ಪುತ್ತೂರು : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆದಂಬಾಡಿ ಗ್ರಾಮದ ಗುತ್ತು ಎಂಬಲ್ಲಿ ಎ. 7 ರಂದು ಸಂಭವಿಸಿದೆ. ಯಶವಂತ ಜಿ ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಇವರು ಎ. 5 ರ ರಾತ್ರಿ ತನ್ನ ಅಣ್ಣನ ಮೊಬೈಲ್ ಗೆ ಕರೆ ಮಾಡಿ ಮಾತನಾಡಿದ್ದು, ಆ ಬಳಿಕ ಕರೆ ಮಾಡಿದರೂ ಸ್ವೀಕರಿಸದೇ, ತನ್ನ ಮನೆಗೂ ಬಾರದೇ, ಎ. 7 ರ ಸಂಜೆ ಕೆದಂಬಾಡಿ ಗ್ರಾಮದ ಗುತ್ತು ಎಂಬಲ್ಲಿ ಮ್ಯಾಂಜಿಯಮ್ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.