ಪುತ್ತೂರು: ಗೌರಿ ಲಂಕೇಶ್ ಪ್ರಕರಣವನ್ನು ಕೈಗೆತ್ತಿಕೊಂಡಿರುವ ನ್ಯಾಯವಾದಿ ಕೃಷ್ಣಮೂರ್ತಿ ಅವರ ಮೇಲೆ ಗುಂಡಿನ ದಾಳಿ ನಡೆಸಿದವರನ್ನು ತಕ್ಷಣ ಪತ್ತೆಹಚ್ಚಲು ಸರಕಾರ ಕ್ರಮಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಪು್ತ್ತೂರು ತಹಶೀಲ್ದಾರ್ ಶಿವಶಂಕರ್ ಗೆ ಮನವಿ ಸಲ್ಲಿಸಿದರು.
ಗೌರಿ ಲಂಕೇಶ್ ಪ್ರಕರಣ ನಡೆಸುತ್ತಿರುವ ನ್ಯಾಯವಾದಿ ಕೃಷ್ಣಮೂರ್ತಿಯವರ ಮೇಲೆ ಗುಂಡಿನ ದಾಳಿಯ ಹಿಂದೆ ಪಿ.ಎಫ್.ಐ ಅಥವಾ ನಕ್ಸಲ್ವಾದಿಗಳಿದ್ದಾರೆಯೇ ಎಂದು ಪತ್ತೆ ಹಚ್ಚಬೇಕು ಎಂದು ಮನವಿಯಲ್ಲಿ ಸಮಿತಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಸಮಿತಿಯ ಧರ್ಮಪ್ರೇಮಿಗಳಾದ ದಿವಾಕರ್ ರೈ,, ಸುಧಾಕರ್ ನಾಯಕ್, ಧರ್ಮಶಿಕ್ಷಣದ ಮಧ್ವಾರಾಜ್, ಹಿಂದೂ ಜನಜಾಗೃತಿ ಸಮಿತಿಯ ಹರಿಪ್ರಸಾದ್ ಶೆಟ್ಟಿ, ಚಂದ್ರಶೇಖರ ಪನಿತೋಟ ಉಪಸ್ಥಿತರಿದ್ದರು.