ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ಚುನಾವಣಾ ಕಚೇರಿ ಸೋಮವಾರ ದರ್ಬೆ ರೈ ಎಸ್ಟೇಟ್ ಬಿಲ್ಡಿಂಗ್ ನಲ್ಲಿ ಉದ್ಘಾಟನೆಗೊಂಡಿತು.
ಗಣಹೋಮದೊಂದಿಗೆ ಕಚೇರಿಯನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಎಂಎಸ್ ಮುಹಮ್ಮದ್, ಚಂದ್ರಹಾಸ ಶೆಟ್ಟಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಡಾ ರಾಜಾರಾಂ , ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಎಂಬಿ ವಿಶ್ವನಾಥ ರೈ, ಈಶ್ವರ ಭಟ್ ಪಂಜಿಗುಡ್ಡೆ, ಮುರಳೀಧರ ರೈ ಮಠಂತಬೆಟ್ಟು ಜಿಲ್ಲಾ ವಕ್ತಾರ ಮಹಮ್ಮದ್ ಬಡಗನ್ನೂರು, ನಿರಂಜನ ರೈ , ಶುಕೂರ್ ಹಾಜಿ ಎಪಿಎಂಸಿ , ಶಕೂರ್ ಹಾಜಿ ಕಲ್ಲೇಗ, ಸಾಯಿರಾ ಬಾನು, ಕ್ರಷ್ಣ ಪ್ರಸಾದ್ ಆಳ್ವ, ಶಿವರಾಂ ಆಳ್ವ, ರಂಜಿತ್ ಬಂಗೇರಾ, ಸನತ್ ರೈ, ರಿಯಾಝ್ ಪರ್ಲಡ್ಕ, ಪ್ರಕಾಶ್ ಪುರುಷರ ಕಟ್ಟೆ, ಶೆರೀಪ್ ಬಲ್ನಾಡು, ಝುಬೈರ್ ಪಿಕೆ , ಪ್ರವೀಣ್ ಚಂದ್ರ ಆಳ್ವ, ಭಾಸ್ಕರ ಕೋಡಿಂಬಾಡಿ, ನೂರುದ್ದೀನ್ ಸಾಲ್ಮರ, ಪಚ್ಚು ಸಿಝ್ಲರ್, ಅಮರನಾಥ ಗೌಡ, ಮೋಣು ಬಪ್ಪಳಿಗೆ, ರೋಶನ್ ರೈ ಬನ್ನೂರು, ರಶೀದ್ ಮುರ ಮತ್ತಿತರರು ಉಪಸ್ಥಿತರಿದ್ದರು.