ಮಂಗಳೂರು : ಪಣಂಬೂರು ಬೀಚ್ ನ ಬ್ರೇಕ್ ವಾಟರ್ ಬಳಿ ಯುವಕನ ಮೃತದೇಹ ಪತ್ತೆ

ಬಂಟ್ವಾಳ : ಬೆಂಗಳೂರಿಗೆ ಎಂದು ಮನೆಯಿಂದ ಹೊರಟು ಹೋದ ಯುವಕನ ಮೃತದೇಹ ಮಂಗಳೂರಿನ ಪಣಂಬೂರಿನಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.
ಬಂಟ್ವಾಳ ಮೊಡಂಕಾಪು ನಿವಾಸಿ ಉಷಾ ಎಂಬವರ ಮಗ ವಿನಯ್ (25) ಮೃತಪಟ್ಟ ಯುವಕ.

ಮಂಗಳೂರಿನ ಪಣಂಬೂರು ಬೀಚ್ ನ ಬ್ರೇಕ್ ವಾಟರ್ ಬಳಿ ಇಂದು ಯುವಕನ ಮೃತದೇಹ ಪತ್ತೆಯಾಗಿದ್ದು, ಪಣಂಬೂರು ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ವಿನಯ್ ಯಾವ ಕಾರಣದಿಂದ ಮೃತಪಟ್ಟಿದ್ಧಾನೆ ಎಂಬುದು ಸ್ಪಷ್ಟವಾಗಿಲ್ಲ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top