ಆ ಒಂದು ಎಕ್ಸ್‌ಟ್ರಾ ಮೈಲು ನಡೆಯಲು ನಿಮ್ಮಿಂದಲೂ ಸಾಧ್ಯ!

ಪ್ರತಿಯೊಬ್ಬರಲ್ಲೂ ಇದೆ Walk the EXTRA mile ಸಾಮರ್ಥ್ಯ

ಆಂಗ್ಲ ಭಾಷೆಯಲ್ಲಿ Walk the EXTRA mile ಎಂಬ ಜನಪ್ರಿಯ ಮಾತಿದೆ. ಆ EXTRA ಯಾವುದು ಎಂದು ಹುಡುಕಲು ನಾನು ಪ್ರಯತ್ನ ಪಟ್ಟಾಗ ನನಗೆ ಸಿಕ್ಕಿದ ಉತ್ತರಗಳು ತುಂಬಾ ರೋಚಕ ಆಗಿದ್ದವು. ಒಂದೊಂದಾಗಿ ಅವುಗಳನ್ನು ನಾನು ನಿಮ್ಮ ಮುಂದೆ ಇಡುತ್ತಾ ಹೋಗುತ್ತೇನೆ.

1) ಒಬ್ಬಳು ತಾಯಿ ತನ್ನ ಮಗುವಿಗೆ ಎದೆಹಾಲು ಕೊಡುತ್ತಾಳೆ. ಆಗ ಅದರ ಜತೆಗೆ ಒಂದು ಬೊಗಸೆ ಪ್ರೀತಿ ಕೂಡ ಕೊಡುತ್ತಾಳೆ. ಆ ಪ್ರೀತಿ ಸಕ್ಕರೆಯಾಗಿ ಮಗುವಿಗೆ ಆ ಹಾಲು ಅಮೃತ ಸದೃಶ ಆಗುತ್ತದೆ. ಅದು EXTRA.



































 
 

2) ಒಬ್ಬ ತಂದೆ ತನ್ನ ಮಗುವಿನ ಹೊಣೆಯನ್ನು ಹೊರುವುದರ ಜತೆಗೆ ತನ್ನ ಮಗುವಿನಲ್ಲಿ ನಂಬಿಕೆಯನ್ನು ಬೆಳೆಸುತ್ತಾನೆ. ಅದು EXTRA.

3) ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಗೆ ಜ್ಞಾನವನ್ನು ಕೊಡುವುದರ ಜತೆಗೆ ಬದುಕಿಗೂ ಪ್ರಿಪೇರ್ ಮಾಡುತ್ತಾನೆ. ಅದು EXTRA.

4) ಒಬ್ಬ ವ್ಯಾಪಾರಿ ಗ್ರಾಹಕರನ್ನು ಸಂತೃಪ್ತಿಪಡಿಸುವ ಕೆಲಸದ ಜತೆಗೆ ನಗುಮುಖದ ಸೇವೆಯನ್ನೂ ನೀಡುತ್ತಾನೆ. ಅದು EXTRA.

5) ಒಬ್ಬ ಕಲಾವಿದ ಜನರನ್ನು ರಂಜನೆ ಮಾಡುವುದರ ಜತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನೂ ಕೊಡುತ್ತಾನೆ/ಳೆ. ಅದು EXTRA.

6) ಒಬ್ಬ ವೈದ್ಯ ರೋಗಿಯ ಆರೋಗ್ಯದ ಬಗ್ಗೆ ಕಾಳಜಿಯನ್ನು ಮಾಡುವುದರ ಜತೆಗೆ ಆತನ ಬದುಕಿನಲ್ಲಿ ಭರವಸೆಯನ್ನೂ ತುಂಬುತ್ತಾರೆ. ಅದು EXTRA.

7) ಒಬ್ಬ ನಾಯಕ/ಕಿ ತಂಡಕ್ಕೆ ಗೆಲುವು ತಂದುಕೊಡುವುದರ ಜತೆಗೆ ತಂಡದ ಸದಸ್ಯರಲ್ಲಿ ನಿರಂತರ ಸ್ಫೂರ್ತಿಯನ್ನೂ ತುಂಬುತ್ತಾರೆ. ಅದು EXTRA.

8) ಒಬ್ಬ ಕೋಚ್ ನಮಗೆ ತರಬೇತಿ ನೀಡುವುದರ ಜತೆಗೆ ನಮ್ಮೊಳಗಿನ ಸಾಮರ್ಥ್ಯಗಳನ್ನು ನಾವೇ ಗುರುತಿಸುವಂತೆ ಕೂಡ ಮಾಡುತ್ತಾರೆ. ಅದು EXTRA.

