ಪುತ್ತೂರು : ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಟ್ಟಂಪಾಡಿಯ ಗುಮ್ಮಟಗದ್ದೆ ಎಂಬಲ್ಲಿ ಸಂಭವಿಸಿದೆ.
ಪುಣ್ಯಶ್ರೀ ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಎ. 4 ರಂದು ಇವರು ತನ್ನ ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದು, ಬಳಿಕ ಅಲ್ಲಿಯೇ ಇದ್ದರು. ಎ. 10 ರಂದು ರಾತ್ರಿ ಸುಮಾರು ಸಂಜೆ 3.55 ರ ವೇಳೆಗೆ ತನ್ನ ಪತಿ ಪುರುಷೋತ್ತಮ ರವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ನಂತರ ರಾತ್ರಿ ಸುಮಾರು 10.00 ಗಂಟೆಯ ವೇಳೆಗೆ ತಮ್ಮ ಮನೆಯ ಬಳಿಗೆ ಬಂದು ತಾನು ಸಾಯುವುದಾಗಿ ಹೇಳಿ ಏಕಾಏಕಿ ತಮ್ಮ ಬಾವಿಗೆ ಹಾರಿರುವುದಾಗಿ ಪುಣ್ಯಶ್ರೀಯ ಚಿಕ್ಕಮ್ಮ ಗುಮ್ಮಟಗದ್ದೆಯ ಲತಾ ಎಂಬವರು ಪುರುಷೋತ್ತಮ ರವರಿಗೆ ದೂರವಾಣಿ ಮೂಲಕ ತಿಳಿಸಿದರು. ಬಳಿಕ ಪುಣ್ಶಶ್ರೀಯವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯಾಧಿಕಾರಿ ಪುಣ್ಯಶ್ರೀಯು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.