ತನಿಖೆಗಾಗಿ ಬೆಂಗಳೂರಿಗೆ ಹೊರಟ ಅಸ್ಸಾಂ ಪೊಲೀಸ್ ತಂಡ
ದೆಹಲಿ : ಯುವ ಕಾಂಗ್ರೆಸ್ನ ಉಚ್ಚಾಟಿತ ಅಧ್ಯಕ್ಷೆ ಅಂಗ್ಕಿತಾ ದತ್ತಾ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬೆಂಗಳೂರಿನ ಶ್ರೀನಿವಾಸ ಬಿ. ವಿ. ವಿರುದ್ಧ ನೀಡಿರುವ ಲೈಂಗಿಕ ಕಿರುಕುಳದ ತನಿಖೆಗಾಗಿ ಅಸ್ಸಾಂ ಪೊಲೀಸ್ ತಂಡವೊಂದು ಬೆಂಗಳೂರಿಗೆ ಹೊರಟಿದೆ.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶೀನಿವಾಸ ಬಿ. ವಿ. ಅವರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಅಂಗ್ಕಿತಾ ದತ್ತ ಬಹಿರಂಗಪಡಿಸಿದ ಬಳಿಕ ಅವರನ್ನು ಕಾಂಗ್ರೆಸ್ನಿಂದ ಆರ ವರ್ಷದ ಮಟ್ಟಿಗೆ ಉಚ್ಚಾಟಿಸಲಾಗಿದೆ. ಶ್ರೀನಿವಾಸ ವಿರುದ್ಧ ಅಂಗ್ಕಿತಾ ಅಸ್ಸಾಂನಲ್ಲಿ ದೂರು ದಾಖಲಿಸಿದ್ದಾರೆ.
ರಾಯಪುರ ಮತ್ತು ದಿಲ್ಲಿಯಲ್ಲೂ ಶ್ರೀನಿವಾಸ ಲೈಂಗಿಕ ಕಿರುಕುಳ ನೀಡಿದ ಆರೋಪವಿದ್ದು, ಪೊಲೀಸ್ ತಂಡ ಅಲ್ಲಿಗೂ ಹೋಗಿ ತನಿಖೆ ನಡೆಸಲಿದೆ.
ಅಸ್ಸಾಂನ ದಿಸ್ಪುರ ಪೊಲೀಸ್ ಠಾನೆಯಲ್ಲಿ ಶ್ರೀನಿವಾಸ ವಿರುದ್ಧ ಕೇಸು ದಾಖಲಾಗಿದೆ. ಕಳೆದ ಆರು ತಿಂಗಳಿಂದ ಶ್ರೀನಿವಾಸ ಕಿರುಕುಳ ನೀಡುತ್ತಿದ್ದಾರೆ, ಇದರ ವಿರುದ್ಧ ಧ್ವನಿಯೆತ್ತಿದ್ದಕ್ಕೆ ತನ್ನನ್ನು ಪಕ್ಷಚದಿಂದ ಕಿತ್ತು ಹಾಕಿದ್ದಾರೆ ಎಂದು ಅಂಗ್ಕಿತಾ ದತ್ತ ಹೇಳಿದ್ದಾರೆ. ಅಂಗ್ಕಿತಾ ದತ್ತ ಅಸ್ಸಾಂನ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದ ಮತ್ತು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅಂಜನ್ ದತ್ತ ಅವರ ಪುತ್ರಿ.