ಬಂಟ್ವಾಳ : ನೇತ್ರಾವತಿ ನದಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾದ ಘಟನೆ ಏ. 16 ರಂದು ಕೌಳಿಗೆ ಮನೆ ಸಜಿಪ ಮುನ್ನೂರು ಗ್ರಾಮದಲ್ಲಿ ಸಂಭವಿಸಿದೆ. ಪರಮೇಶ್ವರ ಎನ್ ಕೆ(75) ಎಂಬವರೇ ಮೃತ ವ್ಯಕ್ತಿ.
ಏ. 14 ರಂದು ರಾತ್ರಿ 10.00 ಗಂಟೆಗೆ ಟಾರ್ಚ ಹಿಡಿದುಕೊಂಡು ಮನೆಯಿಂದ ಹೊರಗೆ ಹೋದವರು ಮರಳಿ ಬಾರದೇ ಇದ್ದಾಗ ಮನೆಯ ಸುತ್ತ ಮುತ್ತ ಪರಿಸರದಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿ ಯಾವುದೇ ಮಾಹಿತಿ ಸಿಗದ ಕಾರಣ ಮಗನಾದ ಶಿವಾನಂದ ರ ಹೇಳಿಕೆಯಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಏ. 16 ರ ಬೆಳಿಗ್ಗೆ ಸಜಿಪ ಮುನ್ನೂರು ಗ್ರಾಮದ ಮಡಿವಾಳಪಡ್ಪು ಮನೆಯ ಸಮೀಪದಲ್ಲಿ ಹರಿಯುವ ನೇತ್ರಾವತಿ ನದಿಯಲ್ಲಿ ಮೃತ ದೇಹವು ನೀರಿನಲ್ಲಿ ಕೌಚಿದ ರೀತಿಯಲ್ಲಿ ತೇಲಾಡುತ್ತಿರುವುದು ಕಂಡು ಬಂದಿದ್ದು ಬಳಿಕ ಮೃತದೇಹವನ್ನು ನೀರಿನಿಂದ ಮೇಲಕ್ಕೆ ತೆಗೆದು ನೋಡಿದಾಗ ಅದು ಪರಮೇಶ್ವರ ಅವರ ಮೃತದೇಹವೆಂದು ಖಚಿತವಾಗಿರುತ್ತದೆ. ಈ ಕುರಿತು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.