9) ಒಬ್ಬ ಚಿತ್ರಕಾರ ಬಣ್ಣದ ಚಿತ್ರಗಳನ್ನು ಬಿಡಿಸುವುದು ಮಾತ್ರವಲ್ಲ ನಮಗೆ ಆಂತರಿಕ ಸೌಂದರ್ಯವನ್ನು ಗುರುತಿಸಲು ಸಹಾಯ ಕೂಡ ಮಾಡುತ್ತಾನೆ/ಳೆ. ಅದು EXTRA.

10) ಒಬ್ಬ ಸಂಗೀತಕಾರ ಸಂಗೀತವನ್ನು ನುಡಿಸುವುದು ಮಾತ್ರವಲ್ಲ ನಮ್ಮೊಳಗಿನ ಭಾವಲೋಕವನ್ನು ಶ್ರೀಮಂತ ಮಾಡುತ್ತಾನೆ/ಳೆ. ಅದು EXTRA.

11) ಒಬ್ಬ ಉದ್ಯಮಶೀಲ ವ್ಯಕ್ತಿ ಅವಕಾಶಗಳನ್ನು ಹುಡುಕಿಕೊಂಡು ಹೋಗುವುದರ ಜತೆಗೆ ಇತರರಿಗೆ ಅವಕಾಶಗಳ ಮೂಟೆಯನ್ನು ಸೃಷ್ಟಿಸುತ್ತಾನೆ. ಅದು EXTRA.

12) ಒಬ್ಬ ರಾಜಕಾರಣಿ ತಾನು ನೆಟ್ಟಗಿರುವುದು ಮಾತ್ರವಲ್ಲ ತನ್ನ ನೆರಳು ಕೂಡ ನೆಟ್ಟಗಿರಬೇಕು ಎಂದು ಯೋಚನೆ ಮಾಡಿ ಅದರ ಹಾಗೆ ಬದುಕುತ್ತಾನೆ/ಳೆ. ಅದು EXTRA.

13) ಒಬ್ಬ ಬರಹಗಾರನು/ಳು ಓದುಗರನ್ನು ಸೃಷ್ಟಿಸುವುದು ಮಾತ್ರವಲ್ಲ. ತನ್ನ ಹಾಗೆ ಬರೆಯುವ ಲೇಖಕರನ್ನು ಕೂಡ ಸೃಷ್ಟಿಸುತ್ತಾನೆ/ಳೆ. ಅದು EXTRA.

14) ಒಬ್ಬ ಲೆಜೆಂಡ್ ವ್ಯಕ್ತಿ ವ್ಯಕ್ತಿಗಳ ಸಂಬಂಧವನ್ನು ಪೋಷಣೆ ಮಾಡುವುದು ಮಾತ್ರವಲ್ಲ ತನ್ನ ಸಂಬಂಧಗಳನ್ನು ದಿನವೂ ವಿಸ್ತರಿಸುತ್ತಾನೆ/ಳೆ. ಅದು EXTRA.

15) ಒಬ್ಬ ಬಿಸಿನೆಸ್ ಲೀಡರ್ ವಸ್ತುಗಳನ್ನು ಮಾರಾಟ ಮಾಡುವುದು ಮಾತ್ರವಲ್ಲ ಹೊಸ ಐಡಿಯಾಗಳನ್ನು ಕೂಡ ಮಾರ್ಕೆಟ್ ಮಾಡುತ್ತಾನೆ/ಳೆ. ಅದು EXTRA.

16) ಒಬ್ಬ ಬಿಲ್ಡರ್ ಮನೆಗಳನ್ನು ಮಾತ್ರ ಕಟ್ಟುವುದು ಅಲ್ಲ. ಅದರೊಳಗೆ ವಾಸವಾಗಿರುವ ವ್ಯಕ್ತಿಗಳ ಕನಸುಗಳನ್ನು ಕೂಡ ಕಟ್ಟುತ್ತಾನೆ! ಅದು EXTRA.

17) ಒಬ್ಬ ನಾಗರಿಕ ತನ್ನ ಹಕ್ಕುಗಳ ಬಗ್ಗೆ ಹೋರಾಟ ಮಾಡುವುದು ಮಾತ್ರವಲ್ಲ. ಪ್ರತಿ ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೆ ಯೋಗ್ಯ ಜನ ಪ್ರತಿನಿಧಿಯನ್ನು ಆರಿಸುತ್ತಾನೆ. ಅದು EXTRA.

18) ಒಬ್ಬ ನ್ಯಾಯಾಧೀಶ ಕೋರ್ಟಲ್ಲಿ ತೀರ್ಪನ್ನು ಕೊಡುವುದು ಮಾತ್ರವಲ್ಲ, ತನ್ನ ದೇಶವು ಒಪ್ಪಿದ ಸಂವಿಧಾನದ ಗೌರವವನ್ನು ಕಾಪಾಡುತ್ತಾರೆ. ಅದು EXTRA.

