್ಯರನ್ನು ಕ್ರೂರವಾಗಿ ಥಳಿಸಿ ನಂತರ ಜೀವಂತವಾಗಿ ಸುಟ್ಟುಹಾಕಿದ ಘಟನೆ ಬಿಹಾರದ ಪೂರ್ನಿಯಾ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ ಪ್ರದೇಶದ ಟೆಟ್ಗಾಮಾ ಎಂಬ ಗ್ರಾಮದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಈ ಭೀಕರ ಕೊಲೆ ಸುತ್ತಮುತ್ತಲೂ ಆಘಾತ ಸೃಷ್ಟಿಸಿದೆ. ಕೃತ್ಯ ಎಸಗಿದ ಎಲ್ಲ ಆರೋಪಿಗಳು ಗ್ರಾಮದಿಂದ ಪರಾರಿಯಾಗಿದ್ದಾರೆ. ಈ ಭಯಾನಕ ಘಟನೆಯು 4 ದಿನಗಳ ಹಿಂದೆ ಗ್ರಾಮದಲ್ಲಿ ನಡೆದಿದೆ.

ಮಾಟ ಮಾಡಿದ ಅನುಮಾನದಲ್ಲಿ ಒಂದೇ ಕುಟುಂಬದ ಐವರ ಜೀವಂತ ದಹನ Read More »

ವಾರದ ಆರು ದಿನ ಮೊಟ್ಟೆ ವಿತರಣೆ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

ಸೋಮವಾರ, ಶನಿವಾರ ಮೊಟ್ಟೆ ಕೊಡದ ಕುರಿತು ದೂರು ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ 6 ದಿನ ಮೊಟ್ಟೆ ವಿತರಿಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ನಿವಾರಿಸುವ ಉದ್ದೇಶದಿಂದ 1ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ವಾರದ 6 ದಿನ ಮೊಟ್ಟೆ ಕೊಡುವ ಕಾರ್ಯಕ್ರಮ ಸರ್ಕಾರ ಘೋಷಣೆ ಮಾಡಿದೆ. ಕೆಲವು ಶಾಲೆಗಳಲ್ಲಿ ಎಸ್‌ಡಿಎಂಸಿ ಸೂಚನೆ ಮೇರೆಗೆ 3 ದಿನ ಮೊಟ್ಟೆ, 3 ದಿನ ಬಾಳೆಹಣ್ಣು ಕೊಡುತ್ತಿದ್ದಾರೆ. ಸೋಮವಾರ ಮತ್ತು ಶನಿವಾರ

ವಾರದ ಆರು ದಿನ ಮೊಟ್ಟೆ ವಿತರಣೆ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ Read More »

ಕುಡುಪು ಗುಂಪು ಹತ್ಯೆ ಪ್ರಕರಣ : ಆಶ್ರಫ್‌ ಕುಟುಂಬಸ್ಥರಿಗೆ ಪರಿಹಾರ ವಿತರಣೆ

ಸಚಿವ ಜಮೀರ್‌ 10 ಲ.ರೂ. ; ಸ್ಪೀಕರ್‌ ಯು.ಟಿ.ಖಾದರ್‌ 5 ಲ.ರೂ. ವೈಯಕ್ತಿಕ ನೆಲೆಯಲ್ಲಿ ಕೊಡುಗೆ ಮಂಗಳೂರು: ನಗರದ ಕುಡುಪು ಸಮೀಪ ಮೈದಾನದಲ್ಲಿ ನಡೆದಿದ್ದ ಗುಂಪು ಹತ್ಯೆಯಲ್ಲಿ ಸಾವನ್ನಪ್ಪಿದ ಕೇರಳದ ವಯನಾಡಿನ ಅಶ್ರಫ್ ಕುಟುಂಬಸ್ಥರಿಗೆ ಸರ್ಕಾರ ಪರಿಹಾರ ಧನ ವಿತರಿಸಿದೆ. ನಿನ್ನೆ ರಾಜ್ಯ ಕಾಂಗ್ರೆಸ್ ನಿಯೋಗ ಆಶ್ರಫ್‌ ಕುಟುಂಬಸ್ಥರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದು, ಈ ಸಂದರ್ಭದಲ್ಲಿ ಪರಿಹಾರದ ಚೆಕ್‌ ಹಸ್ತಾಂತರಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಕೆ.ಸಿ.ವೇಣುಗೋಪಾಲ್ ಕೋರಿಕೆಯಂತೆ ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಬೆಂಗಳೂರು ನಿವಾಸದಲ್ಲಿ

