ಮೂಡುಬಿದಿರೆ : ಹಿರಿಯ ದೈವಪಾತ್ರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಾಡಿ ಅಣ್ಣು ಶೆಟ್ಟಿ(78) ಅವರು ಅಲ್ಪಕಾಲದ ಅಸೌಖ್ಯದಿಂದ ಏ. 7 ರಂದುನ ನಿಧನ ಹೊಂದಿದರು. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರು ಶುಕ್ರವಾರದ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಲಾಡಿ ಹಜಂಕಾಲಬೆಟ್ಟು, ಮಾರ್ನಾಡು, ತೋಡಾರು ಸಹಿತ ದ.ಕ ಜಿಲ್ಲೆಯ ಕಾರ್ಕಳ ತಾಲೂಕಿನ ಹಲವಾರು ದೈವಸ್ಥಾನಗಳಲ್ಲಿ ದೈವಪಾತ್ರಿಯಾಗಿ ಸೇವೆ ಸಲ್ಲಿಸಿದ್ದರು. ಮೂಡಬಿದಿರೆಯ ಮಾಸ್ತಿಕಟ್ಟೆಯಲ್ಲಿ ವಾಸವಾಗಿದ್ದ ಇವರ ಅಂತ್ಯಸಂಸ್ಕಾರವು ಮಾರ್ನಾಡು ಕಲ್ಲಬೆಟ್ಟು ಗುತ್ತುಮನೆಯಲ್ಲಿ ನಡೆಯಿತು. ಅವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಮಾರ್ನಾಡು ಹೊಯಿಪಾಲಬೆಟ್ಟುವಿನ ಅನುವಂಶಿಕ ಮೊಕ್ತೇಸರ ರಾಜೇಶ್ ಬಲ್ಲಾಳ್ ಬೆಳಿಯಾರು ಗುತ್ತು, ಲಾಡಿ ಗುತ್ತಿನ ಪಾರ್ಶ್ವನಾಥ ಬಲ್ಲಾಳ್ ಸಂತಾಪ ಸೂಚಿಸಿದ್ದಾರೆ.