19) ಒಬ್ಬ ವಿಜ್ಞಾನಿ ಸಂಶೋಧನೆಗಳನ್ನು ಮಾತ್ರ ಮಾಡುವುದಲ್ಲ. ತನ್ನ ಸಂಶೋಧನೆಯ ಲಾಭವನ್ನು ಮನುಕುಲದ ಒಳಿತಿಗಾಗಿ ವಿನಿಯೋಗ ಮಾಡುತ್ತಾನೆ/ಳೆ. ಅದು EXTRA.

20) ಒಬ್ಬ ದೇವರು ಜಗತ್ತನ್ನು ಮುನ್ನಡೆಸುವುದು ಮಾತ್ರವಲ್ಲ ಒಳ್ಳೆಯ ಮೌಲ್ಯಗಳನ್ನು ಜಗತ್ತಿನಲ್ಲಿ ಪೋಷಣೆ ಮಾಡುತ್ತಾನೆ. ಅದು EXTRA.

21) ಒಬ್ಬ ಒಳ್ಳೆಯ ವ್ಯಕ್ತಿ ತನ್ನ ಪ್ರೀತಿಪಾತ್ರರನ್ನು ಬದಲಾವಣೆ ಮಾಡಲು ಹೊರಡುವ ಮೊದಲು ತಾನು ಪಾಸಿಟಿವ್ ಆಗಿ ಬದಲಾಗುತ್ತಾನೆ. ಅದು EXTRA.

22) ಒಬ್ಬ ಐಕಾನ್ ವ್ಯಕ್ತಿ ತಾನು ಇನ್ನೊಬ್ಬರ ಪ್ರಭಾವಕ್ಕೆ ಒಳಗಾಗುವ ಮೊದಲು ನೂರಾರು ಜನರ ಮೇಲೆ ತನ್ನ ವ್ಯಕ್ತಿತ್ವದ ಪ್ರಭಾವವನ್ನು ಬೀರುತ್ತಾನೆ/ಳೆ. ಅದು EXTRA.

23) ಒಬ್ಬ ಧರ್ಮಗುರು ತನ್ನ ಧರ್ಮದ ಶ್ರೇಷ್ಠತೆಯನ್ನು ಅನುಯಾಯಿಗಳಿಗೆ ಅರ್ಥ ಮಾಡಿಸುತ್ತಾರೆ. ಅದರ ಜತೆಗೆ ಜಗತ್ತಿನ ಎಲ್ಲ ಧರ್ಮಗಳ ತತ್ವಗಳು ಒಂದೇ ಎಂದು ಸಾರುತ್ತಾರೆ. ಅದು EXTRA.

24) ಒಬ್ಬ ಸಾಮಾನ್ಯ ಮನುಷ್ಯ ತನಗಾಗಿ, ತನ್ನ ಕುಟುಂಬಕ್ಕಾಗಿ ಬದುಕುತ್ತಾನೆ. ಅದರ ಜತೆಗೆ ಸಮಾಜದ ಉನ್ನತಿಗಾಗಿ ಅವನಿಗೆ/ಅವಳಿಗೆ ಸ್ವಲ್ಪ ಸಮಯವನ್ನು ವಿನಿಯೋಗ ಮಾಡಲು ಸಾಧ್ಯವಾದರೆ ಅದು EXTRA.

25) ಒಬ್ಬ ವಿಷನರಿ ವ್ಯಕ್ತಿ ಒಂದು ಸಮಾಜವನ್ನು ಅಭಿವೃದ್ಧಿಪಡಿಸುತ್ತಾನೆ. ಅದರ ಜತೆಗೆ ಅದೇ ಸಮಾಜದ ಅರಿವನ್ನು ಹೆಚ್ಚಿಸಲು ಅವನಿಗೆ ಸಾಧ್ಯವಾದರೆ ಅದು EXTRA.

ಜೀವನದ ಯಶೋಯಾನದಲ್ಲಿ ಆ EXTRA MILE ಕ್ರಮಿಸಲು ನೀವು ಸಿದ್ಧರಾಗಿದ್ದೀರಾ? ಮಾಡುವ ಯಾವುದೇ ಕೆಲಸವನ್ನು ಕೂಡ ಖುಷಿಪಡುತ್ತಾ, ನಗುಮುಖದಲ್ಲಿ ಮಾಡಲು ಸಾಧ್ಯವಾದರೆ ಅದು EXTRA ಆಗಬಲ್ಲದು.
ನಿಮಗೆ ಒಳ್ಳೆಯದಾಗಲಿ. ಹಾಗೆಯೇ ನಿಮ್ಮಿಂದ ಸಮಾಜಕ್ಕೆ ಒಳ್ಳೆಯದಾಗಲಿ.
✒️ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತುದಾರರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top