ಕುಡುಪು ಗುಂಪು ಹತ್ಯೆ ಪ್ರಕರಣ : ಆಶ್ರಫ್‌ ಕುಟುಂಬಸ್ಥರಿಗೆ ಪರಿಹಾರ ವಿತರಣೆ Read More »

ಹಾಲಿನ ವಾಹನ ಪಾದಚಾರಿ ಮೇಲ್ಸೇತುವೆಗೆ ಡಿಕ್ಕಿ

ಪುತ್ತೂರು: ನಗರದ ಮಂಜಲ್ಪಡ್ಪುವಿನಲ್ಲಿ ಹಾಲಿನ ವಾಹನವೊಂದು ಪಾದಚಾರಿ ಮೇಲ್ಸೆತುವೆಗೆ ಅಪ್ಪಳಿಸಿದೆ. ಸೋಮವಾರ ಸಂಜೆ ಘಟನೆ ನಡೆದಿದ್ದು, ಮಂಗಳೂರು ಕಡೆಯಿಂದ ಬರುತ್ತಿದ್ದ ಹಾಲಿನ ವಾಹನ ಇದಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ. ವಾಹನ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಹಾಲಿನ ವಾಹನ ಪಾದಚಾರಿ ಮೇಲ್ಸೇತುವೆಗೆ ಡಿಕ್ಕಿ Read More »

ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದಲ್ಲಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ತಪ್ತ ಮುದ್ರಾಧಾರಣೆ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜು.6ರಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಭಕ್ತರಿಗೆ ತಪ್ತ ಮುದ್ರಾಧಾರಣೆ ನಡೆಯಿತು. ಈ ಸಂದರ್ಭದಲ್ಲಿ 250ಕ್ಕೂ ಹೆಚ್ಚು ಭಕ್ತರು ತಪ್ತ ಮುದ್ರಾಧಾರಣೆ ಹಾಕಿಸಿಕೊಂಡರು. ಮುದ್ರಾಧಾರಣೆಯ ಬಗ್ಗೆ ಮಾತನಾಡಿದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ,  ವೃತ್ತಾಸುರನು ದೇವತೆಗಳನ್ನು ಸೋಲಿಸಿದಾಗ ಒಂದಾದ ದೇವತೆಯರು ಶ್ರೀ ಮಹಾವಿಷ್ಣುವಿಗೆ ಶರಣಾಗಿ ಅಸುರನ ಸಂಹಾರಕ್ಕೆ ಹೋಗುತ್ತಾರೆ. ಆಗ ಶ್ರೀ ಮಹಾವಿಷ್ಣು ದೇವತೆಗಳಿಗೆ ವೈಷ್ಣವ ಚಿಹ್ನೆಯಾದ ಶಂಖ, ಚಕ್ರ

ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದಲ್ಲಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ತಪ್ತ ಮುದ್ರಾಧಾರಣೆ Read More »

ಸಿಎ ಇಂಟರ್ ಮೀಡಿಯೇಟ್‍ ಪರೀಕ್ಷೆಯಲ್ಲಿ ನಿಧಿರಾಜ್‍ ಎಂ.ಪಿ. ಉತ್ತೀರ್ಣ’

ಪುತ್ತೂರು: ಇನ್ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ನಡೆಸುವ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯ ಎರಡೂ ಗ್ರೂಪ್‌ಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ನಿಧಿರಾಜ್ ಎಂ.ಪಿ. ಉತ್ತೀರ್ಣರಾಗಿದ್ದಾರೆ. ನಿಧಿರಾಜ್‍ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, 2023-24ನೇ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ವ್ಯಾಸಂಗ ಪೂರ್ಣಗೊಳಿಸಿದ್ದರು. ಅವರು ಹಾಸನದ  ಗುಲಾಬಿ.ಕೆ ಅವರ ಪುತ್ರನಾಗಿದ್ದಾರೆ.  

ಸಿಎ ಇಂಟರ್ ಮೀಡಿಯೇಟ್‍ ಪರೀಕ್ಷೆಯಲ್ಲಿ ನಿಧಿರಾಜ್‍ ಎಂ.ಪಿ. ಉತ್ತೀರ್ಣ’ Read More »

error: Content is protected !!
Scroll to Top