ಪುತ್ತೂರು: ಕುರುಂಜಿ ವೆಂಕಟ್ರಮಣ ಗೌಡರ ಸ್ಮರಣಾರ್ಥ ಒಕ್ಕಲಿಗ ಗೌಡ ಸೇವಾ ಸಂಘ ಕಡಬ ವಲಯದ ಆಶ್ರಯದಲ್ಲಿ ಕಡಬ ಸಂತ ಜೋಕಿಮರ ಶಾಲಾ ಮೈದಾನದಲ್ಲಿ ಕಡಬ ವಲಯ ಮಟ್ಟದ ವಾರ್ಷಿಕ ಕ್ರೀಡಾಕೂಟ ರವಿವಾರ ನಡೆಯಿತು.
ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಬಿಳಿನೆಲೆ ಕಾರ್ಯಕ್ರಮ ಉದ್ಘಾಟಿಸಿದರು. ಕಡಬ ವಲಯ ಅಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ ಅಧ್ಯಕ್ಷತೆ ವಹಿಸಿದ್ದರು.
ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲು, ನಿವೃತ್ತ ಅಬಕಾರಿ ಉಪ ಆಯುಕ್ತ ಗೋಪಾಲಕೃಷ್ಣ ಪುಯಿಲ, ಮರ್ದಾಳ ಗ್ರಾ.ಪಂ. ಅಧ್ಯಕ್ಷ ಹರೀಶ್ ಗೌಡ ಕೊಡಂದೂರು, ಐತ್ತೂರು ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲ, ಉಪಾಧ್ಯಕ್ಷ ರೋಹಿತ್ ಗೌಡ ಎಸ್., ಕಡಬ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ಗಣೇಶ್ ಗೌಡ ಮುಜೂರು, ವರ್ತಕ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಗೌಡ ಕೋಲ್ಪೆ, ಕಡಬ ತಾಲೂಕು ಸಂಘದ ಕಾರ್ಯದರ್ಶಿ ಪ್ರಶಾಂತ್ ಗೌಡ ಪಂಜೋಡಿ, ಉದ್ಯೋಗಸ್ಥರ ಸಮಿತಿ ಅಧ್ಯಕ್ಷ ಆನಂದ ಗೌಡ, ಮಹಿಳಾ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷೆ ನೀಲಾವತಿ, ಶಿವರಾಮ ಗೌಡ, ತಾ. ಸಮಿತಿಯ ಉಪಾಧ್ಯಕ್ಷ ವೆಂಕಟರಾಜ್ ಗೌಡ ಕೋಡಿಬೈಲು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕ್ರೀಡಾಕೂಟದ ತೀರ್ಪುಗಾರ ದೈಹಿಕ ಶಿಕ್ಷಕರನ್ನು ಸನ್ಮಾನಿಸಲಾಯಿತು. ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಮೋಹನ್ ಗೌಡ ಕೋಡಿಂಬಾಳ ಸ್ವಾಗತಿಸಿ, ಕಡಬ ವಲಯ ಸಂಘದ ಕಾರ್ಯದರ್ಶಿ ಮಂಜುನಾಥ ಗೌಡ ಕೊಲಂತ್ತಾಡಿ ವಂದಿಸಿದರು. ವಾಸುದೇವ ಗೌಡ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಮಾಜ ಭಾಂದವರಿಗೆ ವಿವಿಧ ಕ್ರೀಡಾ ಸ್ಪರ್ಧೆ ನಡೆಯಿತು.
























